ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಮಂಡೆಕೋಲು ಗ್ರಾಮದ ಕೇನಾಜೆಯ ಪೋಕರ್ ಕುಂಇ್ ಮೃತರಾದವರೆಂದು ತಿಳಿದು ಬಂದಿದೆ
ಮಧ್ಯಾಹ್ನ ಸುಮಾರಿಗೆ ಪೋಕರ್ ಕುಂಇ್ ಅವರು ಕಾರಿನಲ್ಲಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ತಾಗಿ ಮುಂದಕ್ಕೆ ಬಂದು ಮತ್ತೊಂದು ಕಾರಿಗೆ ತಾಗಿ ನಿಂತಿತು. ಅವರು ಕಾರಿನ ಸ್ಟೇರಿಂಗ್ ಗೆ ತಲೆ ತಗ್ಗಿಸಿ ಬಿದ್ದಿದ್ಸರು. ಇದನ್ನು ನೋಡಿದ ಸ್ಥಳೀಯ ತರಕಾರಿ ಅಂಗಡಿ ಯವರು ಬಂದು ಕಾರಿನನ್ನು ನಿಲ್ಲಿಸಿ ಅವರ ರಕ್ಷಣೆಗೆ ಯತ್ನಿಸಿದರು. ತಕ್ಷಣ ಅಲ್ಲಿದ್ದವರೆಲ್ಲಾ ಸೇರಿ ಪೋಕರೆ ಕುಂಞಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ.