ಸುಳ್ಯ : ಅಡಿಟರ್ ಮತ್ತು ತೆರಿಗೆ ಸಲಹೆಗಾರ ಬಾಲಕೃಷ್ಣ ನಡುಗಲ್ಲು ಅವರ ನೂತನ ಶಾಖಾ ಕಚೇರಿ ಆರಂಭ

ಹಲವು ವರ್ಷಗಳಿಂದ ಸುಳ್ಯ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಲೆಕ್ಕಪರಿಶೋಧನೆ ಹಾಗೂ ತೆರಿಗೆ ಸಲಹಾ ಸೇವೆಗಳನ್ನು ನೀಡುತ್ತಿರುವ ಅಡಿಟರ್ ಮತ್ತು ತೆರಿಗೆ ಸಲಹೆಗಾರ ಬಾಲಕೃಷ್ಣ ನಡುಗಲ್ಲು (B.Com, CA Inter, MBA) ಅವರ ಎರಡನೇ ಕಚೇರಿಯು ಗಾಂಧಿನಗರದಲ್ಲಿ ಶುಭಾರಂಭಗೊಂಡಿದೆ.

. . . . . . . . .

ಹೊಸ ಶಾಖೆಯು ಗಾಂಧಿನಗರ ಮಸೀದಿ ಎದುರಿನ ಸೇರ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿರುವ ದಿ. ಸುಬ್ರಹ್ಮಣ್ಯ ಆಚಾರ್ ಅವರ ಕೆ.ಸಿ.ಎ. ಕಮರ್ಷಿಯಲ್ ಅಕೌಂಟೆಂಟ್ಸ್ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ.

. . . . . . .

ಪ್ರಧಾನ ಕಚೇರಿಯು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಹಿಂದೂಸ್ತಾನ್ ಬಿಲ್ಡಿಂಗ್, ಸುಳ್ಯ ಸೆಂಟರ್ ನ 3 ನೇ ಮಹಡಿಯಲ್ಲಿದೆ.

ಕಚೇರಿಯಲ್ಲಿ ವ್ಯಾಪಾರ ಸಂಸ್ಥೆಗಳು, ಸಹಕಾರಿ ಸಂಘಗಳು ಹಾಗೂ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಆಡಿಟಿಂಗ್ ಮತ್ತು ಅಕೌಂಟಿಂಗ್ ಸೇವೆಗಳು, ಜಿಎಸ್‌ಟಿ ನೋಂದಣಿ, ಮಾಸಿಕ ರಿಟರ್ನ್ ಸಲ್ಲಿಕೆ, ಇ-ವೇ ಬಿಲ್ ಸಮಸ್ಯೆಗಳ ಪರಿಹಾರ, ಜಿಎಸ್‌ಟಿ ಸಂಬಂಧಿತ ವಿವಾದಗಳಿಗೆ ಮಾರ್ಗದರ್ಶನ ಹಾಗೂ ಲಾರಿ/ಸರಕು ಬಿಡುಗಡೆಗೆ ಕಾನೂನುಬದ್ಧ ನೆರವು ನೀಡಲಾಗುತ್ತದೆ.

ಇದಲ್ಲದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ತೆರಿಗೆ ನೋಟಿಸ್‌ಗಳಿಗೆ ಮಾರ್ಗದರ್ಶನ, PMEGP ಮತ್ತು MSME ಉದ್ಯಮಗಳಿಗೆ ಬ್ಯಾಂಕ್ ಸಾಲ ಪಡೆಯಲು ಅಗತ್ಯವಿರುವ ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್ (DPR) ಸಿದ್ಧತೆ, ಭೂ ಪರಿವರ್ತನೆ, ಆರ್‌ಟಿಒ ಹಾಗೂ ವಿವಿಧ ಆನ್‌ಲೈನ್ ಸರ್ಕಾರಿ ಕಡತಗಳ ಪರಿಶೀಲನೆ ಮತ್ತು ಮಾರ್ಗದರ್ಶನ ಸೇರಿದಂತೆ ವಿವಿಧ ವೃತ್ತಿಪರ ಸೇವೆಗಳು ಲಭ್ಯವಿವೆ.

ಗ್ರಾಹಕರ ಸಂಕೀರ್ಣ ತೆರಿಗೆ, ಜಿಎಸ್‌ಟಿ ಹಾಗೂ ಲೆಕ್ಕಪತ್ರ ಸಂಬಂಧಿತ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಸಂಪರ್ಕ: ಪ್ರಧಾನ ಕಚೇರಿ – 08257-295625, ಮೊಬೈಲ್: 9448710625, ಇ-ಮೇಲ್: sulliacsc@gmail.com.
ಹೊಸ ಶಾಖೆ – ಗಾಂಧಿನಗರ: 08257-295627, ಮೊಬೈಲ್: 9482597194, ಇ-ಮೇಲ್: kcasullia26@gmail.com.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading