ಗುತ್ತಿಗಾರು : ಶ್ರೀ.ಕ್ಷೇ‌.ಧ ವಿಪತ್ತು ನಿರ್ವಹಣಾ ತಂಡದಿಂದ ಅಶಕ್ತ ಮಹಿಳೆಯ ಮನೆ ದುರಸ್ತಿ

ಗುತ್ತಿಗಾರು ಗ್ರಾಮದ ಮೊಗ್ರ ಮೂವದಲ್ಲಿ ಬಡತನದಲ್ಲಿರುವ ಮಹಿಳೆ ಶ್ರೀಮತಿ ಜಯಂತಿಯವರ ಮನೆಯ ಮಾಡು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿ ನೆರವಿಗೆ ಧಾವಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಊರವರು ದುರಸ್ತಿಗೊಳಿಸಿದರು.
ಗುತ್ತಿಗಾರು ಪಿ.ಎ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ರವರ ಮಾರ್ಗದರ್ಶನದಲ್ಲಿ ಹಳೆ ಶೀಟಿನ ಮಾಡನ್ನು ತೆಗೆದು 2 ಸಾಲು ಸಿಮೆಂಟ್ ಇಟ್ಟಿಗೆಯನ್ನು ಕಟ್ಟಿ ಮರದ ಬಡಿಗೆಯನ್ನು ಬಳಸಿ ಮಾಡಿನ ಕೆಲಸ ಮಾಡಿ ಶೀಟು ಹಾಕಲಾಯಿತು. ಈ ಸಂದರ್ಭದಲ್ಲಿ ಗ್ರಾಮಾಭಿವೃಧಿ ಯೋಜನೆಯ ಸೇವಾ ಪ್ರತಿನಿಧಿ ಲೋಕೇಶ್ವರ ಡಿ.ಆರ್, ಒಕ್ಕೂಟ ಅಧ್ಯಕ್ಷರಾದ ಮಧುಕರ ಮುಳುಬಾಗಿಲು, ಜಯರಾಮ ಪೈಕ, ಮಾಧವ ಎರ್ದಡ್ಕ, ಅಚ್ಚುತ ಗುತ್ತಿಗಾರು, ನಿತ್ಯಾನಂದ ಕಾಂತಿಲ, ಕೇಶವ ಕಾಂತಿಲ, ತುಂಗನಾಥ ಕಾಯನ ಕೋಡಿ, ಜಗದೀಶ ಪೈಕ, ಜಗದೀಶ ಚಿಕ್ಕುಳಿ, ಲೋಕೇಶ ಪೈಕ, ಭಾಸ್ಕರ ಮುಳುಬಾಗಿಲು ಸಹಕಾರ ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading