ರೈತರ ಹೋರಾಟ ರೈತರ ಹಕ್ಕಿಗಾಗಿಯೇ ಹೊರತು ರಾಜಕೀಯ ಪಕ್ಷಕ್ಕಾಗಿ ಅಲ್ಲ. ರೈತರ ಬಗ್ಗೆ ಮಾತನಾಡುವ ನೈತಿಕತೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವರಿಗೆ ಇಲ್ಲ – ಲೋಲಜಾಕ್ಷ ಭೂತಕಲ್ಲು

ದೇಶದಾದ್ಯಂತ ರೈತರ ಪ್ರತಿಭಟನೆ ರೈತರ ಹಕ್ಕಿಗಾಗಿ ನಡೆಯುತ್ತಿದ್ದು, ಆಡಳಿತ ಪಕ್ಷದಲ್ಲಿ ಇರುವ ರೈತ ಸಂಘಟನೆಯವರು ರೈತ ಮೋರ್ಚಾದ ಹೆಸರಿನಲ್ಲಿ ಪ್ರಾಮಾಣಿಕ ರೈತರನ್ನು ಕಡೆಗಣಿಸುವುದು ಸರಿಯಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇವರು ರೈತರ ಬಗ್ಗೆ ಮಾತನಾಡುವ ನೈತಿಕತೆ ಇವರಲ್ಲಿ ಇಲ್ಲ ಎಂದು ಹಸಿರು ಸೇನೆ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು  ಸುಳ್ಯದಲ್ಲಿ ಡಿ.12 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಬಗ್ಗೆ ಮಾತನಾಡಿದ ಅವರು ಒಂದು ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಜೆಪಿಗೆ ಬೆನ್ನಿಗೆ ಚೂರಿ ಹಾಕಿದವರು ಎಂದು ಹೇಳುತ್ತಿದ್ದರು. ಇದೀಗ ಕುಮಾರಸ್ವಾಮಿಯವರನ್ನು ಒಳ್ಳೆಯವರೆಂದು ಬಿಜೆಪಿಯವರು ಪ್ರತಿಪಾದಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆಗೆ ತೆರಳುವ ಮುನ್ನ ರೈತರಿಗೆ ಜಯಕಾರ ವನ್ನು ಹಾಕಿ ಸದನದ ಒಳಗೆ ಹೋದನಂತರ ರೈತರ  ವಿರೋಧದ ಮಸೂದೆಗೆ ಬೆಂಬಲ ನೀಡುವ ಇವರನ್ನು ಜನ ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ನಾನು ಸಂಪೂರ್ಣವಾಗಿ ರೈತರ ಪರವಾಗಿ ನಿಲ್ಲುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನಂತರ ರೈತರ ಸರ್ವಸ್ವವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತುರ ಪಡುತ್ತಿದ್ದಾರೆ ಎಂದು ಹೇಳಿದರು. ಕಾರ್ಪೋರೇಟರ್ ಗಳನ್ನು ದತ್ತುಪುತ್ರ ರನ್ನಾಗಿ ಮಾಡಿಸಿಕೊಂಡು   ದೇಶದ ಸಂಪತ್ತನ್ನು ಅವರ ಕೈಯಲ್ಲಿ ಕೊಡಲು ಮುಂದಾಗಿರುವುದು ದೇಶದ ದುರದೃಷ್ಟವಾಗಿದೆ. ಮೋದಿಯವರನ್ನು ದೇವತಾ ಸ್ವರೂಪವೆಂದು ಭಾವಿಸಿದ ಜನತೆಗೆ ಅವರು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರು.ಇವೆಲ್ಲವನ್ನು ನೋಡಿ ಕಾಂಗ್ರೆಸ್ ಪಕ್ಷ ಕೈ ಕಟ್ಟಿ ಕುಳಿತಿದೆ. ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳುವ ಇವರು  ನಿಜವಾದ ದಲ್ಲಾಳಿಗಳು. ರೈತರುಗಳು ನ್ಯಾಯಕ್ಕಾಗಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ ಅವರನ್ನು ಗೃಹಬಂಧನದಲ್ಲಿ ಇಡಲು ಸರಕಾರಗಳು ಮುಂದಾಗಿರುತ್ತಾರೆ. ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರೈತಮೋರ್ಚ ನಾಯಕರು ಕೃಷಿ ಮಸೂದೆ ತಿದ್ದುಪಡಿ ಕಾಯ್ದೆಗೆ 2014 ರಲ್ಲಿ ಚರ್ಚೆ ನಡೆಸಲಾಯಿತು ಎಂದು ಹೇಳಿದರು. ಹಾಗಿದ್ದರೆ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಯಾಗಿದ್ದಾಗ ಜಾರಿಗೆ ತರಬೇಕಾಗಿತ್ತು. ಅಡ್ವಾಣಿಯವರನ್ನು ರಾಷ್ಟ್ರಪತಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬಹುದಿತ್ತು. ಆದರೆ ದೇಶ ಲಾಕ್ಡೌನ್ ಗೊಂಡ ಸಂದರ್ಭದಲ್ಲಿ ದೇಶದ ಜನತೆಯನ್ನು ಕತ್ತಲೆಯಲ್ಲಿ ಇರಿಸಿ ಮಸೂದೆ ಅಂಗೀಕಾರ ಮಾಡಿರುವುದು ಇವರ ರಾಜಕೀಯ ಕುತಂತ್ರ ಎಂದು ಹೇಳಿದರು. ರೈತರ ಬಗ್ಗೆ ಕಾಳಜಿ ಇರುವ ಇವರು ಮೊದಲು ರೈತರ ಸಾಲ ಮನ್ನಾದ ಬಗ್ಗೆ ಕಾಳಜಿ ವಹಿಸಲಿ ಎಂದು ತೀರ್ಥರಾಮ ಉಳುವಾರು ಹೇಳಿದರು ‌. ರೈತರ ಹಿತವನ್ನು ಕಾಪಾಡಲು ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವಂತೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಭರತ್ ಕುಮಾರ್, ಮುಖಂಡರಾದ ದಿವಾಕರ ಪೈ, ಮಂಜುನಾಥ್ ಮಡ್ತಿಲ, ದಾಮೋದರ ಗೌಡ, ಸುಳ್ಯ ಕೋಡಿ ಮಾಧವ ಗೌಡ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading