ಅಕ್ರಮ ಮರದ ದಿಮ್ಮಿಗಳ ಸಾಗಾಟ : ಲಾರಿ ಸಹಿತ 14 ದಿಮ್ಮಿ ವಶ

ಸುಳ್ಯ : ಸುಳ್ಯ ವಲಯದ ಆರಂತೋಡು ಶಾಖಾ ವ್ಯಾಪ್ತಿಯ ಅರಂತೋಡು ಗ್ರಾಮದ ಮಲ್ಲಡ್ಕ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಒಂದು ಕಿರಾಲ್‌ಬೋಗಿ ಜಾತಿಯ ಮರವನ್ನು ಕಡಿದು, ದಿಮ್ಮಿಗಳನ್ನು ಸಾಗಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ.

. . . . . . . . .

ದಿನಾಂಕ 26-08-2026ರ ರಾತ್ರಿ ಸುಳ್ಯ ವಲಯದ ರಾತ್ರಿ ಗಸ್ತು ಸಿಬ್ಬಂದಿಗಳು ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟದಿಂದ ಮರ್ಕಂಜ ಕಡೆಗೆ ತೆರಳುವ ಸಾರ್ವಜನಿಕ ರಸ್ತೆಯ ಹೈದಂಗೂರು ಎಂಬಲ್ಲಿ ಗಸ್ತು ನಡೆಸುತ್ತಿದ್ದಾಗ, ಲಾರಿ(ಕೆಎ 44 ಎ 2650)ಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ 14 ಕಿರಾಲ್‌ಬೋಗಿ ಜಾತಿಯ ಮರದ ದಿಮ್ಮಿಗಳು ಪತ್ತೆಯಾಗಿವೆ.

. . . . . . .

ಮರದ ದಿಮ್ಮಿಗಳ ಸಾಗಾಟಕ್ಕೆ ಅಗತ್ಯವಿರುವ ರಹದಾರಿ ಹಾಗೂ ಅನುಮತಿ ಪತ್ರಗಳು ಇಲ್ಲದಿರುವುದು ವಿಚಾರಣೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ, ಇದು ಅಕ್ರಮ ಮರ ಕಡಿತಲೆ ಮತ್ತು ಸಾಗಾಟ ಪ್ರಕರಣವೆಂದು ಪರಿಗಣಿಸಿ ಲಾರಿ ಹಾಗೂ ಮರದ ದಿಮ್ಮಿಗಳನ್ನು ಅಮಾನತುಪಡಿಸಿ ಆರೋಪಿಗಳನ್ನು ಬಂಧಿಸಲಾಯಿತು.

ಪ್ರಕರಣದಲ್ಲಿ ಆರೋಪಿಗಳಾದ ಅರಂತೋಡು ಗ್ರಾಮದ ಉಳುವಾರು-ಮಲ್ಲಡ್ಕ ನಿವಾಸಿಗಳಾದ ಯಶವಂತ ಯು.ಜಿ. ಬಿನ್ ಗಿರಿಯಪ್ಪ ಗೌಡ ಹಾಗೂ ತರುಣ್ ಯು.ವೈ. ಬಿನ್ ಯಶವಂತ, ಜಾಲ್ಲೂರು ಗ್ರಾಮದ ಬಾಲಾಜೆ ನಿವಾಸಿ ಲಾರಿ ಚಾಲಕ ದೀಕ್ಷಿತ್ ಡಿ. ಬಿನ್ ಸುಂದರ ಗೌಡ ಹಾಗೂ ಅಮರಮುಡೂರು ಗ್ರಾಮದ ಕುಕ್ಕುಜಡ್ಕ ನಿವಾಸಿ ಲಾರಿ ಮಾಲೀಕ ಗಗನ್ ಕೆ. ಬಿನ್ ಗೋಪಾಲಕೃಷ್ಣ ಕೆ. ಅವರನ್ನು ಬಂಧಿಸಿ, ತಣ್ಣೀರು ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಅಮಾನತುಪಡಿಸಿದ ಮರದ ದಿಮ್ಮಿಗಳು ಮತ್ತು ಲಾರಿಯ ಒಟ್ಟು ಅಂದಾಜು ಮೌಲ್ಯ ರೂ. 8,40,144 ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸುಳ್ಯ ವಲಯ ಅರಣ್ಯಾಧಿಕಾರಿ ನಿರಂಜನ ಅವರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಅವರ ನಿರ್ದೇಶನದಂತೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುಬ್ರಹ್ಮಣ್ಯ ಉಪವಿಭಾಗ, ಸುಳ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಸುಳ್ಯ ವಲಯ ಅರಣ್ಯಾಧಿಕಾರಿ ನಿರಂಜನ, ಆರಂತೋಡು ಶಾಖಾ ಉಪ ವಲಯ ಅರಣ್ಯಾಧಿಕಾರಿ ವಿನಾಯಕ ದುರದುಂಡಿ, ಕಾಲಬೈರವ ಗಸ್ತು ಪಡೆಯ ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ದೀಪಕ್ ಕೆ.ಎಸ್., ಶಿವಾನಂದ ಬಳಗಾನೂರ, ಅರಣ್ಯ ವೀಕ್ಷಕ ಅಭಿಲಾಷ್ ಹಾಗೂ ವಾಹನ ಚಾಲಕ ಪುರುಷೋತ್ತಮ ಕೆ.ಎಸ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಪ್ರಕರಣವು ಸುಳ್ಯ ವಲಯ ಅರಣ್ಯ ತಕ್ಷೀರು ನಂಬ್ರ 02/2026-27, ದಿನಾಂಕ 26-08-2026ರಂತೆ ದಾಖಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading