Ad Widget

ಸುಳ್ಯ ಸಂಪೂರ್ಣ ಲಾಕ್ ಡೌನ್ – ಸರಳವಾಗಿ ಈದ್ ಆಚರಣೆಗೆ ಮುಸಲ್ಮಾನ ಬಾಂಧವರ ನಿರ್ಧಾರ

ಸರ್ಕಾರದ ಆದೇಶದ ಹಿನ್ನೆಲೆ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗಿನ ಜಾವ 7ರವರೆಗೆ ಸಂಪೂರ್ಣ ಲಾಕ್ ಡೌನ್. ಅಲ್ಲಲ್ಲಿ ತರಕಾರಿ ಅಂಗಡಿ ಮತ್ತು ಮೆಡಿಕಲ್, ಹಾಲಿನ ಅಂಗಡಿ ಇವುಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ಸುಳ್ಯದಲ್ಲಿ ಅಷ್ಟಾಗಿ ಕಂಡು ಬರುತ್ತಿಲ್ಲ. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಸುಳ್ಯ ನಗರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಮುಸಲ್ಮಾನ ಬಾಂಧವರು ಈದ್ ಆಚರಣೆಯ ದಿನವಾಗಿದ್ದು ಎಲ್ಲಾ ಮುಸಲ್ಮಾನ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಈದ್ ನಮಾಜ್ ನೆರವೇರಿಸಿ ಸರಳತೆಯಿಂದ ಆಚರಿಸಿಕೊಂಡರು. ಸುಳ್ಯದ ಎಲ್ಲಾ ಮಸೀದಿ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಇಂದಿನ ಲಾಕ್ ಡೌನ ಗೆ ಸುಳ್ಯದ ಜನತೆ ಸಂಪೂರ್ಣವಾಗಿ ಸಹಕಾರವನ್ನು ನೀಡಿರುವುದು ಕಂಡುಬರುತ್ತಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!