ಸುಳ್ಯದಲ್ಲಿ ಪ್ರದರ್ಶನಗೊಂಡ ಭಾವ ತೀರ ಯಾನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ – ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ವಿಧಾನ ಪರಿಷತ್ ಶಾಸಕ ಗಣೇಶ್ ಕಾರ್ಣಿಕ್


ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ಸುಳ್ಯದ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ.08 ರಂದು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ವಿಧಾನ ಪರಿಷತ್ ಶಾಸಕ ಗಣೇಶ್ ಕಾರ್ಣಿಕ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್, ತಹಶೀಲ್ದಾರ್ ಕು. ಮಂಜುಳಾ, ಇಓ ರಾಜಣ್ಣ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ,  ಸುಪ್ರೀತ್ ಮೋಂಟಡ್ಕ, ಪಯಸ್ವಿನಿ ಜೇಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಸೇರಿದಂತೆ ಹಲವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿತ್ರ ತಂಡದ ನಟ,ನಟಿಯರು, ಚಿತ್ರದ ನಿರ್ಮಾಪಕರಾದ ಶೈಲೇಶ್ ಅಂಬೆಕಲ್ಲು ಸೇರಿದಂತ ಚಿತ್ರ ತಂಡ ನಟ ನಟಿಯರು ಉಪಸ್ಥಿತರಿದ್ದರು. ಸುಳ್ಯದ ಭಾರತ್ ಸಿನಿಮಾಸ್ ನಲ್ಲಿ ಮೇ.09 ರಂದು ಮಧ್ಯಾಹ್ನ 2 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸುಳ್ಯದ ಯುವ ಪ್ರತಿಭೆಗಳನ್ನು ಬೆಂಬಲಿಸುವಂತೆ ನಿರ್ಮಾಪಕರು ಮನವಿ ಮಾಡಿದ್ದಾರೆ.

ಕಳೆದ ಬಾರಿ ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ನಿರಂತರ 63 ದಿನಗಳ ಕಾಲ ಪ್ರದರ್ಶನಗೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

“ಭಾವ ತೀರ ಯಾನ”, ಸಿನಿಮಾದಲ್ಲಿ ಪ್ರಸ್ತುತ ಘಟನೆಗಳ ಬಗ್ಗೆ ಈಗಿನ ಜನತೆ ಕಲಿತುಕೊಳ್ಳಬೇಕಾದ ಅಂಶಗಳ ಉಲ್ಲೇಖಿಸಿ ಚಿತ್ರ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಯುವ ಉತ್ಸಾಹಿ ತಂಡವಿದ್ದು ಉತ್ತಮ ಸಾಧನೆ ಮಾಡಿದೆ. ಈ ಚಿತ್ರದಲ್ಲಿ ತೇಜಸ್ ಕಿರಣ್ ನಾಯಕ ನಟನಾಗಿ ಹಾಗೂ ಅರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿ ನಟಿಯರಾಗಿ ಹೊರಹೊಮ್ಮಿದ್ದಾರೆ. ಅಂತೆಯೇ ಹಿರಿಯರಾದ ರಮೇಶ್ ಭಟ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದು, ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ, ಕ್ಷಮಾ ಅಂಬೆಕಲ್ಲು ಸೇರಿದಂತೆ ಹಲವಾರು ನಟಿಯರು, ತಾರಾ ಬಳಗದಲ್ಲಿದ್ದಾರೆ. ಆರೋಹ ಫಿಲಂಸ್ ಬ್ಯಾನರ್‌ನಡಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿ. ಕೆ. ನಿರ್ಮಾಣ ಮಾಡಿದ್ದು, ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ, ಶಿವಶಂಕರ್ ನೂರಂಬಡ ಛಾಯಾಚಿತ್ರಾಗ್ರಹಣ ಹಾಗೂ ಸುಪ್ರೀತ್ ಬಿ. ಕೆ. ಸಂಕಲನ ಮಾಡಿದ್ದಾರೆ. ಸುಳ್ಯ ತಾಲೂಕಿನ ವಿವಿಧೆಡೆ ಕೂಡ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಜಯಪ್ರಕಾಶ್ ಕುಕ್ಕೇಟಿ, ವೈದ್ಯರ ಪಾತ್ರದಲ್ಲಿ ಡಾ. ಅನುಷಾ ಮಡಪ್ಪಾಡಿ ನಟಿಸಿದ್ದಾರೆ.‌

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading