Ad Widget

ನವೀನ್ ಚಾತುಬಾಯಿಯವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಸಮಗ್ರ ಕೃಷಿಕ ಪ್ರಶಸ್ತಿ

        ಸುಳ್ಯ ತಾಲೂಕು  ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿಯವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಲ್ಯೂಮ್ನಿ ಎಸೋಸಿಯೇಷನ್ ವತಿಯಿಂದ 2023-24ನೇ ಸಾಲಿಗೆ ನೀಡುವ ಡಾ.ಜಿ.ಕೆ. ವೀರೇಶ್ ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ ದೊರೆತಿದೆ.    ಏ.4ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮತ್ತು...

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಎಸ್ ಸಿ ಮೋರ್ಚಾದ ಪ್ರಮುಖರ ಸಭೆ

2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಸಂಘಟನಾತ್ಮಕವಾಗಿ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪಕ್ಷದ ಬಲವರ್ಧನೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ ಸಿ ಮೋರ್ಚಾದ ಪ್ರಮುಖರ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಏಪ್ರಿಲ್ 6 ರಂದು ಬಿಜೆಪಿ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಮತ್ತು ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ...
Ad Widget

ಎಲಿಮಲೆ : ದುಶ್ಚಟಗಳಿಂದ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಕುರಿತು ಮಾದರಿ ಪ್ರದರ್ಶನ

ಆಯುಷ್ಮಾನ್ ಆರೋಗ್ಯ ಮಂದಿರ ಎಲಿಮಲೆ ಪ್ರಾರ್ಥಮಿಕ ಹಿರಿಯ ಪ್ರಾಥಮಿಕ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ಏ. 05 ರಂದು ಆರೋಗ್ಯಕರ ಜೀವನ, ಧೂಮಪಾನ &ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳು, ಸಮತೋಲನ ಆಹಾರ ಆರೋಗ್ಯ ಮಾದರಿಗಳನ್ನು ಪ್ರದರ್ಶಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಂಧ್ಯಾ,...

ಶತಾಯುಷಿ ನೀಲಮ್ಮ ಪಿಂಡಿಮನೆ ನಿಧನ

ಅರಂತೋಡು ಗ್ರಾಮದ ಅಡ್ತಲೆ ದಿl ಕೃಷ್ಣಪ್ಪ ಗೌಡ ಪಿಂಡಿಮನೆ ಯವರ ಧರ್ಮಪತ್ನಿ ಶತಾಯಿಷಿ ನೀಲಮ್ಮ ಪಿಂಡಿಮನೆ ಏ.04 ರಂದು ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.

ಮುರೂರು ಚೆಕ್ ಪೋಸ್ಟ್ ಬಳಿ ಒಂಟಿ ಸಲಗ ಪ್ರತ್ಯಕ್ಷ , ಚುಣಾವಣಾ ಕರ್ತವ್ಯ ನಿರತ ಅಧಿಕಾರಿಗಳು , ಜನತೆಗೆ ಆತಂಕ !

ಸುಳ್ಯ : ಸುಳ್ಯ ಕಾಸರಗೋಡು ಸಂಪರ್ಕಿಸುವ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಇದೀಗ ಒಂಟಿಸಲಗ ರಸ್ತೆಯಲ್ಲೆ ನಡೆದುಕೊಂಡು ಬಂದಿರುವ ಘಟನೆ ವರದಿಯಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತರ್ ರಾಜ್ಯ ಗಡಿಯಾದ ಮುರೂರು ಎಂಬಲ್ಲಿ ಚುನಾವಣಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಈ ಚೆಕ್ ಪೋಸ್ಟ್ ನ ಕೂಗಳತೆ ದೂರದಲ್ಲಿ ಒಂಟಿಸಲಗವು ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದು ಇದೀಗ ಒಂಟಿ...

ಹರಿಹರ ಪಲ್ಲತ್ತಡ್ಕದಲ್ಲಿ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರ ಉದ್ಘಾಟನೆ

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಏಳು ದಿನಗಳ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸಾ ಶಿಬಿರವನ್ನು ಸಹಕಾರಿ ಸಂಘದ ನಿರ್ದೇಶಕರಾದ ವಿನುಪ್ ಮಲ್ಲಾರ ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ನಿರ್ದೇಶಕರುಗಳಾದ ವಿಜಯ.ಕೆ.ಎಸ್ ಮತ್ತು ವಿಜಯ.ಕೆ.ಜೆ.ಯವರು ಹಾಗೂ ಆಯೋಜಕರಾದ ಲೋಕೇಶ ಪೀರನಮನೆ, ಚಿಕಿತ್ಸಕರಾದ ಚಂದನ್ ಶಿವಮೊಗ್ಗ ಮತ್ತು ಸಹಕಾರಿ...

ಇತಿಹಾಸ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಪ್ರಸನ್ನ ಎನ್.ಎಚ್. ಆಯ್ಕೆ

ದ.ಕ.ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಳ್ಯ ಶಾರದಾ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಸನ್ನ ಎನ್.ಎಚ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಸಂಘದ ಅಧ್ಯಕ್ಷ ರಾಮಚಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ಮಂಗಳೂರಿನ ಬಿಇಎಂ ಪದವಿಪೂರ್ವ ಕಾಲೇಜಿನ ಐತಪ್ಪ ಎಂ. ನೇಮಕಗೊಂಡರು.ಉಳಿದಂತೆ ಕಾಟಿಪಳ್ಳ ಸರಕಾರಿ ಕಾಲೇಜಿನ...

ಸುಳ್ಯ : ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಕಮ್ಯುನಿಸ್ಟ್ , ಆಮ್ ಆದ್ಮಿ ಬೆಂಬಲ – ಇಂಡಿಯಾ ಒಕ್ಕೂಟ

ವಿಪಕ್ಷಗಳ ಸದ್ದಡಗಿಸುವ ಕೆಲಸ ಕಾರ್ಯಗಳನ್ನು ಮೋದಿ ಸರಕಾರ ಮಾಡುತ್ತಿದೆ- ಪಿಸಿ ಜಯರಾಮ್ //  ಬಿಟ್ಟಿ ಭಾಗ್ಯವೆಂದವರು ನಿಮ್ಮ ಬಳಿ ಬಂದಾಗ ಗೃಹಲಕ್ಷ್ಮಿ , ಗೃಹ ಜ್ಯೋತಿ ,ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ನೀವು ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿ - ಭರತ್ ಮುಂಡೋಡಿ ಸುಳ್ಯ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಆಯ್ಕೆಯದ...

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಹಾಗೂ ಸಾವಿರಾರು ಮಂದಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಸಾಗಿ ದ.ಕ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎ.4ರಂದು ತಮ್ಮ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಮಂಗಳೂರಿನ ಬಿಜೆಪಿ ಚುನಾವಣಾ ಕಾರ್ಯಾಲಯದಿಂದ ತೆರೆದ ವಾಹನದಲ್ಲಿ ಮೆರವಣಿಗೆಯ...

ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಮಾತೃ ಸಮಿತಿ ವತಿಯಿಂದ ಸಮವಸ್ತ್ರ ವಿತರಣೆ.

ಮಂಡೆಕೋಲು ಶ್ರೀ ಮಹಾವಿಷ್ಣು ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಮಾತೃ ಸಮಿತಿ ವತಿಯಿಂದ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು . ಬ್ರಹ್ಮ ಕಲಶದ ಹಿನ್ನಲೆಯಲ್ಲಿ ಸುಮಾರು 537 ಮಂದಿ ಮಹಿಳೆಯರಿಗೆ ಸಮವಸ್ತ್ರವನ್ನು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಾತೃ ಸಮಿತಿ ಸಂಚಾಲಕರಾದ ವಿನುತ ಪಾತಿಕಲ್ಲು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ವ್ಯವಸ್ಥಪನ ಸಮಿತಿ ಅಧ್ಯಕ್ಷರಾದ ಕೇಶವಮೂರ್ತಿ ಹೆಬ್ಬಾರ್ , ಜೀರ್ಣೋದ್ಧಾರ...
Loading posts...

All posts loaded

No more posts

error: Content is protected !!