ಇಂದಿನ(ಏಪ್ರಿಲ್ 13) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು ಬೆಲೆಯಲ್ಲಿ ಏರಿಕೆ, ಅಡಿಕೆ ಧಾರಣೆ ಅಲ್ಪ ಇಳಿಕೆ..! ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 13 ಏಪ್ರಿಲ್ 2026
ವಾರ : ಸೋಮವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 13) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 260-305-460-487/490
ಹಳೆ ಅಡಿಕೆ : 395-460-552/555
ಡಬಲ್ ಚೋಲ್ : 390-460-552/555
ಫಟೋರ : 280-400 ರಿಂದ 410
ಉಳ್ಳಿಗಡ್ಡೆ : 165-290
ಕರಿಗೋಟು : 230-265
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ಇಂದು (ಏಪ್ರಿಲ್ 13) ಹೊಸ ಅಡಿಕೆ ಧಾರಣೆಯಲ್ಲಿ ಅಲ್ಪ ಮಟ್ಟದ ಇಳಿಕೆ ಕಂಡುಬಂದಿದೆ : ಕಳೆದ ಶುಕ್ರವಾರ(ಏಪ್ರಿಲ್ 10) 495 ರೂಪಾಯಿಗಳಿದ್ದ ಹೊಸ ಅಡಿಕೆಯ ಗರಿಷ್ಠ ಬೆಲೆಯು ಇಂದು 490 ರೂಪಾಯಿಗಳಿಗೆ ಅಂದರೆ ಪ್ರತಿ ಕೆಜಿಗೆ 5 ರೂಪಾಯಿಗಳಷ್ಟು ಇಳಿಕೆ ದಾಖಲಿಸಿದೆ. ಉಳಿದಂತೆ ಹಳೆ ಅಡಿಕೆ ಹಾಗೂ ಅಡಿಕೆಯ ಇತರ ವಿಭಾಗಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೆ ಸ್ಥಿರತೆ ಮುಂದುವರಿದಿದೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 590-690
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-300
ಕೊಬ್ಬರಿ : 150-180
ಇಂದು(ಏಪ್ರಿಲ್ 13) ಕಾಳುಮೆಣಸು ಧಾರಣೆಯಲ್ಲಿ ಪ್ರತಿ ಕೆಜಿಗೆ 10 ರೂಪಾಯಿಗಳಷ್ಟು ಏರಿಕೆ ದಾಖಲಾಗಿದ್ದು, ಕಳೆದ ಶುಕ್ರವಾರ(ಏಪ್ರಿಲ್ 10) 680 ರೂಪಾಯಿಗಳಿದ್ದ ಗರಿಷ್ಠ ಬೆಲೆಯು ಇಂದು 690 ರೂಪಾಯಿಗಳಿಗೆ ತಲುಪಿದೆ.
ಕೊಬ್ಬರಿ ಹಾಗೂ ಕೊಕ್ಕೋ : ಬದಲಾವಣೆ ಇಲ್ಲ(ಸ್ಥಿರ)

ರಬ್ಬರ್ ಧಾರಣೆ
ಗ್ರೇಡ್ : 226.00
ಲಾಟ್ : 198.00
ಸ್ಕ್ರ್ಯಾಪ್ ಪ್ರಥಮ ದರ್ಜೆ : 137.50
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 128.50
ಇಂದು(ಏಪ್ರಿಲ್ 13) ರಬ್ಬರ್ ಧಾರಣೆಯು ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಕಳೆದ ಶುಕ್ರವಾರ(ಏಪ್ರಿಲ್ 10)ದ ದರದಲ್ಲೇ ಮುಂದುವರಿದಿದೆ. ಮಾರುಕಟ್ಟೆಯಲ್ಲಿ ಇಂದು ಗ್ರೇಡ್ ರಬ್ಬರ್ 226.00 ರೂಪಾಯಿ ಹಾಗೂ ಲಾಟ್ ರಬ್ಬರ್ 198.00 ರೂಪಾಯಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ ಸ್ಕ್ರ್ಯಾಪ್ ರಬ್ಬರ್ ಬೆಲೆಗಳೂ ಸಹ ಸ್ಥಿರವಾಗಿವೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading