ಅಜ್ಜಾವರ ಹಾಲು ಸೊಸೈಟಿಗೆ ಚುನಾವಣೆ – ಸಹಕಾರ ಭಾರತಿ ಗೆಲುವು

ಅಜ್ಜಾವರ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಮುಂದಿನ 5 ವರ್ಷದ ಆಡಳಿತ ಮಂಡಳಿಗೆ ಜೂ. 21ರಂದು ಚುನಾವಣೆ ನಡೆಯಿತು. ಸಂಘದ ಒಟ್ಟು 2 ಸ್ಥಾನಗಳಿಗೆ ಅವಿರೋಧ ಆಯ್ಕೆಯಾದರೇ ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆಯಿತು.‌ ಇದರಲ್ಲಿ ಸಹಕಾರ ಭಾರತೀಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ ಗುರುರಾಜ್ ಅಜ್ಜಾವರ ಹಾಗೂ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ ದಯಾನಂದ ಅಡ್ಪಂಗಾಯ ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದರು.

. . . . . . . . .

7 ಸಾಮಾನ್ಯ ಮೀಸಲು ನಿರ್ದೇಶಕ ಸ್ಥಾನಕ್ಕೆ 13 ಮಂದಿ ನಾಮಪತ್ರ ಸಲ್ಲಿಸಿದ್ದು ಚುನಾವಣೆಯಲ್ಲಿ ಬಾಲಕೃಷ್ಣ ಮುಡೂರು, ಲವಕುಮಾ‌ರ್ ಅಡ್ಪಂಗಾಯ, ರೇಖಾ ಜಯರಾಮ ಗುರುವಮೊಟ್ಟೆ,  ಪರಮೇಶ್ವರ ನಾರಾಲು, ನಾರಾಯಣ ಬಂಟ್ರಬೈಲು,  ರಾಜ್ ಕುಮಾರ್ ಅತ್ಯಾಡಿ, ಕೆ. ಕೇಶವ, ಮಹಿಳಾ ಮೀಸಲು 2 ನಿರ್ದೇಶಕ ಸ್ಥಾನದಿಂದ ಧನ್ಯ, ನಳಿನಾಕ್ಷಿ  ಗೆಲುವು ಸಾಧಿಸಿದ್ದಾರೆ.

. . . . . . .

ರಾಹುಲ್ ಅಡ್ಪಂಗಾಯ, ಬಾಲಚಂದ್ರ ಮುಡೂರು, ಜನಾರ್ದನ ನಾರಾಲು,  ಸುಲೋಚನಾ ರವೀಶ್ ಮಾವಿನಪಳ್ಳ, ಯತಿರಾಜ ಅಡ್ಪಂಗಾಯ,  ಶ್ವೇತಾ ಪುರುಷೋತ್ತಮ ಶಿರಾಜೆ ಪರಾಭವಗೊಂಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading