ದ್ವಾದಶ ರಾಶಿಗಳ ದಿನ ಭವಿಷ್ಯ – ದಿನಾಂಕ : 29-08-2026

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

ದಿನಾಂಕ : 29-08-2026
ವಾರ : ಶನಿವಾರ

. . . . . . . . .

01)🐏ಮೇಷ ರಾಶಿ : ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಹೊಸ ವಸ್ತುಗಳನ್ನು ಖರೀದಿಸುತ್ತೀರಿ. ಹಳೆಯ ಸ್ನೇಹಿತರಿಂದ ಬಂದ ಮಾಹಿತಿ ಸಂತೋಷ ಉಂಟುಮಾಡುತ್ತದೆ. ಕೈಗೊಂಡ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ದೊರೆಯುತ್ತವೆ… ಗಮನಿಸಿ – ಉದ್ಯೋಗಿಗಳಿಗೆ ಪದೋನ್ನತಿ ಅವಕಾಶಗಳು ಹೆಚ್ಚಾಗುತ್ತವೆ… ಪರಿಹಾರ – ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ.

. . . . . . .

02)🐂ವೃಷಭ ರಾಶಿ : ಪ್ರಮುಖಕಾರ್ಯಗಳಲ್ಲಿ ಮಾಡಿದ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಹೊಸ ಕಾರ್ಯಕ್ರಮಗಳಿಗೆ ಶುಭಾರಂಭ ಮಾಡುತ್ತೀರಿ. ಸ್ಥಿರಾಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ಆಪ್ತರಿಂದ ಪ್ರಮುಖ ಮಾಹಿತಿ ದೊರೆಯುತ್ತದೆ. ನಿರುದ್ಯೋಗಿಗಳಪ್ರಯತ್ನಗಳು ಫಲಿಸುತ್ತವೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ… ಗಮನಿಸಿ – ಮಕ್ಕಳ ಫಲಿತಾಂಶಗಳು ತೃಪ್ತಿಕರವಾಗಿರುತ್ತವೆ… ಪರಿಹಾರ – ನವಗ್ರಹ ಮಂತ್ರ ಜಪಿಸಿ.

03)👥ಮಿಥುನ ರಾಶಿ : ಕುಟುಂಬ ವಿಷಯಗಳಲ್ಲಿ ಸ್ಥಿರವಾದ ನಿರ್ಧಾರಗಳನ್ನು ಕೈಗೊಳ್ಳಲು ಕಷ್ಟವಾಗುತ್ತದೆ. ಆಪ್ತರೊಂದಿಗೆ ಮಾತಿನ ಕಲಹಗಳು ಉಂಟಾಗುತ್ತವೆ. ಕೈಗೊಂಡ ಕೆಲಸಗಳು ಮಧ್ಯದಲ್ಲೇ ನಿಂತು ಹೋಗುತ್ತವೆ. ಇತರರ ವ್ಯವಹಾರಗಳಿಂದ ದೂರವಿರುವುದು ಒಳಿತು. ವೃತ್ತಿ ಮತ್ತು ವ್ಯಾಪಾರ ಸಾಮಾನ್ಯವಾಗಿ ಸಾಗುತ್ತವೆ… ಗಮನಿಸಿ – ಉದ್ಯೋಗದಲ್ಲಿ ಅಧಿಕಾರಿಗಳ ಒತ್ತಡ ಎದುರಾಗುತ್ತದೆ… ಪರಿಹಾರ – ನಿಮ್ಮ ಕುಲ ಗುರುಗಳ ಆಶೀರ್ವಾದ ಪಡೆಯಿರಿ.

04)🦀ಕಟಕ ರಾಶಿ : ದೀರ್ಘಕಾಲದ ಸಾಲಗಳನ್ನು ತೀರಿಸಲು ಹೊಸ ಸಾಲಗಳನ್ನು ತೆಗೆದುಕೊಳ್ಳುತ್ತೀರಿ. ಆರ್ಥಿಕ ಸ್ಥಿತಿ ಸ್ವಲ್ಪ ನಿಧಾನಗತಿಯಲ್ಲಿ ಇರುತ್ತದೆ.ದೂರ ಪ್ರಯಾಣಗಳ ಸೂಚನೆಗಳಿವೆ. ಕುಟುಂಬ ಸದಸ್ಯರೊಂದಿಗೆ ಕಲಹಗಳ ಸಂಭವವಿದೆ. ದೈವ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ವೃತ್ತಿ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದವರ್ತಿಸಬೇಕು… ಗಮನಿಸಿ – ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತದೆ… ಪರಿಹಾರ – ನಿಮ್ಮ ಕುಲ ದೇವರ ದರ್ಶನ ಮಾಡಿ.

05)🦁ಸಿಂಹ ರಾಶಿ : ಇಂದು ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ. ಆರ್ಥಿಕವಾಗಿ ಉತ್ತಮ ಪರಿಸ್ಥಿತಿ ಇರುತ್ತದೆ. ಕೈಗೊಂಡ ಕಾರ್ಯಗಳಲ್ಲಿ ನಿರೀಕ್ಷಿತ ಪ್ರಗತಿ ದೊರೆಯುತ್ತದೆ. ಮೌಲ್ಯಯುತ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ. ವೃತ್ತಿ ಮತ್ತು ವ್ಯಾಪಾರದಲ್ಲಿಉತ್ಸಾಹದಿಂದ ಕೆಲಸ ಮಾಡಿ ಲಾಭ ಗಳಿಸುತ್ತೀರಿ… ಗಮನಿಸಿ – ಉದ್ಯೋಗಿಗಳಿಗೆ ನಿರೀಕ್ಷಿತ ಸ್ಥಾನ ಬದಲಾವಣೆಗಳು ಸಂಭವಿಸುತ್ತವೆ… ಪರಿಹಾರ -ಗಣಪತಿಗೆ ಗರಿಕೆಯನ್ನು ನೀಡಿ.

06)👩‍🦳ಕನ್ಯಾ ರಾಶಿ : ಇಂದುಆದಾಯಕ್ಕಿಂತ ವೆಚ್ಚ ಹೆಚ್ಚಾಗುತ್ತದೆ. ಆಪ್ತರೊಂದಿಗೆ ಮಾತಿನ ಕಲಹಗಳು ಉಂಟಾಗುತ್ತವೆ. ವೃತ್ತಿ ಮತ್ತು ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಿ, ಸಮಯಕ್ಕೆ ವಿಶ್ರಾಂತಿ ಸಿಗುವುದಿಲ್ಲ. ಕೈಗೊಂಡ ಕೆಲಸಗಳು ಹೆಚ್ಚು ಪರಿಶ್ರಮದಿಂದ ಮಾತ್ರ ಪೂರ್ಣಗೊಳ್ಳುತ್ತವೆ. ಪ್ರಮುಖ ವಿಷಯಗಳಲ್ಲಿ ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ ಇದೆ… ಗಮನಿಸಿ – ವ್ಯಾಪಾರದಲ್ಲಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು… ಪರಿಹಾರ – ನಿಮ್ಮ ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ.

07)⚖️ತುಲಾ ರಾಶಿ : ಸಹೋದರರೊಂದಿಗೆ ದೀರ್ಘಕಾಲದ ವಿವಾದಗಳು ಪರಿಹಾರದತ್ತ ಸಾಗುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಲಾಭಗಳು ದೊರೆಯುತ್ತವೆ. ಪ್ರಮುಖ ವಿಷಯಗಳಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಉದ್ಯೋಗದಲ್ಲಿ ವಿಳಂಬವಾದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ… ಗಮನಿಸಿ – ಉದ್ಯೋಗ ಮಾಡುವವರು ಇನ್ನಷ್ಟು ಪರಿಶ್ರಮ ಪಡಬೇಕಾಗುತ್ತದೆ… ಪರಿಹಾರ – ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ.

08)🦂ವೃಶ್ಚಿಕ ರಾಶಿ : ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಜೀವನ ಸಂಗಾತಿಯೊಂದಿಗೆ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ. ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಲಾಭಗಳನ್ನು ಪಡೆಯುತ್ತೀರಿ. ಎಲ್ಲಾ ದಿಕ್ಕುಗಳಿಂದ ಆದಾಯ ದೊರೆಯುತ್ತದೆ. ಉದ್ಯೋಗ ವಾತಾವರಣ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳ ಪ್ರಯತ್ನಗಳು ಫಲಿಸುತ್ತವೆ… ಗಮನಿಸಿ – ಸ್ಥಿರಾಸ್ತಿ ಖರೀದಿಗೆ ಇದ್ದಅಡಚಣೆಗಳು ದೂರವಾಗುತ್ತವೆ… ಪರಿಹಾರ – ಶ್ರೀ ಗಣಪತಿಯನ್ನು ಆರಾಧಿಸಿ.

09)🏹ಧನು ರಾಶಿ : ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಪ್ರೋತ್ಸಾಹಗಳು ದೊರೆಯುತ್ತವೆ. ಭೂಸಂಬಂಧಿತ ಕ್ರಯವಿಕ್ರಯಗಳಲ್ಲಿ ಲಾಭ ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳ ಅನುಗ್ರಹದಿಂದ ಹೊಸ ಅವಕಾಶಗಳು ದೊರೆಯುತ್ತವೆ… ಗಮನಿಸಿ – ನಿರುದ್ಯೋಗಿಗಳಿಗೆ ಶುಭವಾರ್ತೆಗಳು ಲಭಿಸುತ್ತವೆ… ಪರಿಹಾರ – ಕುಲ ದೇವರಿಗೆ ಕಾಣಿಕೆ ಅರ್ಪಿಸಿ.

10)🐊ಮಕರ ರಾಶಿ : ಬಂಧು-ಮಿತ್ರರೊಂದಿಗೆ ಮಾತಿನ ಕಲಹಗಳು ಉಂಟಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಚಿಂತೆ ಉಂಟುಮಾಡುತ್ತವೆ. ಕೈಗೊಂಡ ಕೆಲಸಗಳಲ್ಲಿ ನಿಧಾನಗತಿಯಲ್ಲಿ ಮುಂದುವರಿಯುತ್ತೀರಿ. ವೃತ್ತಿ ಮತ್ತು ವ್ಯಾಪಾರ ಸಾಮಾನ್ಯವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿ ಸಿಗುವುದಿಲ್ಲ… ಗಮನಿಸಿ – ನಿರುದ್ಯೋಗಿಗಳ ಪ್ರಯತ್ನಗಳು ಫಲಿಸುತ್ತವೆ… ಪರಿಹಾರ – ತಾಯಿ ಚಾಮುಂಡಿಯನ್ನು ಪ್ರಾರ್ಥಿಸಿ.

11)⚱️ಕುಂಭ ರಾಶಿ : ಆರ್ಥಿಕವಾಗಿ ಸ್ವಲ್ಪ ಋಣಾತ್ಮಕ ಪರಿಸ್ಥಿತಿ ಉಂಟಾಗುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿಅಗತ್ಯಕ್ಕಿಂತ ಹೆಚ್ಚು ಖರ್ಚುಗಳು ಹೆಚ್ಚಾಗುತ್ತವೆ. ಪ್ರಮುಖ ಕೆಲಸಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಕಷ್ಟವಾಗುತ್ತದೆ… ಗಮನಿಸಿ – ನಿರುದ್ಯೋಗಿಗಳ ಪ್ರಯತ್ನಗಳು ನಿಧಾನಗತಿಯಲ್ಲಿ ಸಾಗುತ್ತವೆ… ಪರಿಹಾರ:- ಶಿವಪಂಚಾಕ್ಷರಿ ಮಂತ್ರ ಜಪಿಸಿ.

12)🐬ಮೀನ ರಾಶಿ : ಕೈಗೊಂಡ ಕೆಲಸಗಳು ಹೆಚ್ಚಿನ ಪರಿಶ್ರಮದಿಂದ ಮಾತ್ರ ಪೂರ್ಣಗೊಳ್ಳುತ್ತವೆ. ದೂರ ಪ್ರಯಾಣಗಳಲ್ಲಿ ವಾಹನ ಸಂಬಂಧಿತ ತೊಂದರೆಗಳು ಎದುರಾಗುತ್ತವೆ. ಮನೆ ಮತ್ತು ಹೊರಗೆ ವಿವಾದಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತೀರಿ. ವೃತ್ತಿ ಮತ್ತು ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಕಲಹಗಳು ಉಂಟಾಗುತ್ತವೆ… ಗಮನಿಸಿ – ನಿರುದ್ಯೋಗ ಪ್ರಯತ್ನಗಳನ್ನು ಮುಂದೂಡುತ್ತೀರಿ… ಪರಿಹಾರ – ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading