ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ 2026

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆಯನ್ನು ಜೂ. 23 ರಂದು ಬೆಳ್ಳಾರೆ ಠಾಣಾಧಿಕಾರಿ ಹೀರಯ್ಯ ಎಚ್.ಡಿ. ಯವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಗಾಂಜಾ ಮತ್ತು ಅಫೀಮು, ಮೊಬೈಲ್ ಬಳಕೆ, ಸೈಬರ್ ಕ್ರೈಂ, ಅಪ್ರಾಪ್ತರ ವಾಹನ ಚಲಾವಣೆ ಮುಂತಾದ ಕುರಿತಾಗಿ ಕಾನೂನು ಮಾಹಿತಿಗಳನ್ನು ವಿವರವಾಗಿ ನೀಡಿದರು. ಹಾಗೆಯೇ ಸುತ್ತಮುತ್ತಲೂ ನಡೆಯುತ್ತಿರುವ ಮಾದಕ ವಸ್ತುಗಳ ಚಟುವಟಿಕೆಗಳ ಕುರಿತು ತಿಳಿಸಿ ಯಾವುದೇ ಕಾರಣಕ್ಕೂ ಬಲಿಯಾಗದಿರಿ ಎಂದು ಎಚ್ಚರಿಸಿದರು.

. . . . . . . . .

ವಿದ್ಯಾರ್ಥಿಗಳು ದೇಶದ ಭವಿಷ್ಯದ ಅಸ್ತಿ. ಈ ವಯಸ್ಸಿನಲ್ಲಿ ಗೆಳೆಯರ ಆಯ್ಕೆ ಬಹು ಪ್ರಾಮುಖ್ಯವಾಗುತ್ತದೆ. ಒಳ್ಳೆಯ ಆಲೋಚನೆಗಳನ್ನು ಈಗ ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಹಂತಕ್ಕೆ ತಲುಪುತ್ತೀರಿ ಎಂದು ಹಿತನುಡಿದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ಭವಿಷ್ಯದ
ಸಧೃಡ ಬದುಕಿಗೆ ಓದುವಿಕೆ ವಿದ್ಯಾಭ್ಯಾಸಕ್ಕಿಂತ ಸರಳವಾದ ದಾರಿ ಬೇರೊಂದಿಲ್ಲ. ದುರ್ವ್ಯಸನಗಳಿಗೆ
ಬಲಿಯಾಗದೆ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವದೇ ಯಶಸ್ವಿ ಬದುಕಿಗೆ ದಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಶಶಿಕಲ ಎಸ್. ಆಳ್ವ ಉಪಸ್ಥಿತರಿದ್ದರು.

10ನೇ ತರಗತಿ ಶಂತನುಕೃಷ್ಣ ಕೆ.ಎ. ಸ್ವಾಗತಿಸಿ, ದೇಚಮ್ಮ ಮತ್ತು ಬಳಗದವರು ಪ್ರಾರ್ಥಿಸಿ, ದ್ವಿತೀಯ ಪಿಯು ವಿದ್ಯಾರ್ಥಿನಿ ಹೆಚ್.ಎಸ್. ಶ್ರುತಜೈನ್ ವಂದಿಸಿ, ದ್ವಿತೀಯ ಪಿಯು ವಿದ್ಯಾರ್ಥಿನಿ ಆಯಿಷತ್ ಹನ್ನ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading