ಸುಬ್ರಹ್ಮಣ್ಯ : ಕೆ.ಎಸ್.ಎಸ್ ಕಾಲೇಜಿನಲ್ಲಿ “ತರಗತಿವಾರು ಪ್ರತಿಭಾ ಪ್ರದರ್ಶನ ಸ್ಪರ್ಧೆ” – ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸಿನೆಮಾ ಕಲಾವಿದರಾದ ದೀಕ್ಷಿತ್ ಕುಂತೂರು ಪದವು

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದಲ್ಲಿ ಮೇ.07 ಹಾಗೂ ಮೇ.08 ರಂದು “ತರಗತಿವಾರು ಪ್ರತಿಭಾ ಪ್ರದರ್ಶನ ಸ್ಪರ್ಧೆ” ನಡೆಯಿತು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ್.ಪಿ.ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಟಿವಿ ಮತ್ತು ಸಿನೆಮಾ ಕಲಾವಿದರಾದ ದೀಕ್ಷಿತ್ ಕುಂತೂರು ಪದವು ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಐಕ್ಯೂಎಸಿ ಸಂಯೋಜಕರಾದ ಲತಾ.ಬಿ.ಟಿ ಹಾಗೂ ಸಾಂಸ್ಕೃತಿಕ ತಂಡದ ನಾಯಕಿ ಚೈತನ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೀಕ್ಷಿತ್ ರವರಿಂದ ಮಿಮಿಕ್ರಿ ಹಾಗೂ ಸಂಸ್ಥೆಯ ತೃತೀಯ ಬಿ.ಎ ವಿದ್ಯಾರ್ಥಿ ಹರಿಪ್ರಸಾದ್ ಮತ್ತು ತಂಡದವರಿಂದ ಕೊಳಲು ವಾದನ ನಡೆಯಿತು.
ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ. ವಿನ್ಯಾಸ್.ಹೆಚ್ ಸ್ವಾಗತಿಸಿ, ಸಾಂಸ್ಕೃತಿಕ ತಂಡದ ಸದಸ್ಯರಾದ ಭರತ್ ವಂದಿಸಿದರು.
ಮೇ.08 ರಂದು ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಪ್ರಥಮ ಬಹುಮಾನವನ್ನು ಅಂತಿಮ ಬಿ.ಎ ಪದವಿ, ದ್ವಿತೀಯ ಬಹುಮಾನವನ್ನು ದ್ವಿತೀಯ ಬಿ.ಕಾಂ ‘ಎ’ ಮತ್ತು ತೃತೀಯ ಬಹುಮಾನವನ್ನು ದ್ವಿತೀಯ ಬಿ.ಕಾಂ ‘ಬಿ’ ಪಡೆದುಕೊಂಡಿತು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಸಂಖ್ಯಾ ಅತ್ಯುತ್ತಮ ನಿರೂಪಕಿ ಬಹುಮಾನವನ್ನು ಪಡೆದುಕೊಂಡರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading