ಪೆರಾಜೆ: ಜ್ಯೋತಿ ಪ್ರೌಢಶಾಲೆಯಲ್ಲಿ ಡ್ರಗ್ಸ್ ಜಾಗೃತಿ ಕಾರ್ಯಕ್ರಮ

ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂಪಾಜೆ ಆರಕ್ಷಕ ಠಾಣೆಯ ಎ ಎಸ್ ಐ ಬೋಪಯ್ಯ ಅವರು ಮಾತನಾಡಿ ಎನ್ ಡಿ ಪಿ ಎಸ್ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಮಾದಕ ವಸ್ತುಗಳ ಸೇವನದ, ಮಾರಾಟ ಮತ್ತು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ವಿದ್ಯಾರ್ಥಗಳು ಈ ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಹಾಳುಮಾಡಿಕೊಳ್ಳಬಾರದು. ಇಂತಹ ಚಟುವಟಿಕೆ ಕಂಡುಬಂದರೇ ಪೋಲೀಸರಿಗೆ ಮಾಹಿತಿ ನೀಡಿ ಎಂದರು. ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲವೆಂದು ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಮಹೇಶ್ ಕುಮಾರ್ ಮೇನಾಲ, ಹಡ್ ಕಾನ್ಸ್ಟೇಬಲ್ ರಮೇಶ್ ಎಚ್.ಪಿ., ಶಿಕ್ಷಕರಾದ ಜಯನಾಯಕ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading