Ad Widget

ಅಮರ ಸುಳ್ಯ ಸುದ್ದಿ ದೀಪಾವಳಿ ವಿಶೇಷಾಂಕ ಮುದ್ದು ಕಂದ ಫೋಟೋ ಸ್ಪರ್ಧೆ- ಪ್ರಥಮ ವಿಜೇತರಿಗೆ ಬಹುಮಾನ ವಿತರಣೆ

ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ವರ್ಷಂಪ್ರತಿ ದೀಪಾವಳಿ ವಿಶೇಷಾಂಕ ಹೊರತರುತ್ತಿದ್ದು ಈ ಬಾರಿ ನಾಲ್ಕನೆಯ ಯಶಸ್ವಿ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆ ಗೊಂಡಿರುತ್ತದೆ. ಈ ವಿಶೇಷಾಂಕದ ಆಕರ್ಷಣೀಯ ಭಾಗದಲ್ಲಿ ಒಂದಾಗಿರುವ ಮುದ್ದು ಕಂದ ಫೋಟೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳ ಫೋಟೋಗಳು ಬಂದಿದ್ದು ಅದರಲ್ಲಿ ಆಯ್ಕೆದಾರರ ಮನಮುಟ್ಟುವಲ್ಲಿ ಮೂವರು ಮಕ್ಕಳ ಫೋಟೋಗಳು ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆದುಕೊಂಡವು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗುರುಗುಂಜ ಮನೆ ಪ್ರದೀಪ್ – ಪ್ರಹೀತಾ ದಂಪತಿಗಳ ಪುತ್ರ ಆರುಶ್ ಪಿ ಜಿ ಪ್ರಥಮ ಬಹುಮಾನ ಪಡೆದುಕೊಂಡರೆ, ದ್ವಿತೀಯ ಬಹುಮಾನ ಸುಳ್ಯ ಕಸಬಾ ಗ್ರಾಮದ ಕುತ್ಪಾಜೆ ನಿವಾಸಿ ಬ್ರಿಜೇಶ್ – ಮಮತಾ ಅವರ ಪುತ್ರ ನಿಧೀಶ್ ಕೆ ಪಡೆದುಕೊಂಡರು. ತೃತೀಯ ಬಹುಮಾನ ಮರಗೋಡು ಗ್ರಾಮದ ಪ್ರದೀಪ್ ಪ್ರಿಯ ದಂಪತಿಗಳ ಪುತ್ರ ಆಯುಷ್ಮಾನ್ ಪಿ ತಮ್ಮದಾಗಿಸಿಕೊಂಡರು. ಈ ಬಹುಮಾನ ಕಾರ್ಯಕ್ರಮದ ಅಂಗವಾಗಿ ಪ್ರಥಮ ಬಹುಮಾನ ಪ್ರಾಯೋಜಕರಾದ ಅವ್ವ ಫ್ಯಾಶನ್ ಮತ್ತು ಕಿಡ್ಸ್ ವೇರ್ ಸಂಸ್ಥೆಯ ಮಾಲಕ ಹನೀಫ್ ಅಲ್ಪ, ಅಬೂಬಕ್ಕರ್ ಪಿ ಎಂ ನವೆಂಬರ್ 19ರಂದು ಪ್ರಥಮ ಬಹುಮಾನ ವಿತರಣಾ ಕಾರ್ಯಕ್ರಮ ರಥಬೀದಿಯ ಅವ್ವ ಫ್ಯಾಷನ್ ಕಿಡ್ಸ್ ವೇರ್ ನಲ್ಲಿ ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಸ್ಥಳೀಯರಾದ ಆಜಾದ್ ವಾಚ್ ವರ್ಕ್ಸ್ ನ ಮಾಲಕ ಬಾಬಾ ಹಾಜಿ, ಎಸ್ಕೆ ಎಂ ರಿಫಾಯಿ ಮೊಗರ್ಪಣೆ, ನಾಸಿರ್ ಕಟ್ಟೆಕಾರ್ಸ್, ಸಾಲಿ ಕಟ್ಟೆಕಾರ್, ಫೋಟೋ ಲ್ಯಾಬ್ ಮಾಲಕ ಚಂದ್ರಶೇಖರ್, ಶಿಯಾಬ್ ಕಟ್ಟೆಕಾರ್ಸ್, ಜಯ ಶಿವಗೌಡ ಮಡಪಾಡಿ, ಪ್ರಹೀತಾ, ಅಮರ ಸುಳ್ಯ ಸುದ್ದಿ ಕಚೇರಿಯ ವ್ಯವಸ್ಥಾಪಕ ವಿಶ್ವನಾಥ ಮೋಟುಕಾನ, ವರದಿಗಾರರಾದ ಜಗದೀಶ್ ಮುಂಡುಗಾರು, ಪದ್ಮನಾಭ ಅರಂಬೂರು, ದಿನೇಶ ಮಠ, ಸೌಮ್ಯ ಬಿ.ವಿ. ಮೊದಲಾದವರು ಉಪಸ್ಥಿತರಿದ್ದರು. ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading