ಗಾಂಧಿನಗರ : ಎಂ.ಕೆ. ಕನ್ಸಲ್ಟೆಂಟ್ಸ್ ಕಚೇರಿ ಶುಭಾರಂಭ

ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ರವರ ಮಾಲಕತ್ವದ ಎಂಕೆ ಕನ್ಸಲ್ಟೆಂಟ್ ಕಚೇರಿ ಗಾಂಧಿನಗರ ಗ್ಲೋಬಲ್ ಟವರ್ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸೈಯದ್ ಜೈನುಲ್ ಅಬಿದಿನ್ ತಂಙಳ್ ಜಯನಗರ ದುವಾ ನೆರವೇರಿಸಿದರು. ನೂತನ ಸಂಸ್ಥೆಯನ್ನು ಸುಳ್ಯ ನ ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ , ಹಾಗೂ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಆದಂ ಕುಂಞಿ ಕಮ್ಮಾಡಿ ಉದ್ಘಾಟಿಸಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿಎಂ ಶಹೀದ್ ಶುಭಹಾರೈಸಿ ಮಾತನಾಡಿ ಶರೀಫ್ ಕಂಠಿಯವರು ಬಾಲ್ಯದಿಂದಲೇ ಸಮಾಜಮುಖಿ ಕಾರ್ಯಕ್ರಮಗಳನ್ನು ಮನ ಗುಡಿಸಿಕೊಂಡು ಬಂದು ಇದೀಗ ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಉತ್ತಮ ನಾಯಕರಾಗಿ ಬೆಳೆದು ಬರುತ್ತಿದ್ದಾರೆ. ಮುಂದಿನ ಜೀವನವು ಯಶಸ್ವಿಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಸುಳ್ಯ ನ.ಪಂ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾತನಾಡಿ ಶರೀಫ್ ಕಂಠಿಯವರ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಗೆ ಶುಭಹಾರೈಸಿದರು. ಸುಳ್ಯ ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಮಾತನಾಡಿ ಶರೀಫ್ ರವರ ಕ್ರೀಡಾಕ್ಷೇತ್ರದ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವಾಮನೋಭಾವ, ಹಾಗೂ ಕೊರೋನಾ ಸಂದರ್ಭದಲ್ಲಿ ಸಮಾಜಕ್ಕಾಗಿ ಅವರು ಸಲ್ಲಿಸಿದ ಸೇವೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶರೀಫ್ ಕಂಠೀರವ ರ ಹಿತೈಷಿ ಹನೀಫ್ ಬೀಜಕೊಚ್ಚಿ,ಅಲ್ಪ ಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ನ.ಪ.ಸದಸ್ಯ ಉಮ್ಮರ್ ಕೆ.ಎಸ್., ನ.ಪಂ ಮಾಜಿ ಅಧ್ಯಕ್ಷ ಸಂಶುದ್ದಿನ್, ಅರಂಬೂರು, ವಕೀಲ ಧರ್ಮಪಾಲ ಕೊಯಿಂಗಾಜೆ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೇಕಾರ್ಸ್, ಸಮೀರ್ ಮೊಬೈಲ್ ಹಾರ್ಟ್ಸ್ ಮತ್ತಿತರರು ಉಪಸ್ಥಿತರಿದ್ದರು. ನ ಪಂ ಮಾಜಿ ಸದಸ್ಯ ಹಾಜಿ ಮುಸ್ತಫಾ ಜನತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರೀಪ್ ಕಂಠಿ ವಂದಿಸಿದರು. ಮರ್ಝೋ ಬಾತಿಷ ,ಸವಾದ್ ಸಹಕರಿಸಿದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading