ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಡಿಜಿಟಲ್ ಸೇವಾಕೇಂದ್ರವು ಅ.11 ರಂದು ಕಲ್ಮಕಾರಿನಲ್ಲಿ ಉದ್ಘಾಟನೆಗೊಂಡಿತು.
ಕಲ್ಮಕಾರು ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ರಾಧಾಕೃಷ್ಣ.ಕೆ.ಎಸ್ ಇವರು ಸೇವಾಕೇಂದ್ರವನ್ನು ಉದ್ಘಾಟಿಸಿದರು. ಸೇವಾಕೇಂದ್ರದ ಸಿಬ್ಬಂದಿಯಾದ ನವ್ಯ ಯೋಗೀಶ್ ಕೊಪ್ಪಡ್ಕ ಇವರಿಗೆ ಕಲ್ಮಕಾರು ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಲ್ಯಾಪ್ ಟಾಪ್ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ರಾಜೇಶ್.ಕೆ, ಸಿ.ಎಸ್.ಸಿ ವಿಭಾಗದ ಮೇಲ್ವಿಚಾರಕರಾದ ಪ್ರಶಾಂತ್, ಕಲ್ಮಕಾರು “ಎ” ಮತ್ತು “ಬಿ” ಒಕ್ಕೂಟದ ಸೇವಾಪ್ರತಿನಿಧಿಗಳಾದ ಸಾವಿತ್ರಿ ಹಾಗೂ ಸುಶ್ಮಿತಾ, ಪದ್ಮಾವತಿ, ನಗದು ಸಹಾಯಕರಾದ ಪವನ ಇವರುಗಳು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ