ಎಸ್‌.ಡಿ.ಪಿ.ಐ 18ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯ, ಜೂನ್ 21 : ಸೋಶಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಪಕ್ಷದ 18ನೇ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲಾಯಿತು.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮಿರಾಝ್ ಸುಳ್ಯ ಅವರು ವಹಿಸಿದ್ದರು. ಅವರು ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಭಿಕರನ್ನು ಉದ್ದೇಶಿಸಿ ಮಾತನಾಡಿ ಪಕ್ಷದ ಕಳೆದ 18 ವರ್ಷಗಳ ಜನಸೇವಾ ಪಯಣ, ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟಗಳು ಹಾಗೂ ಜನಪರ ಚಟುವಟಿಕೆಗಳ ಕುರಿತು ವಿವರಿಸಿದರು‌.

. . . . . . .

ಎಸ್‌.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಕಲಾಂ ಸುಳ್ಯ ಮಾತನಾಡಿ ಪಕ್ಷದ ಬೆಳವಣಿಗೆ, ಸಂಘಟನಾ ಬಲವರ್ಧನೆ ಮತ್ತು ಮುಂಬರುವ ದಿನಗಳ ಕಾರ್ಯಯೋಜನೆಗಳ ಕುರಿತು ಸಂದೇಶ ಭಾಷಣ ಮಾಡಿದರು. 

ಈ ವಿಶೇಷ ದಿನದಂದು ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು, ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಫಾತಿಮಾ ಶಹ್ಲಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗಣ್ಯರು ಅವರ ಸಾಧನೆಯನ್ನು ಶ್ಲಾಘಿಸಿ, ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಪಿ ಅಬೂಬಕ್ಕರ್, ಆಬಿದ್ ಪೈಚಾರ್ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಆಬಿದ್ ಪೈಚಾರ್ ಉಪಸ್ಥಿತರಿದ್ದರು.

ಎಸ್‌.ಡಿ.ಪಿ.ಐ ಸುಳ್ಯ ವಿಧಾನಸಭಾ ಕಾರ್ಯದರ್ಶಿ ಸಿದ್ದೀಕ್ ಕೋಡಿಯೆಮ್ಮೆ ಸ್ವಾಗತಿಸಿದರು. ಮಾಧ್ಯಮ ಉಸ್ತುವಾರಿ ಸುಹೈಲ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು ಮತ್ತು ಅಡ್ವೊಕೇಟ್ ರಶೀದ್ ಅವರು ವಂದನಾರ್ಪಣೆ ಸಲ್ಲಿಸಿದರು. ಪಕ್ಷದ ಬ್ಲಾಕ್, ಬ್ರಾಂಚ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯರು, ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading