ಕುಕ್ಕೆ ದೇವಳದಲ್ಲಿ ಶ್ರದ್ಧಾ ಭಕ್ತಿಯ ವರಮಹಾಲಕ್ಷ್ಮಿ ಪೂಜೆ

ಸುಬ್ರಹ್ಮಣ್ಯ : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಒಳಪಟ್ಟ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಪ್ರಕಾರವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ಸಹಸ್ರಾರು ಭಕ್ತರು ವೃತದಲ್ಲಿ ಭಾಗವಹಿಸಿ ಲಕ್ಷ್ಮಿ ಕೃಪೆಗೆ ಪಾತ್ರರಾದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶೃಂಗೇರಿ ಮಠದಲ್ಲಿ ವರಮಹಾಲಕ್ಷ್ಮಿ ಪೂಜೆಯು ಪುರೋಹಿತ ಪ್ರಸನ್ನ ಹೊಳ್ಳ ನೇತೃತ್ವದಲ್ಲಿ ನಡೆಯಿತು.
ಶ್ರೀ ದೇವಳದ ನೌಕರರ ವೃಂದ ಸೇರಿದಂತೆ ಊರ ಮತ್ತು ಪರವೂರ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಯಮುನಾ ಪೂಜೆ : ಆರಂಭದಲ್ಲಿ ಮಾತೆಯರು ಕಲಶದೊಂದಿಗೆ ದರ್ಪಣತೀರ್ಥ ನದಿಗೆ ತೆರಳಿದರು. ಅಲ್ಲಿ ಪುರೋಹಿತರು ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು. ಅಲ್ಲದೆ ನದಿಗೆ ಹಾಲು ಮತ್ತು ಯಮುನೆಗೆ ಪಂಚಾಮೃತ ಸಮರ್ಪಿಸಲಾಯಿತು. ಬಳಿಕ ಪುರೋಹಿತರು ಯಮುನೆಗೆ ಪೂಜೆ ಮಾಡಿದರು. ಬಳಿಕ ಪುರೋಹಿತರು ಕಲಶದಲ್ಲಿ ಯಮುನೆಯನ್ನು ತುಂಬಿಕೊಂಡರು.
ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಮೆರವಣಿಗೆಯೊಂದಿಗೆ ಯಮುನೆಯನ್ನು ಶೃಂಗೇರಿ ಮಠಕ್ಕೆ ಸಾಂಪ್ರದಾಯಿಕವಾಗಿ ತರಲಾಯಿತು. ತದನಂತರ ಶೃಂಗೇರಿ ಮಠದಲ್ಲಿ ಯಮುನೆಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಪುರೋಹಿತ ಪ್ರಸನ್ನ ಹೊಳ್ಳ ಪೂಜೆ ನೆರವೇರಿಸಿದರು.
ಭಕ್ತರಿಗೆ ಪ್ರಸಾದ ವಿತರಣೆ : ನಂತರ ಸರ್ವರಿಗೂ ಪ್ರಸಾದ ವಿತರಿಸಲಾಯಿತು. ಪ್ರಸಾದದೊಂದಿಗೆ ಶ್ರೀ ದೇವಳದ ವತಿಯಿಂದ ಕುಂಕುಮ, ಬಳೆ, ರವಿಕೆ ಕಣವನ್ನು ಸಹಸ್ರಾರು ಮಹಿಳಾ ಭಕ್ತರಿಗೆ ವಿತರಿಸಲಾಯಿತು.
ಪೂಜೆಯ ವೇಳೆ ಶ್ರೀ ದೇವಳದ ನೌಕರರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್ ಇಂಜಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ ಸೇರಿದಂತೆ ದೇವಳದ ಎಲ್ಲಾ ಮಹಿಳಾ ಸಿಬ್ಬಂದಿಗಳು, ನೌಕರ ವೃಂದ, ಊರ ಮತ್ತು ಪರವೂರ ಭಕ್ತರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading