ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – “ಯೋಗವು ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ” : ಸವಣೂರು ಸೀತಾರಾಮ ರೈ

ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ ಯವರು ಉದ್ಘಾಟಿಸಿ ಮಾತಾನಾಡಿ, “ಯೋಗವು ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯೋಗವು ದೇಹದ ರೋಗವನ್ನು ದೂರ ಮಾಡುವ ಸಂಜೀವಿನಿ. ಯೋಗ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ತಿಳಿಸಿದರು. ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಸ್ಥಾಪಕರಾದ ಶರತ್ ಮರ್ಗಿಲಡ್ಕ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಯೋಗವು ಏಕಾಗ್ರತೆ ಆತ್ಮ ವಿಶ್ವಾಸ ಮತ್ತು ಶಿಸ್ತನ್ನು ಬೆಳೆಸುತ್ತದೆ. ಆರೋಗ್ಯಕರ ಜೀವನಕ್ಕೆ ಯೋಗ ಅತ್ಯುತ್ತಮ ಮಾರ್ಗವಾಗಿದೆ” ಎಂದು ಹೇಳಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಅಡ್ವಕೇಟ್ ಅಶ್ವಿನ್.ಎಲ್ ಶೆಟ್ಟಿ ಇವರು ಮಾತನಾಡಿ “ಯೋಗವು ಕೇವಲ ವ್ಯಾಯಾಮವಲ್ಲ ಅದು ಆರೋಗ್ಯಕರ, ಸಮತೋಲಿತ ಮತ್ತು ಸಂತೋಷದ ಜೀವನ ನಡೆಸುವ ಒಂದು ಜೀವನ ಶೈಲಿಯಾಗಿದೆ” ಎಂದು ವಿವರಿಸಿದರು.

. . . . . . . . .

ವೇದಿಕೆಯಲ್ಲಿ ಟ್ರಸ್ಟಿನ ಸದಸ್ಯರಾದ ರಶ್ಮಿ ಅಶ್ವಿನ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ತಾರನಾಥ ಕಾಯರ್ಗ, ಪ್ರಾಂಶುಪಾಲರಾದ ಶಶಿಕಲಾ.ಎಸ್ ಆಳ್ವ ಇವರು ಉಪಸ್ಥಿತರಿದ್ದರು.

. . . . . . .

ಕಾರ್ಯಕ್ರಮದಲ್ಲಿ ಅವಿ ಅಶ್ವಿನ್ ಶೆಟ್ಟಿ ಮೂರನೇ ತರಗತಿ ಸಂವಿಧಾನ ಪೀಠಿಕೆ ವಾಚಿಸಿ, ಶ್ರೇಯ ಮತ್ತು ಬಳಗದವರು ಪ್ರಾರ್ಥಿಸಿದರು. ಆಭೀಕ್ಷ ಅಜಿತ್ ಸಾಮಾಣಿ ಪ್ರಥಮ ಪಿಯುಸಿ ಇವರು ಸ್ವಾಗತಿಸಿ, ಆಯಿಷತ್ ಜಸ್ನ 10ನೇ ತರಗತಿ ಇವರು ಅತಿಥಿ ಪರಿಚಯ ವಾಚಿಸಿದರು. ಭೂಮಿಕ ರೈ ದ್ವಿತೀಯ ಪಿಯುಸಿ ಇವರು ವಂದಿಸಿದರು. ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading