“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜು.20) ದಿಂದ ಶನಿವಾರ(ಜು.25) ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಅಡಿಕೆಯ ಉಪ ಉತ್ಪನ್ನಗಳಲ್ಲಿ ಕುಸಿತ ; ರಬ್ಬರ್ ಧಾರಣೆಯಲ್ಲಿ ಚೇತರಿಕೆ! ; ಕಾಳುಮೆಣಸು ಹಾಗೂ ಕೊಬ್ಬರಿ ದರದಲ್ಲಿ ಇಳಿಕೆ!

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜುಲೈ 20 ಸೋಮವಾರದಿಂದ ಜುಲೈ 25 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ…

1) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ: ಮುಖ್ಯ ಅಡಿಕೆ ಸಂಪೂರ್ಣ ಸ್ಥಿರ – ಉಪ ಉತ್ಪನ್ನಗಳಲ್ಲಿ ಕುಸಿತ
ಈ ವಾರದ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಡಿಕೆಯ ಪ್ರಮುಖ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಧಾರಣೆಗಳು ವಾರದ ಆರಂಭದಿಂದ ಅಂದರೆ ಜುಲೈ 20 ಸೋಮವಾರದಿಂದ ವಾರಾಂತ್ಯದವರೆಗೆ ಅಂದರೆ ಜುಲೈ 25 ಶನಿವಾರದವರೆಗೂ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಆದರೆ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿಗಡ್ಡೆ ಹಾಗೂ ಕರಿಗೋಟು ಧಾರಣೆಗಳಲ್ಲಿ ವಾರದ ಮಧ್ಯದಲ್ಲಿ ಗುರುವಾರ ಮತ್ತು ಶುಕ್ರವಾರದಂದು ಎರಡು ದಿನಗಳ ಕಾಲ ಸತತ ಕುಸಿತ ದಾಖಲಾಗಿತ್ತು.
ಹೊಸ ಅಡಿಕೆ : ಸೋಮವಾರದಂದು ಕನಿಷ್ಠ ₹390 ರಿಂದ ಗರಿಷ್ಠ ₹475 ಇದ್ದ ಬೆಲೆ ಶನಿವಾರದಂದೂ ಕನಿಷ್ಠ ₹390 ರಿಂದ ಗರಿಷ್ಠ ₹475 ರಲ್ಲೇ ಮುಂದುವರಿದಿದೆ(ಸಂಪೂರ್ಣ ಸ್ಥಿರತೆ).
ಹಳೆ ಅಡಿಕೆ ಹಾಗೂ ಡಬಲ್ ಚೋಲ್ : ಸೋಮವಾರದಂದು ಕನಿಷ್ಠ ₹390 ರಿಂದ ಗರಿಷ್ಠ ₹550 ಇದ್ದ ಬೆಲೆ ಶನಿವಾರದಂದೂ ಕನಿಷ್ಠ ₹390 ರಿಂದ ಗರಿಷ್ಠ ₹550 ರಲ್ಲೇ ಸ್ಥಿರವಾಗಿದೆ.
ಫಟೋರಾ : ಸೋಮವಾರದಂದು ಕನಿಷ್ಠ ₹335 ರಿಂದ ಗರಿಷ್ಠ ₹380 ಇದ್ದ ಬೆಲೆ ಶನಿವಾರದಂದು ಕನಿಷ್ಠ ₹320 ರಿಂದ ಗರಿಷ್ಠ ₹370 ಗಳಿಗೆ ತಲುಪಿತ್ತು(ಗರಿಷ್ಠ ದರದಲ್ಲಿ ₹10 ಇಳಿಕೆ ಹಾಗೂ ಕನಿಷ್ಠ ದರದಲ್ಲಿ ₹15 ಇಳಿಕೆ).
ಉಳ್ಳಿಗಡ್ಡೆ : ಸೋಮವಾರದಂದು ಕನಿಷ್ಠ ₹260 ರಿಂದ ಗರಿಷ್ಠ ₹280 ಇದ್ದ ಬೆಲೆ ಶನಿವಾರದಂದು ಕನಿಷ್ಠ ₹250 ರಿಂದ ಗರಿಷ್ಠ ₹270 ಗಳಿಗೆ ತಲುಪಿತ್ತು(ಗರಿಷ್ಠ ದರದಲ್ಲಿ ₹10 ಇಳಿಕೆ ಹಾಗೂ ಕನಿಷ್ಠ ದರದಲ್ಲಿ ₹10 ಇಳಿಕೆ).
ಕರಿಗೋಟು : ಸೋಮವಾರದಂದು ಕನಿಷ್ಠ ₹235 ರಿಂದ ಗರಿಷ್ಠ ₹265 ಇದ್ದ ಬೆಲೆ ಶನಿವಾರದಂದು ಕನಿಷ್ಠ ₹225 ರಿಂದ ಗರಿಷ್ಠ ₹255 ಗಳಿಗೆ ತಲುಪಿತ್ತು(ಗರಿಷ್ಠ ದರದಲ್ಲಿ ₹10 ಹಾಗೂ ಕನಿಷ್ಠ ದರದಲ್ಲಿ ₹10 ಇಳಿಕೆ).

2) ಕಾಳುಮೆಣಸು ಹಾಗೂ ಕೊಬ್ಬರಿ ದರದಲ್ಲಿ ಇಳಿಕೆ – ಕೊಕ್ಕೋ ಸಂಪೂರ್ಣ ಸ್ಥಿರ
ಈ ವಾರ ಅಂದರೆ ಜುಲೈ 20 ಸೋಮವಾರದಿಂದ ಜುಲೈ 25 ಶನಿವಾರದವರೆಗಿನ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಾಳುಮೆಣಸು ಹಾಗೂ ಕೊಬ್ಬರಿ ದರಗಳಲ್ಲಿ ಕುಸಿತ ಕಂಡುಬಂದಿದ್ದರೆ ಕೊಕ್ಕೋ ಧಾರಣೆಯು ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿತ್ತು.
ಕಾಳುಮೆಣಸು : ಸೋಮವಾರದಿಂದ ಶುಕ್ರವಾರದವರೆಗೆ ಕನಿಷ್ಠ ₹590 ರಿಂದ ಗರಿಷ್ಠ ₹685 ಇದ್ದ ಬೆಲೆ ಶನಿವಾರದಂದು ಕುಸಿತ ಕಂಡು ಕನಿಷ್ಠ ₹585 ರಿಂದ ಗರಿಷ್ಠ ₹680 ಗಳಿಗೆ ತಲುಪಿತ್ತು(ಕನಿಷ್ಠ ದರದಲ್ಲಿ ₹5 ಹಾಗೂ ಗರಿಷ್ಠ ದರದಲ್ಲಿ ₹5 ಇಳಿಕೆ).
ಕೊಬ್ಬರಿ : ಸೋಮವಾರದಂದು ಕನಿಷ್ಠ ₹138 ರಿಂದ ಗರಿಷ್ಠ ₹162 ಇದ್ದ ಕೊಬ್ಬರಿ ಬೆಲೆ, ಶುಕ್ರವಾರದಂದು ಕನಿಷ್ಠ ದರದಲ್ಲಿ ₹8 ಇಳಿಕೆ ಕಂಡು ವಾರಾಂತ್ಯದಲ್ಲಿ ಅಂದರೆ ಶನಿವಾರದಂದು ಕನಿಷ್ಠ ₹130 ರಿಂದ ಗರಿಷ್ಠ ₹162 ಕ್ಕೆ ತಲುಪಿತ್ತು.
ಕೊಕ್ಕೋ(ಹಸಿ/ಒಣ) : ಸೋಮವಾರದಿಂದ ಶನಿವಾರದವರೆಗೆ ಯಾವುದೇ ಏರಿಳಿತವಿಲ್ಲದೆ ಹಸಿ ಕೊಕ್ಕೋ ಕನಿಷ್ಠ ₹70 ರಿಂದ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಕನಿಷ್ಠ ₹290 ರಿಂದ ಗರಿಷ್ಠ ₹320 ದರದಲ್ಲೇ ವಾರಪೂರ್ತಿ ಸಂಪೂರ್ಣ ಸ್ಥಿರವಾಗಿ ನಿಂತಿತ್ತು.

3) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ : ಆರಂಭದಲ್ಲಿ ಕುಸಿತ ಕಂಡರೂ ವಾರಾಂತ್ಯದಲ್ಲಿ ಚೇತರಿಕೆ ಕಂಡು ಕಳೆದುಕೊಂಡ ದರವನ್ನು ಮರಳಿ ಪಡೆದುಕೊಂಡ ರಬ್ಬರ್..!
ಈ ವಾರ ಅಂದರೆ ಜುಲೈ 20 ಸೋಮವಾರದಿಂದ ಜುಲೈ 25 ಶನಿವಾರದವರೆಗಿನ ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ವಾರದ ಆರಂಭದಲ್ಲಿ ಸಣ್ಣ ಮಟ್ಟದ ಕುಸಿತ ಕಂಡುಬಂದರೂ ವಾರಾಂತ್ಯದಲ್ಲಿ ಚೇತರಿಕೆ ಕಂಡು ವಾರದ ಆರಂಭದಲ್ಲಿ ಕಳೆದುಕೊಂಡ ದರವನ್ನು ವಾರದ ಕೊನೆಯಲ್ಲಿ ಮತ್ತೆ ಮರಳಿ ಪಡೆದುಕೊಳ್ಳುವಲ್ಲಿ ರಬ್ಬರ್ ಯಶಸ್ವಿಯಾಗಿದೆ.
ಗ್ರೇಡ್ ರಬ್ಬರ್ : ಸೋಮವಾರದಂದು ₹278 ಇದ್ದ ಬೆಲೆ ಮಂಗಳವಾರದಂದು ₹277 ಕ್ಕೆ ಇಳಿದರೂ ಶುಕ್ರವಾರದಂದು ಮತ್ತೆ ₹278 ಕ್ಕೆ ಏರಿಕೆ ಕಂಡು ವಾರಾಂತ್ಯದಲ್ಲಿ ಅಂದರೆ ಶನಿವಾರದಂದು ಸ್ಥಿರತೆಯತ್ತ ಮುಖ ಮಾಡಿತ್ತು.
ಲಾಟ್ ರಬ್ಬರ್ : ಸೋಮವಾರದಂದು ₹242 ಇದ್ದ ಬೆಲೆ ಮಂಗಳವಾರದಂದು ₹241 ಕ್ಕೆ ಇಳಿದರೂ ಶುಕ್ರವಾರದಂದು ಮತ್ತೆ ₹243 ಕ್ಕೆ ಏರಿಕೆ ಕಂಡು ಕಳೆದುಕೊಂಡ ದರದ ಜೊತೆಗೆ ₹1 ಲಾಭವನ್ನೂ ಗಳಿಸಿತ್ತು.
ಸ್ಕ್ಯಾಪ್(ಪ್ರಥಮ/ದ್ವಿತೀಯ) : ಸೋಮವಾರದಂದು ಸ್ಕ್ರ್ಯಾಪ್ ಪ್ರಥಮ ದರ್ಜೆ ₹169 ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ₹159 ಇದ್ದ ಬೆಲೆ ಮಂಗಳವಾರದಂದು ತಲಾ ₹1 ಇಳಿಕೆ ಕಂಡರೂ ವಾರಾಂತ್ಯದಲ್ಲಿ ಅಂದರೆ ಶುಕ್ರವಾರದಂದು ತಲಾ ₹1 ಏರಿಕೆ ಕಾಣುವ ಮೂಲಕ ಕಳೆದುಕೊಂಡ ದರವನ್ನು ಮತ್ತೆ ಮರಳಿ ಪಡೆದುಕೊಂಡವು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಜುಲೈ 20 ರಿಂದ ಜುಲೈ 25) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading