ನಿಡ್ವಾಳ ಬ್ರಹ್ಮಕಲಶೋತ್ಸವ – ಸಭಾ ಕಾರ್ಯಕ್ರಮ ;  ಸನಾತನ ಧರ್ಮದ ಆಳ ಎಷ್ಟಿದೇ ಎನ್ನುವುದಕ್ಕೆ ನಿಡ್ವಾಳವೇ ಒಳ್ಳೆಯ ನಿದರ್ಶನ – ಭಗವಂತ ಇಚ್ಛಿಸಿದ್ದು ಮಾತ್ರ ನಡೆಯುತ್ತದೆ – ಪ್ರಸಾದ್ ಮುನಿಯಂಗಳ; ಎಲ್ಲರ ಸಹಕಾರದಿಂದ ಕ್ಷೇತ್ರಕ್ಕೆ ಶಕ್ತಿ ಬಂದಿದೆ – ಭಾಗೀರಥಿ ಮುರುಳ್ಯ

ಸನಾತನ ಧರ್ಮದ ಆಳ ಎಷ್ಟಿದೇ ಎನ್ನುವುದಕ್ಕೆ ನಿಡ್ವಾಳವೇ ಒಳ್ಳೆಯ ನಿದರ್ಶನ ಎಂದು ದೇಗುಲದ ವಾಸ್ತುಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ ಹೇಳಿದರು.

. . . . . . . . .

ಅವರು ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಏ.25 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹಲವು ವರ್ಷಗಳ ಕಾಲ ಚೊಕ್ಕಾಡಿಯಲ್ಲಿ ರಾಮನಾಗಿ ಮತ್ತೆ ಇಲ್ಲಿ ಮಹಾವಿಷ್ಣುವಾಗಿ ಆರಾಧನೆಗೊಂಡಿರುವುದು ವಿಶೇಷ. ಉಡುಪಿಯಲ್ಲಿ ಕನಕನ ಭಕ್ತಿಗೆ ಶ್ರೀಕೃಷ್ಣ ಪಶ್ಚಿಮಕ್ಕೆ ಮುಖ ತಿರುಗಿಸಿದಂತೆ ಇಲ್ಲಿ ಊರವರ ಅನನ್ಯ ಭಕ್ತಿಗೆ ಇಡೀ ದೇವಸ್ಥಾನವೇ ಪಶ್ಚಿಮಕ್ಕೆ ತಿರುಗಿದೆ. ಭಗವಂತನ‌ ತನ್ನ ಇಚ್ಚೆಗೆ ಅನುಸಾರವಾಗಿ ನಡೆಸುತ್ತಾನೆ ಎನ್ನುವುದಕ್ಕೆ ಇದುವೇ ಉದಾಹರಣೆ. ನಾವೂ ಹೇಳಿದ್ದು ಯಾವುದು ನಡೆಯುವುದಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ. ಭಗವಂತ ಏನು ಇಚ್ಛಿಸುತ್ತಾನೆ ಅದು ಮಾತ್ರ ನಡೆಯುತ್ತದೆ ನಾವು ಇಲ್ಲಿ ಏನು ಆಲ್ಲ ಎಂಬುದನ್ನು ಮಹಾವಿಷ್ಣು ತೋರಿಸಿಕೊಟ್ಟಿದ್ದಾನೆ ಎಂದರು.

. . . . . . .

ಶಾಸಕಿ ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಚೊಕ್ಕಾಡಿಯಲ್ಲಿ ರಾಮನಾಗಿ ನಿಡ್ವಾಳದಲ್ಲಿ ಮಹಾವಿಷ್ಣುವಾಗಿರುವುದು ಹೆಮ್ಮೆಯ ವಿಷಯ. ಎಲ್ಲರೂ ಧರ್ಮದ ಆಧಾರ ಒಗ್ಗಟ್ಟಾಗಿ ಸೇರಿದ್ದೇವೆ. ಭಗವಂತನಿಗೆ ನಾವೆಲ್ಲರೂ ಸಮಾನ‌. ನಾವೆಲ್ಲಾ ವಿಷ್ಣುವಿನ ಮಕ್ಕಳು.‌ ಎಲ್ಲರ ಸಹಕಾರದಿಂದ ದೇವಸ್ಥಾನ ಜೀರ್ಣೋದ್ಧಾರ ಆಗಿದ್ದು, ಕ್ಷೇತ್ರಕ್ಕೆ ಶಕ್ತಿ ಬಂದಿದೆ.‌ ದೇವಸ್ಥಾನಕ್ಕೆ ಬರುವಾಗ ಸಾಂಪ್ರದಾಯಿಕ ಉಡುಗೆ ತೊಡಬೇಕು ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕು ಎಂದರು.

ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಚೊಕ್ಕಾಡಿಯಲ್ಲಿ ರಾಮನಾಗಿ ಇಲ್ಲಿ ಮಹಾವಿಷ್ಣುವಾಗಿ ಆರಾಧನೆಗೊಂಡಿರುವುದೇ ಪವಾಡ ಎಂದರು. ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಶ್ರೀರಾಮ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಆನಂದ ಗೌಡ ಕಂಬಳ, ಪುತ್ತೂರಿನ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು, ಪಂಜ ಪ್ರಾ‌.ಕೃ.ಪ.ಸ.ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಪುತ್ಯ, ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರ್, ಪಂಜದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಚಾಮುಂಡಿ ದೈವಸ್ಥಾನದ ಸ್ಥಳದಾನಿ ರಫೀಕ್ ಸಿ.ಎಂ. ಐವತ್ತೊಕ್ಲು, ಗುಳಿಗ ದೈವದ ಕಟ್ಟೆಯ ಸೇವಾರ್ಥಿ ಮತ್ತು ಸ್ಥಳದಾನಿ ಜಗನ್ನಾಥ ರೈ ಕುಳಾಯಿತ್ತೋಡಿ, ದೇಗುಲದ ಕಾಷ್ಠ ಶಿಲ್ಪಿ ವಸಂತ ಆಚಾರ್ಯ, ನಿಂತಿಕಲ್ಲು ವಾಣಿ ಕಾಂಪ್ಲೆಕ್ಸ್ ಮಾಲಕರಾದ ಶ್ರೀಮತಿ ವೀಣಾ ಕರುಣಾಕರ ಕೇರ್ಪಡ , ನಿವೃತ್ತ ಪ್ರಾಂಶುಪಾಲ ಚಿದಾನಂದ ಬಾಳಿಲ, ನಿವೃತ್ತ ಅಧ್ಯಾಪಕ ಸೀತಾರಾಮ ಗೌಡ ಕುದ್ವ ಆಗಮಿಸಿದ್ದರು.

ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಟ್ರಸ್ಟ್ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನೇಮಿರಾಜ್ ಪಲ್ಲೋಡಿ, ಆಡಳಿತ ಟ್ರಸ್ಟ್ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಕುಸುಮಾಧರ ಕರಿಮಜಲು, ಕಾರ್ಯದರ್ಶಿ ಅಶೋಕ್ ಮೇಲ್ಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಕುಶಾಲಪ್ಪ ಮೇಲ್ಪಾಡಿ, ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕ ರಾಮಕೃಷ್ಣ ಪುರಿಯ, ಅರ್ಚಕ ಅಕ್ಷಯ ಭಟ್ ಉಪಸ್ಥಿತರಿದ್ದರು.

ಸನ್ಮಾನ
ಈ ಸಂದರ್ಭದಲ್ಲಿ ದೇಗುಲದ ವಾಸ್ತುಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ, ಶ್ರೀ ಚಾಮುಂಡಿ ದೈವದ ಛಾವಡಿಯ ಸ್ಥಳದಾನಿಗಳ ಪರವಾಗಿ ರಫೀಕ್ ಸಿ.ಎಂ. ಐವತ್ತೊಕ್ಲು, ಗುಳಿಗ ದೈವದ ಕಟ್ಟೆಯ ಸೇವಾರ್ಥಿ ಮತ್ತು ಸ್ಥಳದಾನಿ ಜಗನ್ನಾಥ ರೈ ಕುಳಾಯಿತ್ತೋಡಿ, ದೇಗುಲದ ಕಾಷ್ಠ ಶಿಲ್ಪಿ ವಸಂತ ಆಚಾರ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನೇಮಿರಾಜ್ ಪಲ್ಲೋಡಿ ಸ್ವಾಗತಿಸಿ, ಗುರುಪ್ರಸಾದ್ ತೋಟ ವಂದಿಸಿದರು. ಪ್ರಣತಿ ಜೋಗಿಬೆಟ್ಟು ಪ್ರಾರ್ಥಿಸಿದರು. ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಸಂಭ್ರಮ
ಸಭಾಕಾರ್ಯಕ್ರಮದ ಬಳಿಜ ಕರಿಕ್ಕಳ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಸಂಭ್ರಮ, ರಾತ್ರಿ ಪುತ್ತೂರಿನ ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ತಂಡದ ಪಂಜ ಶಾಖೆಯವರಿಂದ “ನೃತ್ಯವೈಭವ” ನಡೆಯಿತು.

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ನಿರ್ಮಾಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.24 ರಂದು ಭವ್ಯ ಹಸಿರುವಾಣಿ ಮೆರವಣಿಗೆಯೊಂದಿಗೆ ಆರಂಭಗೊಂಡಿದ್ದು ಮೇ.3ರ ತನಕ ಕಾಲ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಎ.29ರಂದು ಬೆಳಿಗ್ಗೆ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಪುನ: ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಶ್ರೀ ಮಹಾಗಣಪತಿ ದೇವರ ಪುನ: ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ ನಡೆಯಲಿದೆ. ಎ.2 ರಂದು ಬೆಳಿಗ್ಗೆ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನೆರವೇರಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading