ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎ.ಪಿ ರಂಗನಾಥ್ ಕುಕ್ಕೆ ಬೇಟಿ

ಸುಬ್ರಹ್ಮಣ್ಯ ನವೆಂಬರ್ 20 : ಕರ್ನಾಟಕ ಸರಕಾರದ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎ.ಪಿ ರಂಗನಾಥ್ ಅವರು ಗುರುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

. . . . . . . . .

ಶ್ರೀ ದೇವರ ದರ್ಶನ ಹಾಗೂ ತೀರ್ಥ ಪ್ರಸಾದ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ರಾಜ್ಯದ ಮುಜರಾಯಿ ಇಲಾಖೆಯಲ್ಲಿ ನಂಬರ್ ವನ್ ಆದಾಯದಲ್ಲಿ ಇರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ. ಈ ದೇವಳಕ್ಕೆ ಭಕ್ತರಿಂದ ಬಂದಿರುವ ಹಣವನ್ನು ಬಳಸಲು ಸರಕಾರ ಅನುಮತಿ ನೀಡಲು ಆಸಕ್ತಿ ತೋರುತ್ತಿಲ್ಲ. ಈಗಾಗಲೇ ಮಂಜೂರಾಗಿರುವ 600 ಕೋಟಿ ರೂ ವೆಚ್ಚದ ಮಾಸ್ಟರ್ ಪ್ಲಾನ್ ಕಾಮಗಾರಿ ಇನ್ನೂ ಕೂಡ ಆರಂಭಿಸದೇ ಇರುವುದು ಸರಿಯಲ್ಲ. ಅಲ್ಲದೆ ಮುಜರಾಯಿ ಸಚಿವರು ಇನ್ನೂ ಕೂಡ ಶ್ರೀ ದೇವಳಕ್ಕೆ ಬಾರದಿರುವುದು ಅಭಿವೃದ್ಧಿ ಕುಂಠಿತಕ್ಕೆ ಕಾರಣವೂ ಹೌದು” ಎಂದರು.

. . . . . . .

 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ಶಾಸಕರನ್ನ ಬರಮಾಡಿಕೊಂಡು ಗೌರವಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಮುಖಂಡ ಎಂಬಿ ಸದಾಶಿವ ಸುಬ್ರಹ್ಮಣ್ಯದ ಜೆಡಿಎಸ್ ಮುಖಂಡ ಡಾ. ಎ.ಎ ತಿಲಕ್ ಮತ್ತಿತರರು ಹಾಜರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading