ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಮಹಾಸಭೆ ಹಾಗೂ ಆರೋಗ್ಯ ನಿಧಿ ಮತ್ತು ವಿದ್ಯಾನಿಧಿ ಹಸ್ತಾಂತರ ಕಾರ್ಯಕ್ರಮವು ಸುಳ್ಯದ ವರ್ತಕರ ಭವನ ಏ.26 ರಂದು ನಡೆಯಿತು.

. . . . . . . . .

ಸಂಘದ ಅಧ್ಯಕ್ಷ ವೆಂಕಟ್ರಮಣ ಬೇರ್ಪಡ್ಕ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ನೂತನ ಸಮಿತಿ ಅಧ್ಯಕ್ಷರಾಗಿ ಸುರೇಶ್ ಕರ್ಲಪ್ಪಾಡಿ ಹಾಗೂ ಕಾರ್ಯದರ್ಶಿ ಗೋಪಾಲಕೃಷ್ಣ ಮೊರಂಗಲ್ಲು, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಬೇರ್ಪಡ್ಕ, ಉಪಾಧ್ಯಕ್ಷರಾಗಿ ಹೇಮಾವತಿ ದಬ್ಬಡ್ಕ, ಜೊತೆ ಕಾರ್ಯದರ್ಶಿ ನಿತೇಶ್ ಎರ್ಮೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯ ಎರ್ಮೆಟ್ಟಿ ಹಾಗೂ ನಿರ್ದೇಶಕರುಗಳಾಗಿ ವೆಂಕಟ್ರಮಣ ಬೇರ್ಪಡ್ಕ, ಸಚಿತ್ ಕಲ್ಮಡ್ಕ , ಸತ್ಯವತಿ , ಚಂದ್ರಶೇಖರ ಉದ್ದಂತಡ್ಕ , ಸಂಜಯ್ ನೆಟ್ಟಾರು, ಸೌಮ್ಯ ರಮೇಶ್ ಇರಂತಮಜಲು, ಕೇಶವ ಮೊರಂಗಲ್ಲು, ವಿಶಾಲಾಕ್ಷಿ ಮೊರಂಗಲ್ಲು ಹಾಗೂ ಪ್ರವೀಣ್ ಕುಮಾರ್ ಆಯ್ಕೆಯಾದರು. ಆಂತರಿಕ ಲೆಕ್ಕಪರಿಶೋಧಕರಾಗಿ ಮಹಾಲಿಂಗನ್ ಭಾಜರ್ ತೊಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ವಕೀಲರಾದ ನಾರಾಯಣ ಕೆ ಆಯ್ಕೆಯಾದರು.

. . . . . . .

ಅಗಲಿದ ಸಮುದಾಯದ ಹಿರಿಯ ಚೇತನಗಳಿಗೆ ಗೌರವ ನಮನ ಸಲ್ಲಿಸಿ ಬಳಿಕ ಅನಾರೋಗ್ಯದಿಂದ ಬಳಲುತ್ತಿರುವ 5 ಜನರಿಗೆ ಹಾಗೂ ಹತ್ತನೇ ತರಗತಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.

ಕಾರ್ಯದರ್ಶಿ ಸಂಜಯ್ ನೆಟ್ಟಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading