ತೋಟಪ್ಪಾಡಿ ಸೇತುವೆ ನಿರ್ಮಾಣ ಸೇರಿದಂತೆ ಮಂಡೆಕೋಲು ಗ್ರಾಮದಲ್ಲಿ ₹1.48 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ – ಗುದ್ದಲಿಪೂಜೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

ತೋಟಪ್ಪಾಡಿ ಸೇತುವೆ ನಿರ್ಮಾಣಕ್ಕೆ 60 ಲಕ್ಷ ಸೇರಿದಂತೆ ಮಂಡೆಕೋಲು ಗ್ರಾಮದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಒಟ್ಟು ₹1.48 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಯಿತು. ಎಲ್ಲಾ ಅಭಿವೃದ್ಧಿ ಕಾಮಗಾರಿ ನಡೆಯುವ ಪ್ರದೇಶಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಬೇಟಿ ನೀಡಿ ಗುದ್ದಲಿಪೂಜೆ ನೆರವೇರಿಸಿದರು.
ಮಂಡೆಕೋಲು-ಕನ್ಯಾನ ರಸ್ತೆಯ ತೋಟಪ್ಪಾಡಿ ಎಂಬಲ್ಲಿ ₹60 ಲಕ್ಷ ವೆಚ್ಚದ ಸೇತುವೆ ನಿರ್ಮಾಣ, ಅಂಬ್ರೋಟಿ-ಉದ್ದಂತಡ್ಕ ರಸ್ತೆಯ ತಡೆಗೋಡೆ ಕಾಮಗಾರಿಗೆ ರೂ 10 ಲಕ್ಷ, ಪೇರಾಲು ಪದವು-ಮೈತ್ರಡ್ಕ ರಸ್ತೆ ಅಭಿವೃದ್ಧಿಗೆ ₹25 ಲಕ್ಷ,, ಮಂಡೆಕೋಲು-ಶಿವಾಜಿನಗರ ರಸ್ತೆ ಅಭಿವೃದ್ಧಿಗೆ ₹11 ಲಕ್ಷ, ಮಂಡೆಕೋಲು-ಕೇನಾಜೆ ರಸ್ತೆಯ ಫಾರೆಸ್ಟ್ ಬಂಗ್ಲೆ ಬಳಿ ರಸ್ತೆ ಅಭಿವೃದ್ಧಿಗೆ ₹10 ಲಕ್ಷ,, ಮುರೂರು-ಮಂಡೆಕೋಲು ರಸ್ತೆಯ ಮುಡೂರು ರಸ್ತೆ ಅಭಿವೃದ್ಧಿಗೆ ₹10 ಲಕ್ಷ, , ಇರುಪಂಬಳ್ಳ ಶಾಲಾ ಬಳಿಯಿಂದ ಪೇರಾಲುಗುತ್ತು-ಕುತ್ಯಾಡಿ ರಸ್ತೆ ಅಭಿವೃದ್ಧಿಗೆ ₹10 ಲಕ್ಷ, ಮಂಡೆಕೋಲು ಬೈಲು-ದೇವಸ್ಥಾನ ರಸ್ತೆ ಅಭಿವೃದ್ಧಿಗೆ ₹6 ಲಕ್ಷ ಹಾಗೂ ಕಲ್ಮಡ್ಕ ಪ.ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ₹6 ಲಕ್ಷ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ..
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಮಂಡಲ ಸಮಿತಿ‌ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಮಂಡಲ ಸಮಿತಿ ಪ್ರ.ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ನಿರ್ದೇಶಕರಾದ ಲಿಂಗಪ್ಪ ಬದಿಕಾನ, ಲಕ್ಷ್ಮಣ ಉಗ್ರಾಣಿಮನೆ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಮಾಜಿ ನಿರ್ದೇಶಕ ರುಕ್ಮಯ್ಯ ಆಲಂಕಲ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಾಜಿ ಸದಸ್ಯರಾದ ದಿವ್ಯಲತಾ ಚೌಟಾಜೆ, ಡಿ.ಸಿ. ಬಾಲಚಂದ್ರ ದೇವರಗುಂಡ, ನವೀನ್ ಮುರೂರು, ಅನಿಲ್ ತೋಟಪ್ಪಾಡಿ, ನಾರಾಯಣ ಕೆದ್ಕಾರ್, ಬೂತ್ ಅಧ್ಯಕ್ಷ ಲೋಕೇಶ್ ಚೌಟಾಜೆ, ಬೂತ್ ಸಮಿತಿ ಕಾರ್ಯದರ್ಶಿ ರಂಜನ್ ಸೊರಂಜ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು,.
ಪ್ರಮುಖರಾದ ಶ್ರೀಧರ್ ಭಟ್ ತೋಟಪ್ಪಾಡಿ, ದಿವಾಕರ ಶಿರಾಜೆ, ಆನಂದ ಬದಿಕಾನ, ಪೊಡಿಯ ಉದ್ದಂತಡ್ಕ, ಸಾವಿತ್ರಿ ಕೆದ್ಕಾರ್, ಸುರೇಶ್ ಚೌಟಾಜೆ, ಮಂಜುನಾಥ ಕುಕ್ಕೆಟ್ಟಿ, ಸುಂದರ ಕಾಡುಸೊರಂಜ, ಹರೀಶ್ ಕುಕ್ಕುಡೇಲು, ವಾಸುದೇವ ಬತ್ಲಿಮನೆ, ರಾಜಣ್ಣ ಪೇರಾಲು ಮನೆ, ಉದಯ ಆಚಾರ್ಯ, ಶಂಕರನಾರಾಯಣ ಕಾರಂತ, ಪ್ರಕಾಶ್ ಕಣೆಮರಡ್ಕ, ಕೃಷ್ಣಪ್ರಸಾದ್, ಗ್ತಾ.ಪಂ.ಮಾಜಿ ಅಧ್ಯಕ್ಷೆ ಮೋಹಿನಿ, ಪ್ರಶಾಂತ್, ಕೇಶವ ಮೂರ್ತಿ ಹೆಬ್ಬಾರ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಪ್ರತಿಮಾ ಮಾವಿನಡಿ, ತಾ.ಪಂ.ಮಾಜಿ ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ರಾಜೇಂದ್ರ ಭಟ್ ಎರ್ಕಾಲ್ ಪ್ಪಾಡಿ, ಚಂದ್ರಶೇಖರ ಪುರುಷ ತೋಟಪ್ಪಾಡಿ, ದಾಮೋದರ ಆಚಾರ್ಯ , ಪ್ರಖ್ಯಾತ್ ವಾಗ್ಲೆ, ಹೇಮಂತ್ ಗೌಡರಮನೆ, ದಿನೇಶ್ ರೈ ದರ್ಖಾಸ್ತು,ದಿವಾಕರ ಶಿರ್ವಾಜೆ, ಮಂಜುನಾಥ ಪರಪ್ಪೆ,ಸುಂದರ ಗೌಡ ಕಾಡುಸೊರಂಜ ಹಾಗೂ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಹೆಚ್ವಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading