“ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಆಟೋ ಚಾಲಕರ ಸೇವೆ ಅನನ್ಯ, ಶ್ಲಾಘನೀಯ – ಆಟೋ ಚಾಲಕರ ಮಕ್ಕಳು ಮುಂದೆ ಪೈಲೆಟ್ ಆಗಿ ಮೂಡಿಬರಲಿ” : ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ

ಸುಬ್ರಹ್ಮಣ್ಯ ಏಪ್ರಿಲ್ 15 : “ಸುಬ್ರಹ್ಮಣ್ಯದ ಆಟೋ ಚಾಲಕರು ದೂರದ ಊರುಗಳಿಂದ ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಥಮ ಮಾಹಿತಿದಾರರಾಗಿರುತ್ತಾರೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ ಕುಕ್ಕೆ ಕ್ಷೇತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿ ಅವರಿಗೆ ನೀಡುವ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಆಟೋ ಚಾಲಕರ ಮಕ್ಕಳು ವಿಮಾನದ ಪೈಲೆಟ್ ಆಗಬೇಕು. ಅವರು ಆಗಸದಲ್ಲಿ ಆಟೋ ಚಾಲಕರನ್ನ ನೋಡಿ ಖುಷಿಪಡುವಂತಾಗಬೇಕು” ಎಂದು ಸುಳ್ಳು ಶಾಸಕಿ ಕು.ಭಾಗೀರಥಿ ಮರುಳ್ಯ ನುಡಿದರು. ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನ ಘಟ್ಟದ ಬಳಿ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಆಟೋ ಸ್ಟ್ಯಾಂಡನ್ನು ಉದ್ಘಾಟಿಸಿ ಮಾತನಾಡಿದರು. 
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷ ರಾಜೇಶ್ ಎನ್.ಎಸ್ ವಹಿಸಿದ್ದರು. 
ವೇದಿಕೆಯಲ್ಲಿ ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್, ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಗಿರೀಶ್ ಪೈಲಾಜೆ, ಶಕ್ತಿ ಕೇಂದ್ರದ ಅಧ್ಯಕ್ಷ ಮಧುಸೂಧನ ಓಡೋಳಿ, ಆಟೋ ಚಾಲಕ ಸಂಘದ ಗೌರವಾಧ್ಯಕ್ಷ ಗಿರಿಧರ ಹೊಸಳ್ಳಿಕೆ, ಕುಕ್ಕೆ ಶ್ರೀಆಟೋ ಚಾಲಕ ಸಂಘದ ಅಧ್ಯಕ್ಷ ಭುವನೇಶ್, ಬಿ.ಎಂ.ಎಸ್ ಆಟೋ ಚಾಲಕ ಸಂಘದ ಅಧ್ಯಕ್ಷ ಕಿರಣ ಪೈಲಾಜೆ ಹಾಗೂ ಎರಡು ಸಂಘಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಕ್ಕೆ ಶ್ರೀ ಆಟೋ ಚಾಲಕರು ಹಾಗೂ ಬಿಎಂಎಸ್ ಆಟೋ ಚಾಲಕ ಸಂಘದಿಂದ ಶಾಸಕರನ್ನು ಗೌರವಿಸಲಾಯಿತು.
ಆಟೋ ಸ್ಟ್ಯಾಂಡನ್ನು ನಿರ್ಮಿಸಲು ಮುತುವರ್ಜಿ ವಹಿಸಿದ ಗಿರೀಶ್ ಪೈಲಾಜೆಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ದಿಲೀಪ್ ಉಪ್ಪಳಿಕೆ ಸ್ವಾಗತಿಸಿದರು. ಹೇಮಕರ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಚಿಂತನ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading