ಬೆಳ್ಳಾರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ವಾರ್ಷಿಕ ಸಭೆ ; ಅಧ್ಯಕ್ಷರಾಗಿ ಆನಂದ ಗೌಡ ಪೆರಿಯಾಣ ಪುನರಾಯ್ಕೆ

ಶ್ರೀ.ಕ್ಷೇತ್ರ.ಧ.ಗ್ರಾ.ಯೋ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ವಾರ್ಷಿಕ ಸಭೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಸಭೆಯಲ್ಲಿ ವರ್ಷದ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು. ಬೆಳ್ಳಾರೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆನಂದ ಗೌಡ ಪೆರಿಯಾಣ ಪುನರಾಯ್ಕೆಗೊಂಡರು. ಸಭೆಯಲ್ಲಿ ಇನ್ನಷ್ಟು ಜನಜಾಗೃತಿ ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು ಹೊಸ ಹೊಸ ಕಾರ್ಯಕ್ರಮ ಮಾಡಿಕೊಂಡು ವಲಯದ ಟೀಮ್‌ನ್ನು ಭದ್ರಗೊಳಿಸಬೇಕು ಎಂದು ಮಾತನಾಡಲಾಯಿತು.
ಸಭೆಯಲ್ಲಿ ವಲಯದ ಸದಸ್ಯರುಗಳಾದ ರಾಜೀವಿ.ಆರ್ ರೈ , ಆನಂದ ಗೌಡ ಪೆರಿಯಾಣ, ಬಾಲಕೃಷ್ಣ ಬೊಳ್ಳೂರ್, ನವೀನ್ ಸಾರಕೆರೆ ಉಪಸ್ಥಿತರಿದ್ದರು. 
ವಲಯದ ಮೇಲ್ವಿಚಾರಕರಾದ ಉದಯ ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading