Ad Widget

ಪರಿವಾರಕಾನ ಹೋಟೆಲ್ ಉಡುಪಿ ಗಾರ್ಡನ್ ಮುಂಬಾಗಲ್ಲಿ ಗುಡ್ಡಕ್ಕೆ ಬೆಂಕಿ , ಆಗ್ನಿಶಾಮಕ ದಳ ಆಗಮನ.

ಸುಳ್ಯ ಪರಿವಾರಕಾನದ ಬಳಿಯಲ್ಲಿ ರಿಕ್ಷಾ ಗ್ಯಾರೆಜ್ ಹಿಂಬಾಗದಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಇದೀಗ ವರದಿಯಾಗಿದೆ . ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿದ್ದು ಅಗ್ನಿಶಾಮಕ ದಳದವರ ಜೊತೆಗೆ ಪ್ರಗತಿ ಆಂಬುಲೆನ್ಸ್ ಚಾಲಕ ಅಚ್ಚು ಬೆಂಕಿ ನಂದಿಸಲು ಸಹಕರಿಸುತ್ತಿದ್ದಾರೆ ಎಂದು ಸ್ಥಳೀಯರಿಂದ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 146.01 ಕೋಟಿ ರೂ – ಆದಾಯದಲ್ಲಿ ರಾಜ್ಯಕ್ಕೆ ನಂಬರ್ ವನ್

ಸುಬ್ರಹ್ಮಣ್ಯ: ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ ಆದಾಯ ಗಳಿಸಿದೆ. 2023 ಎಪ್ರೀಲ್‌ನಿಂದ 2024 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ...
Ad Widget

ಪಂಜ : ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗೌರವ ಸಲಹೆಗಾರರಾಗಿ ನೇಮಕಗೊಂಡವರಿಗೆ ಗೌರವಾರ್ಪಣೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾಗಿ ನೇಮಕಗೊಂಡ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ ಹಾಗೂ ಪರಮೇಶ್ವರ ಬಿಳಿಮಲೆ ಯವರಿಗೆ ಶ್ರೀ ದೇಗುಲದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ‌ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂ‌ರ್, ಪ್ರಧಾನ ಅರ್ಚಕರಾದ ರಾಮಚಂದ್ರ ಬಟ್, ವ್ಯವಸ್ಥಾಪನಾ ಸಮಿತಿ...

ಪಂಜ : ಫೂಟ್ ಫಲ್ಸ್ ಥೆರಪಿ ಶಿಬಿರ ಉದ್ಘಾಟನೆ

ಪಂಜದ ಸಂತ ರೀತಾ ಚರ್ಚ್, ಲಯನ್ಸ್ ಕ್ಲಬ್ ಪಂಜ ಹಾಗೂ ಜೆಸಿಐ ಪಂಜ ಪಂಚಶ್ರೀ ಘಟಕ ಮತ್ತು ಕಂಪಾನಿಯೋನೆಮ್ಮದಿ ವೆಲ್‌ನೆಸ್‌ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ ಪಂಜ ಸಂತ ರೀತಾ ಚರ್ಚ್ ಹಾಲ್‌ನಲ್ಲಿ ಎ.7ರಂದು ನಡೆಯಿತು. ಪಂಜ ಶ್ರೀ ಪರಿವಾರಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂರು ಶಿಬಿರವನ್ನು...

ಕಾಂತಮಂಗಲ : ಖಾಸಗಿಯವರ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿ – ಸಂಭಾವ್ಯ ಅಪಾಯ ತಪ್ಪಿಸಿದ ಅಗ್ನಿಶಾಮಕದಳ

ಕಾಂತಮಂಗಲದಲ್ಲಿರುವ ಬಾಡಿಗೆ ಮನೆಗಳಿರುವ ಸಂಕೀರ್ಣದ ಹಿಂಬದಿ ಜಾಗದಲ್ಲಿದ್ದು ಕಸ ಹಾಗೂ ಒಣಗಿದ ಹುಲ್ಲುಗಳಿಗೆ ಬೆಂಕಿ ತಗುಲಿದ ಘಟನೆ ಇಂದು ಸಂಜೆ ನಡೆದಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.

ಪೈಕ : ಭಾರಿ ಗಾಳಿ, ಮನೆಗೆ ಹಾನಿ

ಗುತ್ತಿಗಾರಿನ ಪೈಕ ಎಂಬಲ್ಲಿ ಇಂದು ಬೀಸಿದ ಭಾರಿ ಗಾಳಿಯಿಂದ ಮಾಲತಿ ಎಂಬ ಮಹಿಳೆಯ ಮನೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಗುಡಿಸಲು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ , ಪಿಡಿಓ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಟಿಯು ಬೆಳಗಾವಿ ಇದರ ಬೋರ್ಡ್ ಆಫ್ ಎಕ್ಸಾಮಿನರ್ಸ್ ಆಗಿ ಕೆವಿಜಿಸಿ ಯಿಂದ ಆಯ್ಕೆ

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ಸುರೇಶ ವಿ ಹಾಗೂ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ ಭಾಗ್ಯಜ್ಯೋತಿ ಕೆ. ಎಲ್ ಅವರು ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಮೈನರ್ ಡಿಗ್ರಿ ಸರ್ಟಿಫಿಕೇಷನ್ ಅಂಡ್ ಸ್ಕಿಲ್ ಎನ್ಹ್ಯಾನ್ಸ್ಮೆಂಟ್ ಪ್ರೊಗ್ರಾಮ್ ಇದರ ಬೋರ್ಡ್ ಆಫ್ ಎಕ್ಸಾಮಿನರ್ಸ್ ಆಗಿ ನಾಮನಿರ್ದೇಶನಗೊಳಿಸಿ ವಿಟಿಯು ಬೆಳಗಾವಿ ಆದೇಶಿಸಿದೆ. ಇದಕ್ಕೆ ಕಾಲೇಜಿನ...

ಅಮರ ಸುಳ್ಯ ಸುದ್ದಿ ಯುಗಾದಿ ವಿಶೇಷಾಂಕ ನಾಳೆ (ಎ.08) ಬಿಡುಗಡೆ

ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದ ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿರುವ ಅಮರ ಸುಳ್ಯ ಸುದ್ದಿ ವಾರಪತ್ರಿಕೆ ಮೂರನೇ ವರ್ಷದ ಯುಗಾದಿ ವಿಶೇಷಾಂಕವನ್ನು ಹೊರತಂದಿದೆ. ಏ. 08 ರಂದು ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಇವರ ಉಪಸ್ಥಿತಿಯಲ್ಲಿ ಯುಗಾದಿ ವಿಶೇಷಾಂಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ...

ಮಂಡೆಕೋಲು ಮಹಿಳೆ ನೇಣುಬಿಗಿದು ಆತ್ಮಹತ್ಯೆ .

ಸುಳ್ಯ: ಸುಳ್ಯ ತಾಲೂಕಿನ ಮಂಡಕೋಲು ಗ್ರಾಮದ ಮಹಿಳೆಯೋರ್ವರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಇಂದಿರ 74 ಎಂದು ತಿಳಿದು ಬಂದಿದ್ದು ಇವರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಗಲಿದ್ದಾರೆ. ಆತ್ಮಹತ್ಯೆಗೆ ಮೊಣಕಾಲಿನ ಚಿಪ್ಪು ನೋವು ಮತ್ತು ಮೂರು ವರ್ಷಗಳ ಹಿಂದೆ ಪತಿಯ ಮರಣ...

ಜರ್ಮನಿಯ ಬರ್ಲಿನ್ ನಲ್ಲಿ ನಡೆಯುವ ವಿಕಿಮೀಡಿಯ ಸಮಿತ್‌ 2024ಕ್ಕೆ ಆಯ್ಕೆಯಾದ ಭರತೇಶ್ ಅಲಸಂಡೆಮಜಲು

ಜರ್ಮನಿಯ ಬರ್ಲಿನ್‌ನಲ್ಲಿ ಎ.19 ರಿಂದ 22 ರವರೆಗೆ ನಡೆಯಲಿರುವ ವಿಕಿಮೀಡಿಯ ಸಮಿತ್‌ 2024ಕ್ಕೆ ಅರೆಬಾಸೆ ಅಕಾಡೆಮಿ ಮಾಜಿ ಸದಸ್ಯ ಭರತೇಶ್ ಅಲಸಂಡೆಮಜಲು ಅಯ್ಕೆಯಾಗಿದ್ದಾರೆ. ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸಕ್ರೀಯ ಸದಸ್ಯರಾದ ಇವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಸಮ್ಮಿಳನವನ್ನು ಪ್ರತಿನಿಧಿಸಲಿದ್ದಾರೆ. ಈ ವಿಕಿಮೀಡಿಯನ್‌ ಸಮಿತ್‌ನಲ್ಲಿ 100ಕ್ಕಿಂತ ಹೆಚ್ಚು ದೇಶಗಳ 150ಕ್ಕಿಂತ...
Loading posts...

All posts loaded

No more posts

error: Content is protected !!