ಸುಳ್ಯ ನಗರ ನದಿಗೆ ಸೇರುವ ತ್ಯಾಜ್ಯಗಳನ್ನು ಐ&ಡಿ ತಂತ್ರಜ್ಞಾನದ ಮೂಲಕ ಸಂಸ್ಕರಿಸಲು ಅನುದಾನ ಒದಗಿಸಿ ಅನುಷ್ಠಾನಗೊಳಿಸುವಂತೆ ನಗರಾಭಿವೃದ್ಧಿ ಸಚಿವರಿಗೆ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ

ಸುಳ್ಯ ನಗರವು ಏತ್ತರ, ತಗ್ಗುಗಳಿಂದ ಕೂಡಿದ ಪ್ರದೇಶವಾಗಿದ್ದು, ನಗರ ವ್ಯಾಪ್ತಿಯುದ್ಧಕ್ಕೂ ಪಯಸ್ವಿನಿ ನದಿ, ಕಂಡಡ್ಕ ಹೊಳೆ, ಕನಿಕರ ಪಳ್ಳ ಹಳ್ಳ ಹರಿದು ಹೋಗುವ ವಿಶಿಷ್ಟ ಭೋಗೋಳಿಕ ಹಿನ್ನಲೆಯ ಪ್ರದೇಶವಾಗಿರುತ್ತದೆ. ಚರಂಡಿ, ಕಾಲುವೆಗಳಲ್ಲಿ ಹರಿಯುವ ಮಲಿನ ನೀರುಗಳು ಅಲ್ಲಲ್ಲಿ ಹೊಳೆಗೆ ಸೇರುತ್ತಿದ್ದು, ಸದ್ರಿ ತ್ಯಾಜ್ಯಗಳು ನದಿಗೆ ಸೇರುವ ನಾಲ್ಕೈದು ಕಡೆಗಳಲ್ಲಿ ಐ&ಡಿ ತಂತ್ರಜ್ಞಾನದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕಡಿಮೆ ಜಾಗದಲ್ಲಿ ನಿರ್ಮಿಸುವ ಮಿನಿ ಪ್ಲಾಂಟ್, ಶುದ್ದೀಕರಣ ಘಟಕಗಳನ್ನು ಸ್ಥಾಪಿಸಲು ಅನುದಾನ ಒದಗಿಸಿ ಕಾಮಗಾರಿ ಅನುಷ್ಠಾನಗೊಳಿಸುವಂತೆ ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ್ ರವರಿಗೆ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ ಮಾಡಿದರು. ಈ ಯೋಜನೆಗಳು ಈಗಾಗಲೇ ಕೆ.ಯು.ಡಬ್ಲ್ಯೂ.ಎಸ್ ಮಾರ್ಗದರ್ಶನದಲ್ಲಿ ಕೆ.ಯು.ಐ.ಡಿ.ಎಫ್.ಸಿ ಮೂಲಕ ಬೇರೆ ಬೇರೆ ನಗರಗಳಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಇದೇ ಮಾದರಿಯ ಯೋಜನೆ ಶಿಕ್ಷಣ ಕಾಶಿ ಎನಿಸಿಕೊಂಡಿರುವ, ರಬ್ಬರ್, ಅಡಿಕೆ ಮೊದಲಾದ ವಾಣಿಜ್ಯ ಕೇಂದ್ರ, ಪ್ರವಾಸಿ ತಾಣ ಕೊಡಗು ಜಿಲ್ಲೆ, ಕೇರಳ ರಾಜ್ಯದ ಗಡಿ ಪ್ರದೇಶವಾಗಿರುವ ಸುಳ್ಯ ನಗರಕ್ಕೆ ಅತೀ ಅಗತ್ಯವಾಗಿರುತ್ತದೆ ಎಂದು ಸಚಿವರಿಗೆ ಕೆ.ಎಂ. ಮುಸ್ತಫ ಮನವರಿಕೆ ಮಾಡಿ ಕೊಟ್ಟರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ನೆಟ್ ವರ್ಕ್ ನಲ್ಲಿ ಸುಳ್ಯ ನಗರವನ್ನು ಸೇರಿಸಲು ಕ್ರಮವಹಿಸುವುದಾಗಿ ಮತ್ತು ಈ ಬಗ್ಗೆ ಪರಿಶೀಲಿಸಲು ತಜ್ಞರ ತಂಡವನ್ನು ಕಳುಹಿಸುವುದಾಗಿ ತಿಳಿಸಿದರು.
ಏನಿದು ಇಂಟರ್ ಸೆಪ್ಸೆನ್ ಮತ್ತು ಡೈವರ್ಷನ್(ಐ&ಡಿ) ತಂತ್ರಜ್ಞಾನ : ನದಿ, ಕಾಲುವೆಗಳ ಮಾಲಿನ್ಯ ಕಡಿಮೆಮಾಡಲು ಹೊರಚರಂಡಿ, ತೋಡು, ಹಳ್ಳಗಳ ಮೂಲಕ ನದಿಗೆ ಸೇರುವ ಮಲಿನಗಳನ್ನು ಜೈವಿಕ ಅಥವಾ ಇನ್ನಿತರ ತಾಂತ್ರಿಕತೆ ಬಳಸಿ ವಿವಿಧ ಕಡೆಗಳಲ್ಲಿ ತಡೆ ಹಿಡಿದು, ಪೈಪ್ ಲೈನ್ ಟ್ಯಾಂಕ್ ಅಳವಡಿಸಿ ಕಡಿಮೆ ಜಾಗದಲ್ಲಿ ಮಿನಿ ಶುದ್ದೀಕರಣ ಘಟಕ ಸ್ಥಾಪಿಸಿ ತ್ಯಾಜ್ಯಗಳನ್ನು ಒಳ ಚರಂಡಿ ಪ್ಲಾಂಟ್ ಗಳಿಗೆ ಸಾಗಿಸುವುವುದು ಇದರಿಂದ ನದಿ ಮಾಲಿನ್ಯ ಕಡಿಮೆಯಾಗುತ್ತದೆ. ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯದ ರಕ್ಷಣೆ ಸಾಧ್ಯ. ಈಗಾಗಲೇ ಸಣ್ಣ ಸಣ್ಣ ಪಟ್ಟಣಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ಕೆ.ಎಂ. ಮುಸ್ತಫಾ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading