ಗಾಂಧಿನಗರದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ

ಸಮಸ್ತ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್.ಎಸ್.ಎಫ್ ಗಾಂಧಿನಗರ ಯೂನಿಟ್ ವತಿಯಿಂದ ಜೂನ್ 26ರಂದು ಗಾಂಧಿನಗರದಲ್ಲಿ ಸಮಸ್ತ ಸ್ಥಾಪನಾ ದಿನ ಆಚರಿಸಲಾಯಿತು.

. . . . . . . . .

ಸಯ್ಯಿದ್ ತ್ವಾಹಿರ್ ಸಅದಿ ತಂಙಳ್ ದುಆ ನೆರವೇರಿಸಿದರು. ಕೆ.ಎಂ.ಜೆ ಯುನಿಟ್ ಅಧ್ಯಕ್ಷರಾದ ಅಬೂಬಕ್ಕರ್ ಕೆ.ಎ. ಅಧ್ಯಕ್ಷತೆ‌ ವಹಿಸಿದರು. ಸುಳ್ಯ ತಾಲೂಕು ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಧ್ವಜಾರೋಹಣಗೈದರು. ಸಮಸ್ತದ ಆದರ್ಶ, ಐಕ್ಯತೆ, ಜ್ಞಾನ ಹಾಗೂ ಸೇವೆಯ ಸಂದೇಶವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಮಾಡಬೇಕು ಎನ್ನುತ್ತಾ ಎಸ್.ಎಸ್.ಎಫ್. ರಾಜ್ಯ ಸಮಿತಿ ಸದಸ್ಯ ಸಬಾಹ್ ಹಿಮಮಿ ಸಖಾಫಿ ಸಂದೇಶ ಭಾಷಣಗೈದರು.

. . . . . . .

ಕೆ.ಎಂ.ಜೆ ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ, ಅಬ್ದುಲ್ ರಹಿಮಾನ್ ಕಯ್ಯಾರ್, ಕೆ.ಸಿ.ಎಫ್. ಓಮಾನ್ ರಾಷ್ಟ್ರೀಯ ಸಮಿತಿ ಸದಸ್ಯ ಸಿದ್ದೀಕ್ ಮಾಂಬ್ಳಿ, ಎಸ್.ವೈ.ಎಸ್. ಸುಳ್ಯ ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬಿ.ಎ., ಧಾರ್ಮಿಕ ವಿದ್ವಾಂಸರು, ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಎಸ್.ವೈ.ಎಸ್. ಗಾಂಧಿನಗರ ಯುನಿಟ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಬೊರುಗುಡ್ಡೆ‌ ಸ್ವಾಗತಿಸಿ, ಎಸ್.ಎಸ್.ಎಫ್. ಗಾಂಧಿನಗರ ಯುನಿಟ್ ಪ್ರಧಾನ ಕಾರ್ಯದರ್ಶಿ ಆಶಿಖ್ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading