- Friday
- November 1st, 2024
ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅ.02 ರಂದು ಗಾಂಧಿ ಜಯಂತಿ ಗ್ರಾಮ ಸಭೆ ಹಾಗೂ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಪಂಚಾಯತ್ ಘನತ್ಯಾಜ್ಯ ಘಟಕದ ಸಿಬ್ಬಂದಿಗಳಿಗೆ ಸರಕಾರದ ಅನುದಾನದಿಂದ ಬಂದ ಸಮವಸ್ತ್ರವನ್ನು ವಿತರಿಸಲಾಯಿತು....
ಜಾಲ್ಸೂರಿನ ಸಫಿಕ್ ಕಾಂಪ್ಲೆಕ್ಸ್‌ನಲ್ಲಿ ಜನನಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಅ. 3 ರಂದು ಶುಭಾರಂಭಗೊಂಡಿತು. ವಿಶ್ವೇಶ್ವರ ಪುರೋಹಿತ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮನೆಯವರು, ಊರಿನವರು ಉಪಸ್ಥಿತರಿದ್ದರು. ನಮ್ಮಲ್ಲಿ ಪೈಬರ್ ಡೋರ್, ಪ್ಲಸ್ ಡೋರ್, ಫೈವುಡ್ ಡೋರ್, ಮರದ ಡೋರ್, ಡಿಜಿಟಲ್ ಡೋರ್ ಹಾಗೂ ಎಲ್ಲಾ ತರದ ಅಲ್ಯೂಮಿನಿಯಂ ಕೆಲಸಗಳನ್ನು ಮಾಡಿಕೊಡುತ್ತೇವೆ ಎಂದು ಮ್ಹಾ.ಮನೋಜ್ ಅವರು ತಿಳಿಸಿದ್ದಾರೆ.
ಬೆಳ್ಳಾರೆ ಅಮ್ಮ ಮೋಟಾರ್ ವರ್ಕ್ಸ್ ಸ್ಥಳಾಂತರಗೊಂಡು ಮಣಿಕ್ಕಾರ ಕಾಂಪ್ಲೆಕ್ಸ್ ಹಿಂದುಗಡೆ ಅ.4 ರಂದು ಆಯುಧಪೂಜೆಯೊಂದಿಗೆ ಶುಭಾರಂಭಗೊಳ್ಳಲಿದೆ. ಈ ಶುಭಾರಂಭಕ್ಕೆ ತಾವೆಲ್ಲರೂ ಬಂದು ದೇವರ ಪ್ರಸಾದ ಸ್ವೀಕರಿಸುವಂತೆ ಮಾಲೀಕರಾದ ದಾಮೋದರ ಪಾಲೆಪ್ಪಾಡಿ, ನವೀನ ಕುಮಾರ್, ರಾಮಕುಮೋರ್ ತಿಳಿಸಿದ್ದಾರೆ.
ನಿಂತಿಕಲ್ಲಿನ ಸದನ ಸಹಕಾರ ಸೌಧದಲ್ಲಿ ವಕೀಲರು ಮತ್ತು ದಸ್ತಾವೇಜು ಸಲಹೆಗಾರರ ಕಛೇರಿ ಅ. 5 ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ವಕೀಲರಾದ ಹರ್ಷಿತ್ ಕಾರ್ಜ, ಹರ್ಷಿತ್ ಎಚ್.ಗೋಳಿಕಟ್ಟೆ ಹಾಗೂ ಶ್ರೀಮತಿ ಪ್ರಿಯಾ ಮಹೇಶ್ ರವರು ಕಾನೂನು ಸೇವೆಗಳಿಗೆ ಲಭ್ಯವಿರುವರು.
ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 04 ಮಂಗಳವಾರದಂದು ಆಯುಧ ಪೂಜೆ ಆಚರಿಸಲಾಗುವುದು. ಬೆಳಿಗ್ಗೆ 8:30 ಕ್ಕೆ ತೆನೆ ಕಟ್ಟುವುದು ಮತ್ತು ಮದ್ಯಾಹ್ನ ಹೊಸ್ತರೋಗಣೆ ನಡೆಯಲಿದೆ. ಹಾಗೂ ರಾತ್ರಿ 7:00 ಗಂಟೆಗೆ ದುರ್ಗಾಪೂಜೆ ಜರಗಲಿರುವುದು.ಬೆಳಿಗ್ಗೆ 8:30 ಕ್ಕೆ ಭಕ್ತಾದಿಗಳಿಗೆ ತೆನೆ ಹಂಚುವುದು. ಆಯುಧ ಪೂಜೆಯು ಬೆಳಿಗ್ಗೆಯಿಂದ ಮದ್ಯಾಹ್ನ ತನಕ ಹಾಗೂ ಸಾಯಂಕಾಲ ನಡೆಯಲಿದೆ. ವರದಿ...
ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಗಾಂಧಿಜಯಂತಿಯನ್ನು ಆಚರಿಸಲಾಯಿತು. ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಮಹಾತ್ಮಾ ಗಾಂಧಿ ಜೀಯವರ ಪೋಟೋ ಕ್ಕೆ ಪುಷ್ಪಾರ್ಚನೆ ಮೂಲಕ ಗಾಂಧಿಜಯಂತಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ, ಮಾತನಾಡಿದರು. ಶಿಕ್ಷಕರಾದ ಜಯಲತಾ ಕೆ.ಆರ್, ಮೀನಕುಮಾರಿ, ಸವಿತಾ ಕುಮಾರಿ, ಸಿಬ್ಬಂದಿ ಬೇಬಿ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ ಸ್ವಚ್ಚತೆ ಬಗ್ಗೆ ಪ್ರತಿಜ್ಞೆ ವಿಧಿ...
ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ಮತ್ತು ಯುವಕ ಮಂಡಲ ( ರಿ.) ಮಡಪ್ಪಾಡಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸಾರ್ವಜನಿಕ ಆಯುಧ ದುರ್ಗಾ ಪೂಜೆ ಮತ್ತು ವಾಹನ ಪೂಜೆ ಅ.2 ರಂದು ಮಡಪ್ಪಾಡಿ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಯುವಕ ಮಂಡಲ ಅಧ್ಯಕ್ಷರು ಮತ್ತು...