ಮೂಡಬಿದಿರೆಯಲ್ಲಿ ಇಂದು ದಕ್ಷಿಣಕನ್ನಡ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026 –  ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ನ ಎರಡು ತಂಡಗಳು ಭಾಗಿ

. . . . . . . . .

. . . . . . .

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೆಶನ್ (ರಿ) ಮಂಗಳೂರು ಮತ್ತು ಮೂಡಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಇಂದು ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ದ ಕ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026 ಪಂದ್ಯಾವಳಿಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ಇದರ ಪುರುಷರ ಒಂದು ತಂಡ ಮತ್ತು ಮಹಿಳೆಯರ ಒಂದು ತಂಡ ಭಾಗವಹಿಸಲಿದ್ದು, ಎರಡೂ ತಂಡಗಳಿಗೆ ಇಂದು ಕಲರ್ಸ್ ಹಸ್ತಾಂತರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯದ ಕೆವಿಜಿ ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು.

ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ಇದರ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಎನ್ ಜಯಪ್ರಕಾಶ್ ರೈ ಮಾತನಾಡಿ ಭಾಗವಹಿಸುವ ತಂಡದ ಸದಸ್ಯರಿಗೆ ಕ್ರೀಡೆಯಲ್ಲಿ ಶಿಸ್ತು, ಮತ್ತು ಸಂಘಟಿತ ಸ್ಪರ್ಧೆಗೆ ಮಹತ್ವ ನೀಡುವಂತೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಎಸ್ ಸಂಶುದ್ದಿನ್ ಶುಭ ಹಾರೈಸಿದರು.
ಕಲರ್ಸ್ ಕೊಡುಗೆ ನೀಡಿದ ಶ್ರೀ ದೇವಿ ಸ್ಟ್ರೈಕರ್ಸ್ ದೊಡ್ಡಡ್ಕದ ರಕ್ಷಿತ್ ದೊಡ್ಡಡ್ಕ, ಉದ್ಯಮಿ ಜಗದೀಶ್ ಸರಳಿಕುಂಜ ಕಲರ್ಸ್ ಹಸ್ತಾಂತರಿಸಿದರು.
ತಾಲೂಕು ವಾಲಿಬಾಲ್ ವಾಲಿಬಾಲ್ ಅಸೋಸಿಯೇಶನ್ (ರಿ) ಇದರ ಪದಾಧಿಕಾರಿಗಳಾದ ಕೆ ಎಂ ಮುಸ್ತಫಾ, ಕೆ ಬಿ ಇಬ್ರಾಹಿಂ, ನಿತಿನ್ ಕೆ ಆರ್, ಕೆ ಗೋಕುಲ್ ದಾಸ್, ರಜ್ಜು ಭಯ್ಯ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ರಾಜು ಪಂಡಿತ್, ಪ್ರಭಾಕರ ನಾಯರ್ ಮಧುವನ ಹಾಗೂ ವಾಲಿಬಾಲ್ ತಂಡಗಳ ಕ್ರೀಡಾಪಟುಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading