ದೇವಿಪ್ರಸಾದ್ ಚಿಕ್ಕುಳಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

ಸುಳ್ಯ: ಅಖಿಲ ಭಾರತ ಒಕ್ಕಲಿಗರ ಮಹಾಸಭಾ, ಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಕುಳಿ ಆಯ್ಕೆಯಾಗಿದ್ದಾರೆ.

. . . . . . . . .

ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾಗಿರುವ ದೇವಿಪ್ರಸಾದ್ ಚಿಕ್ಕುಳಿ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

. . . . . . .

ಸೆಪ್ಟೆಂಬರ್ 27ರಂದು ನಡೆಯಲಿರುವ ರಾಜ್ಯ ಮಟ್ಟದ ಒಕ್ಕಲಿಗ ಹಾಗೂ ಅದರ 116 ಉಪಜಾತಿಗಳ ಸ್ನೇಹ ಮಿಲನ, ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇವಿಪ್ರಸಾದ್ ಚಿಕ್ಕುಳಿ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading