ನ.23ರಂದು ಸುಳ್ಯದಲ್ಲಿ 11 ಕೃತಿಗಳ ಬಿಡುಗಡೆ ಸಮಾರಂಭ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳು ಮತ್ತು ಸಾಧಕರ ಪರಿಚಯ ಮಾಲಿಕೆಯಡಿ ಪ್ರಕಟಗೊಂಡಿರುವ 11 ಕೃತಿಗಳ ಬಿಡುಗಡೆ ಸಮಾರಂಭ ನ. 23ರಂದು ಪೂರ್ವಾಹ್ನ 11.30ಕ್ಕೆ ಸುಳ್ಯದ ಕನ್ನಡ ಭವನದಲ್ಲಿ ನಡೆಯಲಿದೆ.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲಿದ್ದು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ.

. . . . . . .

ಎಂಟು ಸಾಹಿತಿಗಳ ಪರಿಚಯ ಕೃತಿಗಳು : ಸಾಹಿತ್ಯ ಕ್ಷೇತ್ರದ ಎಂಟು ಗಣ್ಯರ ಪರಿಚಯ ಕೃತಿಗಳು ಬಿಡುಗಡೆಯಾಗಲಿವೆ. ನಂದಕುಮಾರ್ ಸ್ವಾಮಿ ಅವರ ‘ಪ್ರಗತಿಶೀಲ ಬರಹಗಾರ ನಿರಂಜನ’, ದುರ್ಗಾಕುಮಾರ್ ನಾಯರ್ ಕೆರೆ ಅವರ ‘ಸಾಹಿತ್ಯ ಲೋಕದ ಸವ್ಯಸಾಚಿ ಟಿ.ಜಿ. ಮುಡೂರು’, ಕುಮಾರಸ್ವಾಮಿ ತೆಕ್ಕುಂಜ ಅವರ ‘ಸುಮನಸ್ಸಿನ ಪರಿಸರ ಕವಿ ಜಿ.ಎಸ್. ಉಬರಡ್ಕ’, ಚಂದ್ರವತಿ ಬಡ್ಡಡ್ಕ ಅವರ ‘ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ’, ರಾಮಚಂದ್ರ ಪಲ್ಲತ್ತಡ್ಕ ಅವರ ‘ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ (ಕಿರಣ)’, ಸ್ಮಿತಾ ಅಮೃತರಾಜ್ ಅವರ ‘ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ. ಪ್ರಭಾಕರ ಶಿಶಿಲ’, ಲೀಲಾ ದಾಮೋದರ ಅವರ ‘ಜೀವನ್ಮುಖಿ ಅಮ್ಮ ಎಂ.ಜಿ. ಕಾವೇರಮ್ಮ’ ಹಾಗೂ ಯಶ್ವಿತ್ ಕಾಳಮ್ಮನೆ ಅವರ ‘ಹಳಬರ ಜೋಡಿಗೆಯ ಜಯಮ್ಮ ಚಟ್ಟಿಮಾಡ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಮೂರು ಸಾಧಕರ ಪರಿಚಯ ಕೃತಿಗಳು : ಸುಳ್ಯ ತಾಲೂಕಿನ ಸಾಧಕರ ಪರಿಚಯ ಮಾಲಿಕೆಯಡಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರ ‘ವೈದ್ಯಕೀಯ ಕ್ಷೇತ್ರದ ಮೇರು ಸಾಧಕ ಡಾ. ಕೆ.ವಿ. ಚಿದಾನಂದ’, ತೇಜಸ್ವಿ ಕಡಪಲ ಅವರ ‘ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್’ ಹಾಗೂ ಚಂದ್ರಮತಿ ಕೆ. ಅವರ ‘ಸಾಹಿತ್ಯದ ಸಾರಥಿ ಎಂ. ಮೀನಾಕ್ಷಿ ಗೌಡ’ ಕೃತಿಗಳು ಬಿಡುಗಡೆಯಾಗಲಿವೆ.

ಒಟ್ಟು ಎಂಟು ಸಾಹಿತಿಗಳ ಹಾಗೂ ಮೂವರು ಸಾಧಕರ ಪರಿಚಯ ಕೃತಿಗಳು ಸೇರಿದಂತೆ 11 ಕೃತಿಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗಲಿವೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading