“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜು.06)ದಿಂದ ಶನಿವಾರ(ಜು.11)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ರಬ್ಬರ್‌ನ ಎಲ್ಲಾ ವಿಭಾಗಗಳಲ್ಲೂ ಭರ್ಜರಿ ಏರಿಕೆ..! ; ಹೊಸ ಅಡಿಕೆ ಹಾಗೂ ಕೊಬ್ಬರಿ ದರ ಜಿಗಿತ..!! ; ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆ ಹೇಗಿತ್ತು..!? – ಇಲ್ಲಿದೆ ಸಂಪೂರ್ಣ ವಿವರ…

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜುಲೈ 06 ಸೋಮವಾರದಿಂದ ಜುಲೈ 11 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ವಾರದ ಆರಂಭದಲ್ಲಿ ಅಂದರೆ ಜುಲೈ 06 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 335 ರಿಂದ ಗರಿಷ್ಠ 380 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 260 ರಿಂದ ಗರಿಷ್ಠ 280 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 235 ರಿಂದ ಗರಿಷ್ಠ 265 ರೂಪಾಯಿ ಇತ್ತು. ಜುಲೈ 07 ಮಂಗಳವಾರದಂದು ಸಂಪೂರ್ಣ ಸ್ಥಿರವಾಗಿದ್ದ ಅಡಿಕೆ ಧಾರಣೆಯಲ್ಲಿ ಜುಲೈ 08 ಬುಧವಾರದಂದು ಸಣ್ಣ ಮಟ್ಟದ ಚಲನವಲನ ಕಂಡುಬಂದಿದ್ದು, ಹೊಸ ಅಡಿಕೆ ಬೆಲೆಯಲ್ಲಿ ಪ್ರತೀ ಕೆಜಿಗೆ 5 ರೂಪಾಯಿಗಳಷ್ಟು ಚೇತರಿಕೆ ದಾಖಲಾಗಿದ್ದರೆ, ಅಡಿಕೆಯ ಉಳಿದ ಪ್ರಮುಖ ಹಾಗೂ ಉಪ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿರಲಿಲ್ಲ. ಜುಲೈ 09 ಗುರುವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೇ ವಹಿವಾಟು ಶಾಂತವಾಗಿ ಮುಂದುವರಿದಿದ್ದು, ಜುಲೈ 10 ಶುಕ್ರವಾರದಂದು ಹಾಗೂ ವಾರದ ಕೊನೆಯ ದಿನವಾದ ಜುಲೈ 11 ಶನಿವಾರದಂದು ಕೂಡ ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಅಡಿಕೆಯ ಎಲ್ಲಾ ಉಪ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ಏರಿಳಿತ ದಾಖಲಾಗಿರಲಿಲ್ಲ. ಅಂತಿಮವಾಗಿ ವಾರಾಂತ್ಯದಲ್ಲಿ ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 335 ರಿಂದ ಗರಿಷ್ಠ 380 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 260 ರಿಂದ ಗರಿಷ್ಠ 280 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 235 ರಿಂದ ಗರಿಷ್ಠ 265 ರೂಪಾಯಿಗಳಿಗೆ ಬಂದು ತಲುಪಿತ್ತು.

ಇನ್ನು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಆರಂಭದಲ್ಲಿ ಅಂದರೆ ಜುಲೈ 06 ಸೋಮವಾರದಂದು ಕಾಳುಮೆಣಸು ಕನಿಷ್ಠ 580 ರಿಂದ ಗರಿಷ್ಠ 670 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 130 ರಿಂದ ಗರಿಷ್ಠ 155 ರೂಪಾಯಿ ಇತ್ತು. ಜುಲೈ 07 ಮಂಗಳವಾರದಂದು ಕ್ಯಾಂಪ್ಕೋ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಏರಿಳಿತಗಳಿಲ್ಲದೇ ಶಾಂತ ವಾತಾವರಣ ಕಂಡುಬಂದಿದ್ದು, ಜುಲೈ 08 ಬುಧವಾರದಂದು ಹಾಗೂ ಜುಲೈ 09 ಗುರುವಾರದಂದು ಕೂಡ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆಯ ವಾತಾವರಣ ಕಂಡುಬಂದಿತ್ತು. ಜುಲೈ 10 ಶುಕ್ರವಾರದಂದು ಕ್ಯಾಂಪ್ಕೋ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊಬ್ಬರಿ ಬೆಲೆಯಲ್ಲಿ ಪ್ರತೀ ಕೆಜಿಗೆ ಕನಿಷ್ಠ ದರದಲ್ಲಿ 8 ರೂಪಾಯಿ ಹಾಗೂ ಗರಿಷ್ಠ ದರದಲ್ಲಿ 3 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಆದರೆ ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿರಲಿಲ್ಲ. ಇನ್ನು ವಾರದ ಕೊನೆಯ ದಿನವಾದ ಜುಲೈ 11 ಶನಿವಾರದಂದು ಕ್ಯಾಂಪ್ಕೋ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಂಪೂರ್ಣ ಶಾಂತ ವಾತಾವರಣ ಕಂಡುಬಂದಿದ್ದು, ಹಿಂದಿನ ದಿನವಷ್ಟೇ ಚೇತರಿಕೆ ಕಂಡುಬಂದಿದ್ದ ಕೊಬ್ಬರಿ ಸೇರಿದಂತೆ ಕಾಳುಮೆಣಸು ಮತ್ತು ಕೊಕ್ಕೋ ಬೆಳೆಗಳ ಧಾರಣೆಗಳಲ್ಲಿ ಯಾವುದೇ ರೀತಿಯ ಏರಿಳಿತಗಳು ದಾಖಲಾಗಿರಲಿಲ್ಲ. ಅಂತಿಮವಾಗಿ ವಾರಾಂತ್ಯದಲ್ಲಿ ಕಾಳುಮೆಣಸು ಕನಿಷ್ಠ 580 ರಿಂದ ಗರಿಷ್ಠ 670 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 138 ರಿಂದ ಗರಿಷ್ಠ 158 ರೂಪಾಯಿಗಳಿಗೆ ಬಂದು ತಲುಪಿತ್ತು.

ಇನ್ನು ಕೊನೆಯದಾಗಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ವಾರದ ಆರಂಭದಲ್ಲಿ ಅಂದರೆ ಜುಲೈ 06 ಸೋಮವಾರದಂದು ಗ್ರೇಡ್ ರಬ್ಬರ್ 265.5 ರೂಪಾಯಿ, ಲಾಟ್ ರಬ್ಬರ್ 225.5 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 157.5 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 148.5 ರೂಪಾಯಿ ಇತ್ತು. ಜುಲೈ 07 ಮಂಗಳವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಚಲನೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಬೆಲೆಯಲ್ಲಿ 1.50 ರೂಪಾಯಿ, ಲಾಟ್ ರಬ್ಬರ್ ಬೆಲೆಯಲ್ಲಿ 2.50 ರೂಪಾಯಿ, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸ್ಕ್ರ್ಯಾಪ್ ಬೆಲೆಯಲ್ಲಿ ತಲಾ 1.50 ರೂಪಾಯಿಗಳಷ್ಟು ಏರಿಕೆ ದಾಖಲಾಗಿತ್ತು. ಜುಲೈ 08 ಬುಧವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಸಕಾರಾತ್ಮಕ ಏರಿಕೆಯ ಹಾದಿ ಮುಂದುವರಿದಿದ್ದು, ಗ್ರೇಡ್, ಲಾಟ್, ಸ್ಕ್ರ್ಯಾಪ್ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಎಲ್ಲಾ ವಿಭಾಗಗಳಲ್ಲೂ ತಲಾ 2 ರೂಪಾಯಿಗಳಷ್ಟು ಏರಿಕೆ ದಾಖಲಾಗಿತ್ತು. ಜುಲೈ 09 ಗುರುವಾರದಂದು ಕೂಡ ಗ್ರೇಡ್ ರಬ್ಬರ್ ಬೆಲೆಯಲ್ಲಿ 1 ರೂಪಾಯಿ, ಲಾಟ್ ರಬ್ಬರ್ ಬೆಲೆಯಲ್ಲಿ 2 ರೂಪಾಯಿ, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸ್ಕ್ರ್ಯಾಪ್ ಬೆಲೆಯಲ್ಲಿ ತಲಾ 1 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಜುಲೈ 10 ಶುಕ್ರವಾರದಂದು ಸತತ ನಾಲ್ಕನೇ ದಿನವೂ ಕೂಡ ಗ್ರೇಡ್ ರಬ್ಬರ್ ಹಾಗೂ ಲಾಟ್ ರಬ್ಬರ್ ಬೆಲೆಯಲ್ಲಿ ತಲಾ 2 ರೂಪಾಯಿ, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸ್ಕ್ರ್ಯಾಪ್ ಬೆಲೆಯಲ್ಲಿ ತಲಾ 1 ರೂಪಾಯಿಗಳಷ್ಟು ಏರಿಕೆ ದಾಖಲಾಗಿತ್ತು. ಇನ್ನು ವಾರದ ಕೊನೆಯ ದಿನವಾದ ಜುಲೈ 11 ಶನಿವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಸಕಾರಾತ್ಮಕ ಏರಿಕೆಯ ದಾಖಲೆ ಮುಂದುವರೆದಿದ್ದು, ಗ್ರೇಡ್, ಲಾಟ್, ಸ್ಕ್ರ್ಯಾಪ್ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಎಲ್ಲಾ ವಿಭಾಗಗಳಲ್ಲೂ ತಲಾ 1 ರೂಪಾಯಿಗಳಷ್ಟು ಏರಿಕೆ ದಾಖಲಾಗಿತ್ತು. ಅಂತಿಮವಾಗಿ ವಾರಾಂತ್ಯದಲ್ಲಿ ಗ್ರೇಡ್ ರಬ್ಬರ್ 273 ರೂಪಾಯಿ, ಲಾಟ್ ರಬ್ಬರ್ 235 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 164 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 155 ರೂಪಾಯಿಗಳಿಗೆ ಬಂದು ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ರಬ್ಬರ್ ತನ್ನೆಲ್ಲಾ ವಿಭಾಗಗಳಲ್ಲೂ ವಾರಪೂರ್ತಿ ನಿರಂತರವಾಗಿ ಏರಿಕೆಯ ಹಾದಿಯಲ್ಲೇ ಸಾಗಿದ್ದು, ಅಡಿಕೆ ಧಾರಣೆಯಲ್ಲಿ ವಾರದ ಮಧ್ಯದಲ್ಲೊಮ್ಮೆ ಹೊಸ ಅಡಿಕೆ ದರದಲ್ಲಿ ಚೇತರಿಕೆ ಕಂಡುಬಂದಿದ್ದು, ಉಳಿದಂತೆ ಅಡಿಕೆಯ ಎಲ್ಲಾ ವಿಭಾಗಗಳಲ್ಲೂ ವಾರಪೂರ್ತಿ ಸಂಪೂರ್ಣ ಸ್ಥಿರತೆಯ ವಾತಾವರಣ ಕಂಡುಬಂದಿತ್ತು. ಇನ್ನು ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಯಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆಯ ವಾತಾವರಣ ಕಂಡುಬಂದಿದ್ದರೆ ಕೊಬ್ಬರಿ ಧಾರಣೆಯು ವಾರಾಂತ್ಯದಲ್ಲಿ ಏರಿಕೆಯ ಹಾದಿ ಹಿಡಿದು ಸ್ಥಿರತೆಯ ಕಡೆಗೆ ನಡೆದಿತ್ತು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಜುಲೈ 06 ರಿಂದ ಜುಲೈ 11) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತಿದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading