ಬಾಳಿಲ: ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20.11.2026 ರಂದು ಪ್ರೌಢಶಾಲೆಯ ಕ್ರೀಡಾoಗಣ ದಲ್ಲಿ ವಾರ್ಷಿಕ ಕ್ರೀಡಾಕೂಟ ನೆರವೇರಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಯುವಜನ ಸಂಯುಕ್ತ ಮಂಡಳಿ (ರಿ )ಸುಳ್ಯ ಇದರ ಗೌರವಧ್ಯಕ್ಷ ಪವನ್ ಪಲ್ಲತಡ್ಕ ಕ್ರೀಡಾಕೂಟವನ್ನು ಉದ್ಘಾಟಸಿ, ಶಾಲಾ ದಿನಗಳ ಕ್ರೀಡಾ ಚಟುವಟಿಕೆಗಳನ್ನು ಸ್ಮರಿಸಿ ಸಂಸ್ಥೆಗೆ ಶುಭ ಹಾರೈಸಿದರು.

. . . . . . . . .

ವಿಶೇಷ ಆಹ್ವಾನಿತರಾದ ಸುಳ್ಯ ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ವರದಿಗಾರರಾದ ಈಶ್ವರ ವಾರಣಾಸಿಯವರು ವಿದ್ಯಾರ್ಥಿಗಳ ಶಿಸ್ತು, ಕ್ರೀಡಾ ಸ್ಪೂರ್ತಿಯನ್ನು ಪ್ರಶಂಸಿಸಿ ಶುಭ ಹಾರೈಸಿದರು.

. . . . . . .

ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣ ರಾವ್ ಯು ಅವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಗಳ ಸಂಚಾಲಕರು ಪಿ ಜಿ ಎಸ್ ಎನ್ ಪ್ರಸಾದ್ ಧ್ವಜಾರೋಹಣ ಗೈದರು. ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷೆ ಹರಿಣಾಕ್ಷಿ ಬರೆಮೇಲು, ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕಾಯಾರ, ವಿದ್ಯಾಬೋಧಿನಿ ಎಜುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಕೋಶಾಧಿಕಾರಿ ರಾಮ ಭಟ್ ಕೈoತಜೆ, ಶಾಲಾ ಆಡಳಿತ ಮಂಡಳಿ ಜೊತೆ ಕಾರ್ಯದರ್ಶಿ ಭವಾನಿ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆಗಳ ಪ್ರೌಢಶಾಲೆಯ ನಾಲ್ಕು ದಳಗಳು ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಂಡ, ವಿದ್ಯಾಬೋಧಿನೀ ಸ್ಕೌಟ್ಸ್ ಗೈಡ್ಸ್ ನ ಬ್ಯಾಂಡ್ ವಾದನದೊಂದಿಗೆ ಪಥ ಸಂಚಲನ ನಡೆಯಿತು. ಶಾಲಾ ನಾಯಕ ಸೋವಿತ್ ಕ್ರೀಡಾ ಪ್ರತಿಜ್ಞೆ ಬೋಧಿಸಿದನು. ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ಎಸ್ ಸ್ವಾಗತಿಸಿ. ದೈಹಿಕ ಶಿಕ್ಷಕ ಹರಿಪ್ರಸಾದ್ ರೈ ವಂದಿಸಿದ ಕಾರ್ಯಕ್ರಮವನ್ನು. ಸಹ ಶಿಕ್ಷಕ ಲೋಕೇಶ್ ಬಿ ನಿರೂಪಿಸಿದರು.

ಬೆಳಗ್ಗೆ 10.30 ಸಂಜೆ 4.30ರ ತನಕ ಕ್ರೀಡಾಕೂಟ ಅತ್ಯುತ್ತಮ ರೀತಿಯಲ್ಲಿ ನಡೆಯಿತು. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಿತು. ಅಂತಾರಾಷ್ಟ್ರೀಯ ಕ್ರೀಡಾ ಪಟು ಶುಭಾಶ್ಚಂದ್ರ ರೈ ತೋಟ ಧ್ವಜಾವರೋಹಣ ನೆರವೇರಿಸಿದರು. ಪೋಷಕರು, ಹಿರಿಯ ವಿದ್ಯಾರ್ಥಿಗಳು, ಆಡಳಿತ ಮಂಡಳಿ ಸದಸ್ಯರು, ವಿದ್ಯಾಭಿಮಾನಿಗಳು ಆಗಮಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading