₹750ರ ಗಡಿ ತಲುಪಿದ ಕಾಳುಮೆಣಸಿನ ಧಾರಣೆ..!! ; ಕೃಷಿಕರಲ್ಲಿ ಹೊಸ ನಿರೀಕ್ಷೆ

ಬರಹ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)
ಕಾಳುಮೆಣಸು ದರ ಮಾಹಿತಿ : ಕ್ಯಾಂಪ್ಕೋ ನಿ. ಮಂಗಳೂರು (ಸುಳ್ಯ ಶಾಖೆ)
“ಕೃಷಿಕರ ಪಾಲಿನ ಕಪ್ಪು ಚಿನ್ನ” ಎಂದೇ ಪ್ರಖ್ಯಾತವಾದ ಕಾಳುಮೆಣಸಿನ ಧಾರಣೆಯು ಇದೀಗ ₹750ರ ಗಡಿಯನ್ನು ತಲುಪಿದ್ದು, ಕೃಷಿಕರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ. ಕಳೆದ ತಿಂಗಳು ಅ.19ರ ಹೊತ್ತಿಗೆ ₹700 ಗಡಿ ದಾಟಿದ್ದ ದರ ಅ.29ಕ್ಕೆ ₹730ಕ್ಕೆ ಏರಿಕೆಯಾಗಿತ್ತು. ಆನಂತರ ಕೊಂಚ ಕುಸಿತ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ಇಳಿಕೆಯಾಗಿತ್ತು. ಆದರೆ, ನವೆಂಬರ್ ತಿಂಗಳ ಮೊದಲ ವಾರಾಂತ್ಯದಲ್ಲಿ ಮತ್ತೆ ಚೇತರಿಕೆ ಕಂಡ ಕಾಳುಮೆಣಸಿನ ಧಾರಣೆ ನಿರಂತರ ಏರಿಕೆಯೊಂದಿಗೆ ಇದೀಗ ನ.16ರ ಹೊತ್ತಿಗೆ ₹750ರ ಗಡಿಯನ್ನು ತಲುಪಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ಬೆಳೆಯಾದ ಅಡಿಕೆಯು ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾಳುಮೆಣಸಿನ ಈ ದರ ಏರಿಕೆಯು ಕೃಷಿಕರ ಸಂಕಷ್ಟಕ್ಕೆ ಬಹುದೊಡ್ಡ ಆಸರೆಯಾಗಲಿದೆ ಎಂಬ ಆಶಯ ಮೂಡಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading