ಕಲ್ಮಕಾರು : ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ; ಏ.09ರಂದು ನಡೆಯಲಿದೆ “12 ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ” ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮ

ಕಲ್ಮಕಾರು ಗ್ರಾಮದ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಏ.09 ಗುರುವಾರದಂದು “12ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ”ವು ನೆರವೇರಲಿದ್ದು, ಬೆಳಿಗ್ಗೆ 8:00 ಗಂಟೆಗೆ ಗಣಪತಿ ಹವನ, ಬೆಳಿಗ್ಗೆ 9:30ಕ್ಕೆ ಸಾಮೂಹಿಕ ಪ್ರಾರ್ಥನೆ, ಪೂರ್ವಾಹ್ನ 11:00 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಮದ್ಯಾಹ್ನ 12:30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆದು ಮದ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 7:00 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ.
ಈ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾ.23ರಂದು ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭದಲ್ಲಿ ಭಜನಾ ಮಂದಿರದ ಅರ್ಚಕರಾದ ಶಿವರಾಮ, ಅಧ್ಯಕ್ಷರಾದ ಸತೀಶ್.ಟಿ.ಎನ್, ಭಜನಾ ಮಂಡಳಿ ಅಧ್ಯಕ್ಷರಾದ ವಿಶ್ವನಾಥ ಕೊಮ್ಮೆಮನೆ, ಆಡಳಿತ ಸಮಿತಿಯ ಸದಸ್ಯರಾದ ಡ್ಯಾನಿ ಯಳದಾಳು, ವೀಣಾ ಬಿಳಿಮಲೆ, ಪೂಜಿತಾ.ಎಂ, ಭಜನಾ ಮಂಡಳಿಯ ಸದಸ್ಯರಾದ ತಾರಾ ಬೇರಿಕೆ ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading