ಶೇಣಿ: ಎಂ.ಎಸ್ ಕೆ ತಂಡದ ವತಿಯಿಂದ ವಾಲಿಬಾಲ್ ಪಂದ್ಯಾಟ – ಪ್ರಥಮ| ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಅಕ್ಕೋಜಿಪಾಲ್ ದ್ವಿತೀಯ: ಯುವಕ ಮಂಡಲ ಕಳಂಜ

ಎಂ.ಎಸ್.ಕೆ ತಂಡದ ವತಿಯಿಂದ ಎಂಟು ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ನ.15 ರಂದು ಕುಳ್ಳಾಜೆ ಎಂ.ಎಸ್.ಕೆ ಮೈದಾನದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಸಂಘದ ಸ್ಥಾಪಕ ಅಧ್ಯಕ್ಷ ವಿಶ್ವನಾಥ ಮೋಟುಕಾನ ನೆರವೇರಿಸಿದರು.

. . . . . . . . .

ಬೆಳ್ಳಾರೆ ಮೂಡಾಯಿತೋಟ ಭೀಮರಾವ್ ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಮೂಡಾಯಿತೋಟ ದೀಪ ಬೆಳಗಿಸಿ ಪಂದ್ಯಾಕೂಟದ ಸಭಾ ಕಾರ್ಯಕ್ರಮ ಉದ್ಘಾಟನೆ ಗೈದರು.
ಎಂ ಎಸ್ ಕೆ ತಂಡದ ಅಧ್ಯಕ್ಷ ದಿನೇಶ್ ಕುಳ್ಳಾಜೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಈಶ್ವರ ವಾರಣಾಶಿ, ಶೇಣಿ ಸ.ಹಿ.ಪ್ರಾ ಶಾಲಾ ತೋಟಗಾರಿಕಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಶೇಣಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಘದ ಸದಸ್ಯ ನಾಗೇಶ್ ಮೋಟುಕಾನ,ಸ್ಥಾಪಕ ಅಧ್ಯಕ್ಷ ವಿಶ್ವನಾಥ ಮೋಟುಕಾನ ಉಪಸ್ಥಿತರಿದ್ದರು.

. . . . . . .

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಸದಸ್ಯ ವಿಶ್ವನಾಥ ಕುಳ್ಳಾಜೆ ವಹಿಸಿದ್ದರು. ಶೇಣಿ ಸ.ಹಿ.ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾಡಾಜೆ, ಶಾಲಾ ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ಗೌಡ ಪಿಂಡಿಬನ , ಶೇಣಿಯ ಉದ್ಯಮಿ ದೇವಣ್ಣ ಗೌಡ ಶೇಣಿ, ಸಂಘದ ಸದಸ್ಯ ರಾಮಚಂದ್ರ ಕುಳ್ಳಾಜೆ ಉಪಸ್ಥಿತರಿದ್ದರು. ತೀರ್ಥೇಶ್ ನಾರ್ಣಕಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ್ ಮೋಟುಕಾನ ವಂದಿಸಿದರು.
ಪ್ರಥಮ ಬಹುಮಾನವನ್ನು ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಅಕ್ಕೋಜಿಪಾಲ್, ಯುವಕ ಮಂಡಲ ಕಳಂಜ, ಕೋಟೆಮುಂಡುಗಾರು ದ್ವಿತೀಯ ಬಹುಮಾನ ಪಡೆದುಕೊಂಡರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading