ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ರವರಿಗೆ ಸನ್ಮಾನ

ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ(ರಿ.) ಬೆಂಗಳೂರು ಸುಳ್ಯ ತಾಲೂಕು ಇದರ ವತಿಯಿಂದ ಜು.05 ರಂದು ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಸುಮಾರು 31 ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ, ಅಂತಿಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀಮತಿ ಹೇಮಲತಾ.ಎಸ್ ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಹಾಗೂ ತಾಲೂಕು ಘಟಕದ ಖಜಾಂಜಿ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ತಾಲೂಕು ಘಟಕದ ಅಧ್ಯಕ್ಷರಾದ ದೇವರಾಜ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.
ತಾಲೂಕು ಘಟಕದ ಕಾರ್ಯದರ್ಶಿ ಶ್ರೀಮತಿ ಸುನಂದಾ ಸನ್ಮಾನ ಪತ್ರ ವಾಚಿಸಿ ಶುಭ ಹಾರೈಸಿದರು.
ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೀಣಾ.ಕೆ ಹಾಗೂ ಶ್ರೀಮತಿ ಸುನಂದಾ ಇವರು ನಿವೃತ್ತ ಶಿಕ್ಷಕಿ ಯವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹೂವು, ಹಾರ, ಫಲ, ತಾಂಬೂಲ, ಅರಿಶಿನ-ಕುಂಕುಮ ಹಾಗೂ ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೇಮಲತಾ ರವರ ಪತಿ ನಿವೃತ್ತ ಶಿಕ್ಷಕರಾದ ಲೋಕನಾಥ್.ಬಿ.ಕೆ ಇವರನ್ನು ತಾಲೂಕು ಘಟಕದ ಅಧ್ಯಕ್ಷರು ಹಾಗೂ ತಾಲೂಕು ಘಟಕದ ಜೊತೆ ಕಾರ್ಯದರ್ಶಿ ಅರುಣ್ ಕುಮಾರ್ ಸನ್ಮಾನಿಸಿದರು.
ಸನ್ಮಾನದ ಬಳಿಕ ನಿವೃತ್ತ ಶಿಕ್ಷಕರು ತಾವು ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿ ತಮ್ಮ ಕುಟುಂಬ ವರ್ಗದವರ, ಇಲಾಖೆಯ, ಶಾಲಾ ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ, ಊರ ವಿದ್ಯಾಭಿಮಾನಿಗಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರ ಹಾಗೂ ಸರ್ವಸದಸ್ಯರ ಸಹಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಹೇಮಲತಾ ರವರ ಅತ್ತೆ ಲೋಕನಾಥ್ ರವರ ತಾಯಿಯವರಾದ ಸುಮಾರು 95 ವರ್ಷದ ಶ್ರೀಮತಿ ಪಾರ್ವತಿ.ಕೆ.ಎನ್, ಭಾವನ ಪತ್ನಿ ಶ್ರೀಮತಿ ಭುವನೇಶ್ವರಿ ದಯಾನಂದ, ಮೈದುನನ ಪತ್ನಿ ಶ್ರೀಮತಿ ಗೀತಾ ಗಣೇಶ್.ಬಿ.ಕೆ, ಮಗ ಕೌಶಿಕ್.ಕೆ.ಎಲ್, ಮೈದುನನ ಮಗ ಪ್ರತೀಕ್.ಬಿ.ಕೆ, ಅಣ್ಣ ಶಿವರಾಂ, ಅತ್ತಿಗೆ ಶ್ರೀಮತಿ ನಳಿನಿ ಶಿವರಾಂ ಉಪಸ್ಥಿತರಿದ್ದರು. ಸನ್ಮಾನ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಉತ್ತಮ ರೀತಿಯಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading