ಕವನ : ಕರ್ಮಗಳ ಫಲ…

ಬದುಕಿನಲ್ಲಿ ಸೋತ ಜೀವಕ್ಕೆ ನಮ್ಮ ಪ್ರೋತ್ಸಾಹದ ನುಡಿಯೊಂದೇ ಸಾಕು, ಮತ್ತೆದ್ದು ಮುನ್ನಡೆಯಲು ಆ ಜೀವಕ್ಕೆ ಅದು ಪ್ರೇರಣೆಯಾದೀತು, ಆ ಜೀವದ ನಾಳಿನ ಗೆಲುವಿಗೆ ನಮ್ಮ ಇಂದಿನ ಪ್ರೋತ್ಸಾಹದ ನುಡಿಯೇ ಕಾರಣವಾದೀತು…
ಬದುಕಿನಲ್ಲಿ ನೊಂದ ಜೀವಕ್ಕೆ ನಮ್ಮ ಸಾಂತ್ವನದ ಮಾತೊಂದೇ ಸಾಕು, ನೋವುಗಳ ತೊರೆದು ನಲಿವಿನೆಡೆಗೆ ಮುನ್ನಡೆಯಲು ಆ ಜೀವಕ್ಕೆ ಅದು ಸ್ಥೈರ್ಯವನ್ನು ನೀಡೀತು, ಆ ಜೀವದ ನಾಳಿನ ನಗುವಿಗೆ ನಮ್ಮ ಇಂದಿನ ಸಾಂತ್ವನದ ಮಾತೇ ಕಾರಣವಾದೀತು…
ಕಷ್ಟದಲ್ಲೇ ಕೊರಗಿ ಕರಗುತ್ತಿರುವ ಜೀವಕ್ಕೆ ನಾವು ಕೈಚಾಚಿ ಒಂದಿಷ್ಟು ಧೈರ್ಯವನ್ನು ತುಂಬಿದರೆ ಸಾಕು, ಕಷ್ಟಗಳನ್ನು ಮೆಟ್ಟಿ ಸುಖದೆಡೆಗೆ ಸಾಗಲು ಆ ಜೀವಕ್ಕೆ ಅದು ಬಹುದೊಡ್ಡ ಶಕ್ತಿಯನ್ನು ತುಂಬೀತು, ಆ ಜೀವದ ನಾಳಿನ ಸುಖದ ಬದುಕಿಗೆ ನಾವು ಇಂದು ಕೈಚಾಚಿ ತುಂಬಿದ ಧೈರ್ಯವೇ ಕಾರಣವಾದೀತು…
ಈ ರೀತಿ ಇನ್ನೊಬ್ಬರ ಕಷ್ಟ-ನೋವು-ಸೋಲುಗಳಿಗೆ ಸ್ಪಂದಿಸುವ ಗುಣ ನಮ್ಮಲ್ಲಿದ್ದರೆ ಸಾಕು, ನಮ್ಮ ಬದುಕಿನಲ್ಲಿ ಕೂಡ ಎಲ್ಲವೂ ಒಳ್ಳೆಯದೇ ಆದೀತು, ಇಂದಿಗೆ ಕೆಡುಕೆಂದು ಅನಿಸುವ ಬಹಳಷ್ಟು ಘಟನೆಗಳು ಭವಿಷ್ಯದ ಬದುಕಿನಲ್ಲಿ ನಮಗೆ ಒಳಿತನ್ನೇ ಮಾಡೀತು, ನೆನಪಿರಲಿ ಒಳ್ಳೆಯ ಕರ್ಮಗಳ ಫಲ ಯಾವಾಗಲೂ ಒಳ್ಳೆಯದೇ ಆದೀತು… ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading