ಗುತ್ತಿಗಾರು: ಗ್ರಾಮ ಕಾಂಗ್ರೆಸ್ ಸಮಿತಿ ರಚನೆ – ಅಧ್ಯಕ್ಷರಾಗಿ ಕೇಶವ ಹೊಸೊಳಿಕೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಡಿ.ಜೆ ಜನಾರ್ಧನ ನೇಮಕ – ಹಲವರು ಪಕ್ಷಕ್ಕೆ ಸೇರ್ಪಡೆ

. . . . . . . . .

ಗುತ್ತಿಗಾರು ಗ್ರಾಮ ಕಾಂಗ್ರೆಸ್ ಸಮಿತಿಯ ಸಭೆ ಆ. 26 ರಂದು ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್.ಐ.ಆರ್ ಗೆ ದುಡಿದ ಬಿ.ಎಲ್.ಎ2 ಗಳಿಗೆ ಅಭಿನಂದನೆ ಸಲ್ಲಿಸಿ, SIR ಪ್ರಗತಿ ಮತ್ತು ಪರಿಶೀಲನೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲು ಮಾರ್ಗಸೂಚಿಯನ್ನು ವಿವರಿಸಿ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಸನ್ನದ್ದರಾಗುವಂತೆ ತಿಳಿಸಿದರು.

. . . . . . .

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಸಕ್ರಿಯ ಕಾರ್ಯಕರ್ತರುಗಳಾಗಿ ದುಡಿಯಲು ಆಸಕ್ತಿ ವಹಿಸಿ ಗೋಪಾಲಕೃಷ್ಣ ದೇವಸ್ಯ, ಭರತ್ ಕನ್ನಡ್ಕ, ವರದರಾಜ್ ಬಳ್ಳಕ, ಗುರುವ ಆಚಳ್ಳಿ, ಹೇಮಂತ್ ಬಳ್ಳಕ, ಸಂತೋಷ್ ಬಳ್ಳಕರವರು ಕಾಂಗ್ರೆಸ್ ಪಕ್ಷದ ಧ್ವಜ ಸ್ವೀಕರಿಸಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಗುತ್ತಿಗಾರು ಗ್ರಾಮ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಕೇಶವ ಹೊಸೋಳಿಕೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಡಿ.ಜೆ. ಜನಾರ್ಧನ, ಉಪಾಧ್ಯಕ್ಷರಾಗಿ ಹಸೈನಾರ್ ವಳಲಂಬೆ, ಮೋಹನ್ ಹುಲಿಕೆರೆ, ಅಶೋಕ್ ಮೊಗ್ರ, ಗುರುವ ಆಚಳ್ಳಿ ಹಾಗೂ ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ದೇವಸ್ಯ, ಸತ್ಯನಾರಾಯಣ ಬಳ್ಳಕ, ರಂಜಿತ್ ಪೈಕ, ಭರತ್ ಕನ್ನಡ್ಕ ಅವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕಗೊಳಿಸಲಾಯಿತು.

ಗುತ್ತಿಗಾರು ಗ್ರಾಮ ಕಾಂಗ್ರೆಸ್ ನ ಪೂರ್ವಾಧ್ಯಕ್ಷ ಪರಮೇಶ್ವರ ಚಣಿಲ ನೂತನ ಅಧ್ಯಕ್ಷರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಿದರು.

ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ ನೂತನ ಗ್ರಾಮ ಸಮಿತಿಗೆ ಶುಭಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹರ್ಷಿತ್ ಗೌಡ ಕೊರಂಬಟ, ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಪರಶುರಾಮ ಚಿಲ್ತಡ್ಕ, ಸುಳ್ಯ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸನತ್ ಮುಳುಗಾಡು, ಲಕ್ಷ್ಮೀಶ ಗಬ್ಬಲಡ್ಕ, ಅಚ್ಚುತ ಮಲ್ಕಜೆ, ಗೋಪಾಲಕೃಷ್ಣ ಪಿ.ಎಂ, ಕೆ ಗುಡ್ಡಪ್ಪ ಗೌಡ, ಹಸೈನಾರ್ ವಳಲಂಬೆ, ಮುರಳೀಧರ, ಗುರುವ, ಅಯ್ಯಪ್ಪನ್, ಚನಿಯ ಪುಲ್ಲಡ್ಕ, ಪುರುಷೋತ್ತಮ ಬದಿಯಡ್ಕ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಅಭಿಜಿತ್ ಕೆಂಬಾರೆ ಹಾಗೂ ರಂಜಿತ್ ಪೈಕ, ಗಂಗಾಧರ ಅಡ್ಡನಪಾರೆ, ಹರಿಪ್ರಸಾದ್ ಬಳ್ಳಕ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಬಳ್ಳಕ, ಸಂತೋಷ್ ಬಳ್ಳಕ, ಹೇಮಂತ್ ಬಳ್ಳಕ, ವರದರಾಜ ಬಳ್ಳಕ, ಗಿರಿಧರ ಕೋನೆಕಾಣ, ಎಂ.ಎಸ್ ಸಿದ್ದಾರ್ಥ, ಧನಂಜಯ ಜೆ, ರಾಜಶೇಖರ್ ಮೇದಿನಡ್ಕ, ಅಶೋಕ್ ಎಂ, ನಾಗೇಶ ಬಿ, ಮೋಹನ್ ಇ ಹೆಚ್ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಸರಸ್ವತಿಮಹಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading