ಕುಕ್ಕುಜಡ್ಕ : ಅಮರಮುಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಸಭೆ ಮತ್ತು ಎಸ್.ಐ.ಆರ್ ಪ್ರಗತಿ ಪರಿಶೀಲನೆ ; ಗ್ರಾಮ ಕಾಂಗ್ರೆಸ್ ಸಮಿತಿ ಪುನರ್‌ರಚನೆ : ನೂತನ ಅಧ್ಯಕ್ಷರಾಗಿ ಜನಾರ್ಧನ ಆಚಾರ್ಯ ಕುಂಟಿಕಾನ – ಪ್ರಧಾನ ಕಾರ್ಯದರ್ಶಿಯಾಗಿ ವಿನಯ ಸಂಕೇಶ ಆಯ್ಕೆ

ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಅಮರ ಮುಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಸಭೆ ಮತ್ತು ಎಸ್.ಐ.ಆರ್ ಪ್ರಗತಿ ಪರಿಶೀಲನಾ ಸಭೆ ಜು.19ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರ ಮನೆಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್.ಐ.ಆರ್ ಪ್ರಗತಿ ಪರಿಶೀಲನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಸಮಿತಿಯನ್ನು ಪುನಾರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಜನಾರ್ಧನ ಆಚಾರ್ಯ ಕುಂಟಿಕಾನ ಪ್ರಧಾನ ಕಾರ್ಯದರ್ಶಿಯಾಗಿ ವಿನಯ ಸಂಕೇಶ, ಉಪಾಧ್ಯಕ್ಷರುಗಳಾಗಿ ವೆಂಕಟ್ರಮಣ ಗೌಡ ಇಟ್ಟಿಗುಂಡಿ, ಯತೀಶ್ ಹಿರಿಯಡ್ಕ, ಚಿನ್ನಪ್ಪ ಗೌಡ, ತ್ಯಾಗರತ್ನಂ ಕೂಟೇಲು, ಅಂಬಾಡಿ ಸಂಕೇಶ, ಜಯರಾಮ ಶೆಟ್ಟಿ, ಕಾರ್ಯದರ್ಶಿಗಳಾಗಿ, ಜಯರಾಮ ಬೊಳ್ಕೊಡಿ, ಜಯದೀಪ್ ಕಡೆಪಾಲ, ಆದರ್ಶ ಪೂಜಾರಿ ಕೋಡಿ, ಜಯಪ್ರಸಾದ್ ಸಂಕೇಶ, ಜನಾರ್ಧನ ಪೈಲೂರು, ದಿವಾಕರ ಆಚಾರ್ಯ, ಪುಷ್ಪಾವತಿ ಕೋಣಕಜೆ, ಜಯಕುಮಾರ್ ಕೂಟೇಲು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವರಾಮ ಕೆರೆಮೂಲೆ, ಹರ್ಷವರ್ಧನ ಬೊಳ್ಳೂರು, ಬೆಳ್ಯಪ್ಪ ಗೌಡ ಮಿತ್ತೂರು, ಚೋಮ ಪೈಲಾರು, ತಿಪ್ಪ ಪೈಲಾರು, ಉಮೇಶ ಚಿಕ್ಕಿನಡ್ಕ, ಆನಂದ ಬೊಳ್ಕೊಡಿ, ಹರಿಶ್ಚಂದ್ರ ಕಟ್ಟದಮಜಲು, ಗೋಪಾಲ ನಾಯ್ಕ ಮುಂಡಕಜೆ, ಚಂದ್ರನ್ ಕೂಟೇಲು, ಅರುಣಾಚಲಂ ಕೂಟೇಲು, ಪುವೇಂದ್ರನ್ ಕೂಟೇಲು, ಶ್ರೀಮತಿ ವಿಜಯ ದಿವಾಕರ ಕೂಟೇಲುರವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಹೂವಪ್ಪ ಗೌಡ ಆರ್ನೋಜಿ, ಅಣ್ಣಾಜಿ ಗೌಡ ಪೈಲೂರು, ಬಾಲಸುಬ್ರಹ್ಮಣ್ಯ ಮೊಂಟಡ್ಕರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ, ಪರಿಶೀಷ್ಟ ಜಾತಿ ಘಟಕಕ್ಕೆ ಗ್ರಾಮ ಸಮಿತಿ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. 

. . . . . . . . .

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಎಸ್.ಐ.ಆರ್ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆ ಮತ್ತು ಗಂಭೀರವಾಗಿ ನಡೆಸಲು ಸಹಕಾರ ನೀಡಬೇಕು, ಗ್ರಾಮ ಪಂಚಾಯತ್ ಚುನಾವಣೆಗೆ ಮೀಸಲಾತಿ ಪ್ರಕಟಣೆ ಆಗಿದ್ದು, ನವೆಂಬರ್ ತಿಂಗಳ ಸಮಯದಲ್ಲಿ ಚುನಾವಣೆ ನಡೆಯಲಿದೆ, ಚುನಾವಣೆಗೆ ಸನ್ನದ್ದರಾಗಿ ಈಗಿನಿಂದಲೇ ಚಟುವಟಿಕೆ ಪ್ರಾರಂಬಿಸುವಂತೆ ಸೂಚನೆ ನೀಡಿದರು. ಅಮರ ಪಡ್ನೂರು ಅಮರ ಮುಡ್ನೂರು ಗ್ರಾಮ ಉಸ್ತುವಾರಿ, ಡಿಸಿಸಿ ಸದಸ್ಯ ನಂದರಾಜ್ ಸಂಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಸುಳ್ಯ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪವನ್ ಮುಂಡ್ರಾಜೆ, ಸುಳ್ಯ ಬ್ಲಾಕ್ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಅಸಂಘಟಿತ ಘಟಕ ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ ಕಂದಡ್ಕ, ಕೇಶವ ಮೊರಂಗಲ್ಲು, ಶ್ರೀಮತಿ ಮಧುಮತಿ ರಾಧಾಕೃಷ್ಣ ಬೊಳ್ಳೂರು, ಸೀತಾರಾಮ ಕಲ್ಮಡ್ಕ, ಹರೀಶ್ ಕುಕ್ಕುಜಡ್ಕ ಮೊದಲಾದವರು ಉಪಸ್ಥಿತರಿದ್ದರು. ಹೂವಪ್ಪ ಗೌಡ ಆರ್ನೋಜಿ ಸ್ವಾಗತಿಸಿ ಬಾಲಸುಬ್ರಹ್ಮಣ್ಯ ಮೋಂಟಡ್ಕ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading