ಇಂದಿನ(ಏಪ್ರಿಲ್ 15) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕೊಬ್ಬರಿ ಹಾಗೂ ಒಣ ಕೊಕ್ಕೋ ಬೆಲೆ ಏರಿಕೆ ; ಅಡಿಕೆ ಮತ್ತು ಕಾಳುಮೆಣಸು ಧಾರಣೆಯಲ್ಲಿ ಅಲ್ಪ ಇಳಿಕೆ..! – ಅಡಿಕೆ, ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 15 ಏಪ್ರಿಲ್ 2026
ವಾರ : ಬುಧವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 15) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 260-305-460-482/485
ಹಳೆ ಅಡಿಕೆ : 395-460-552/555
ಡಬಲ್ ಚೋಲ್ : 390-460-552/555
ಫಟೋರ : 280-400 ರಿಂದ 405
ಉಳ್ಳಿಗಡ್ಡೆ : 165-290
ಕರಿಗೋಟು : 230-265
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ಇಂದು(ಏಪ್ರಿಲ್ 15) ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯು ಮತ್ತೆ ಕುಸಿತ ಕಂಡಿದೆ : ಕಳೆದ ಸೋಮವಾರ(ಏಪ್ರಿಲ್ 13) ಗರಿಷ್ಠ 490 ರೂಪಾಯಿಗಳಿದ್ದ ಹೊಸ ಅಡಿಕೆಯ ಬೆಲೆಯು ಇಂದು 485 ರೂಪಾಯಿಗಳಿಗೆ ತಲುಪುವ ಮೂಲಕ ಪ್ರತಿ ಕೆಜಿಗೆ 5 ರೂಪಾಯಿಗಳಷ್ಟು ಇಳಿಕೆ ದಾಖಲಿಸಿದೆ. ಅದೇ ರೀತಿ ಫಟೋರ ಅಡಿಕೆ ಬೆಲೆಯಲ್ಲೂ ಅಲ್ಪ ಇಳಿಕೆಯಾಗಿದ್ದು, ಗರಿಷ್ಠ 405 ರೂಪಾಯಿಗಳಲ್ಲಿ ಮಾರಾಟವಾಗುತ್ತಿದೆ. ಉಳಿದಂತೆ ಹಳೆ ಅಡಿಕೆ ಮತ್ತು ಡಬಲ್ ಚೋಲ್ ಬೆಲೆಗಳು ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿ ಮುಂದುವರಿದಿವೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 585-685
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-310
ಕೊಬ್ಬರಿ : 150-190
ಕೊಬ್ಬರಿ ಮತ್ತು ಒಣ ಕೊಕ್ಕೋ ಧಾರಣೆಯಲ್ಲಿ ಚೇತರಿಕೆ : ಇಂದು(ಏಪ್ರಿಲ್ 15) ಕೊಬ್ಬರಿ ಮತ್ತು ಒಣ ಕೊಕ್ಕೋ ಬೆಲೆಗಳು ಏರಿಕೆ ಕಂಡಿವೆ. ಕಳೆದ ಸೋಮವಾರ(ಏಪ್ರಿಲ್ 13) 180 ರೂಪಾಯಿಗಳಿದ್ದ ಕೊಬ್ಬರಿಯು ಇಂದು 190 ರೂಪಾಯಿಗಳಿಗೆ ಏರಿಕೆಯಾದರೆ, ಒಣ ಕೊಕ್ಕೋ 310 ರೂಪಾಯಿಗಳ ಉನ್ನತ ಮಟ್ಟವನ್ನು ತಲುಪಿದೆ.
ಕಾಳುಮೆಣಸು ಧಾರಣೆಯಲ್ಲಿ ಅಲ್ಪ ಕುಸಿತ : ಸೋಮವಾರ(ಏಪ್ರಿಲ್ 13) 690 ರೂಪಾಯಿಗಳವರೆಗೆ ಮಾರಾಟವಾಗಿದ್ದ ಕಾಳುಮೆಣಸಿನ ಗರಿಷ್ಠ ಬೆಲೆಯು ಇಂದು 685 ರೂಪಾಯಿಗಳಿಗೆ ಕುಸಿತ ಕಂಡಿದೆ. ಹಸಿ ಕೊಕ್ಕೋ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸ್ಥಿರತೆ ಮುಂದುವರಿದಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading