Ad Widget

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಜಂಟಿ ಆಶ್ರಯದಲ್ಲಿ 5 ನೇ ವರ್ಷದ ಗೋಪೂಜೆ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ , ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ಜಂಟಿ ಆಶ್ರಯದಲ್ಲಿ 5 ನೇ ವರ್ಷದ ಗೋಪೂಜೆ ಕಾರ್ಯಕ್ರಮವು ವಿನುತ ಪಾತಿಕಲ್ಲು ಇವರ ಮನೆಯಲ್ಲಿ ನಡೆಯಿತು.ಪಾತಿಕಲ್ಲು ಕುಟುಂಬದ ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪ್ರವೀಣ್ ಜಯನಗರ , ಕಾರ್ಯದರ್ಶಿ ಗುರುರಾಜ್ ಅಜ್ಜಾವರ , ಕೋಶಾಧಿಕಾರಿ ದಯಾನಂದ ಪಾತಿಕಲ್ಲು , ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ , ನಿರ್ದೇಶಕ ಪ್ರಸಾದ್ ಕಾಟೂರು , ಹಾಗೂ ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷರು ಸರೋಜಿನಿ ಮಾವಂಜಿ , ಕಾರ್ಯದರ್ಶಿ ಮೋಹಿನಿ ಮಂಡೆಕೋಲು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

ಗೋವುಗಳಿಗೆ ಅಲಂಕಾರ ಮಾಡಿ ಆರತಿ ಮಾಡಿ ದೀಪಾವಳಿಯಲ್ಲಿ ಗೋವುಗಳಿಗೆ ಕೊಡುವ ಆಹಾರವನ್ನು ಕೊಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರವೀಣ್ ಜಯನಗರ ವಹಿಸಿದ್ದರು. ಮೋಹಿನಿ ಮಂಡೆಕೋಲು ಸ್ವಾಗತಿಸಿದರು.ವಿನುತ ಪಾತಿಕಲ್ಲು ಪ್ರಸ್ತಾವನೆಯೊಂದಿಗೆ ಗೋಪೂಜೆಯ ಮಹತ್ವವನ್ನು ತಿಳಿಸಿದರು. ಸ್ವಾತಿ ಉಗ್ರಣಿಮನೆ ದೇಶಭಕ್ತಿ ಗೀತೆ ಹಾಡಿದರು ತಿರುಮಲೇಶ್ವರಿ ಪಾತಿ ಕಲ್ಲು ಶ್ಲೋಕ ಅಮೃತವಚನ ಹೇಳಿದರು. ವಸಂತಿ ಉಗ್ರಾಣಿಮನೆ ನಿರೂಪಣೆ ಹಾಗೂ.ಜಾನಕಿ ಕನೆಮರಡ್ಕ ಎಲ್ಲರಿಗೂ ಧನ್ಯವಾದ ಹೇಳಿದರು. ಸಹಭೋಜನ ದೊಂದಿಗೆ ಕಾರ್ಯಕ್ರಮ ವಿಶೇಷವಾಗಿ ನೆರವೇರಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading