ಸುಳ್ಯ ನಗರ ಪಂಚಾಯತಿಗೆ ಸ್ವಚ್ಛತೆಯ ನಿರ್ವಹಣೆಗಾಗಿ ಇನ್ನೆರಡು ವಾಹನಗಳು ಆಗಮಿಸಿದ್ದು ಟಾಟಾ ಕಂಪೆನಿಯ ಪಿಕಪ್ ಮತ್ತು ಟಾಟಾ 407 ವಾಹನ ಇಂದು ಸುಳ್ಯ ನಗರ ಪಂಚಾಯಿತಿಗೆ ಹಸ್ತಾಂತರಗೊಂಡವು. ಟಾಟಾ ವಾಹನಗಳ ಅಧಿಕೃತ ಮಾರಾಟಗಾರರು ಆದ ಅರವಿಂದ್ ಮೋಟಾರ್ಸ್ ಸಂಸ್ಥೆಯ ಪ್ರತಿನಿಧಿಗಳು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗೂ ಮುಖ್ಯಾಧಿಕಾರಿ ಕುಮಾರಸ್ವಾಮಿ ಅವರಿಗೆ ವಾಹನದ ಕೀ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ ಸದಸ್ಯರಾದ ಸುಧಾಕರ್, ಶೀಲಾವತಿ, ಶಶಿಕಲಾ ನೀರಬಿದಿರೆ, ಶಿಲ್ಪ ಸುದೇವ್, ಕಿಶೋರಿ ಶೇಟ್ , ಇಂಜಿನಿಯರ್ ಶಿವಕುಮಾರ್, ಆರೋಗ್ಯ ನಿರೀಕ್ಷಕ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.
ಕಳೆದ ತಿಂಗಳು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಸುಳ್ಯ ಪಟ್ಟಣ ಪಂಚಾಯಿತಿಗೆ ತ್ಯಾಜ್ಯ ನಿರ್ವಹಣೆಗೆ 28 ಲಕ್ಷ ರೂ ವೆಚ್ಚದಲ್ಲಿ ಜೆಸಿಬಿ ಯಂತ್ರವು ಹಸ್ತಾಂತರಗೊಂಡಿತ್ತು.