ಗುತ್ತಿಗಾರು : ಚೆಸ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಹಾಗೂ ಅರಿವು ಕೇಂದ್ರ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಮೇ.04 ರಿಂದ ಮೇ.09 ರವರೆಗೆ ಗುತ್ತಿಗಾರು ಗ್ರಾಮ ಪಂಚಾಯತ್ ನ ಪ.ವರ್ಗದ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಾಗಾರವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಜಿತ್.ಜಿ.ಕೆ, ಮಾಜಿ ಯೋಧರಾದ ಯಶವಂತ ಕಲ್ಮಕಾರು, ಟ್ರಸ್ಟ್ ಉಪಾಧ್ಯಕ್ಷರಾದ ಮೋಹನ್ ದಾಸ್ ಶಿರಾಜೆ, ಸುರೇಶ್ ಬಾಲಾಡಿ, ಜೆ.ಸಿ ಅಧ್ಯಕ್ಷರಾದ ದೇವಿ ಪ್ರಸಾದ್ ಚಿಕ್ಮುಳಿ, ಕಂದಾಯ ಇಲಾಖೆಯ ಸಿಬ್ಬಂದಿ ಲೋಕೇಶ್ ಕುಚ್ಚಾಲ, ಗ್ರಾಮ ಪಂಚಾಯತ್ ಸಿಬ್ಬಂದಿ ಜಯಪ್ರಕಾಶ್ ಕಾಂತಿಲ, ಡಾ. ರಾಜೇಶ್ವರಿ ಕಳಗಿ, ಯೋಗ ಗುರುಗಳಾದ ಶರತ್ ಮರ್ಗಿಲಡ್ಕ, ಚೆಸ್ ಅಧ್ಯಾಪಕರಾದ ರಮೇಶ್ ಕರಂಗಿಲಡ್ಕ, ದಿವ್ಯ ಸುಜನ್ ಗುಡ್ಡೆಮನೆ, ಅಭಿಲಾಷಾ ಮೋಟ್ನೂರು, ಲತಾ ಅಡ್ಕಾರ್, ಟ್ರಸ್ಟ್ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಜೊತೆಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಮಾರೋಪ ಸಮಾರಂಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳಾದ ದೇವರಾಜ್ ಮುತ್ಲಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಜಿತ್.ಜಿ.ಕೆ, ಟ್ರಸ್ಟ್ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಹಾಗೂ ಚೆಸ್ ಅಧ್ಯಾಪಕರಾದ ರಮೇಶ್ ಕರಂಗಿಲಡ್ಕ ಉಪಸ್ಥಿತರಿದ್ದರು.
ಒಂದು ವಾರಗಳ ಕಾಲ ನಡೆದ ಈ ತರಬೇತಿ ಕಾರ್ಯಾಗಾರದಲ್ಲಿ ಒಟ್ಟು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರಂತ್ ದೇವಶ್ಯ ಕಾರ್ಯಕ್ರಮ ನಿರೂಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading