ಕೋಲ್ಚಾರು ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿ ಸಭೆ ಮತ್ತು ಸಮಿತಿಯ ಪುನರ್ ರಚನೆ ಕಾರ್ಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುದರ್ಶನ್ ಪಾತಿಕಲ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ದಿನೇಶ್ ಕಣಕ್ಕೂರು, ಶಾಲಾ ಮುಖ್ಯ ಅಧ್ಯಾಪಕಿ ಯಶೋದ, ಅಂಗನವಾಡಿ ಶಿಕ್ಷಕಿ ರತ್ನಾವತಿ ವಾಲ್ತಾಜೆ ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಸುದರ್ಶನ್ ಪಾತಿಕಲ್ಲು ರವರನ್ನು ಮುಂದುವರಿಸಲಾಯಿತು. ಉಪಾಧ್ಯಕ್ಷರಾಗಿ ಹೇಮಾವತಿ ಕೊಯಿಂಗಾಜೆ, ಸದಸ್ಯರಾಗಿ ಕರುಣಾಕರ, ಜಗದೀಶ್, ಚಂದ್ರಶೇಖರ, ಅಬ್ದುಲ್ ರೌಪ್, ಮಹಮ್ಮದ್ ಕುಂಞಿ, ಚಂದ್ರಾವತಿ, ಸರೋಜ, ವಸಂತಿ, ಪಾತಿಮಾ, ಸೌಝಿಯಾ, ಅಶ್ವಿತಾ ಎಂ ಎಸ್, ಹೇಮಾವತಿ, ತಾರಾಕುಮಾರಿ, ದೇವಕಿ, ವಿನೋದ ಕುಮಾರಿ, ಲಲಿತ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಶಾಲೆಯ ಪೋಷಕರುಗಳು ಹಾಜರಿದ್ದರು. ವಿಧ್ಯಾರ್ಥಿ ಶ್ರೀವತ್ಸ ಪ್ರಾರ್ಥಿಸಿದರು ಶಿಕ್ಷಕಿಯರಾದ ನಾಗವೇಣಿ ವಂದಿಸಿದರು, ವಿಜಯಲಕ್ಷ್ಮಿ ಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024