Ad Widget

ಸುಳ್ಯ : ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ – ಬಡ ರೋಗಿಗಳ ಪಾಡೇನು – ಜನಪ್ರತಿನಿಧಿಗಳೇ, ಅಧಿಕಾರಿಗಳೇ ಆಸ್ಪತ್ರೆ ಕಡೆಗೆ ಒಮ್ಮೆ ಇಣುಕಿ ನೋಡಿ!!!!

ನಿರಂತರವಾಗಿ ಎಂಟು ವರ್ಷಗಳಿಂದ ಪ್ರಸೂತಿ ವೈದ್ಯರಿಲ್ಲದೇ ಖಾಸಗಿ ವೈದ್ಯರ ಮೊರೆ ಹೋಗುತ್ತಿರುವ ಸರಕಾರಿ ಆಸ್ಪತ್ರೆ

ಆಸ್ಪತ್ರೆಯಲ್ಲಿ ನೌಕರರು ಎಷ್ಟಿರಬೇಕು ಹಾಗೂ ಇದೀಗ ಇರುವ ನೌಕರರ ಸಂಖ್ಯೆ ಗೊತ್ತಾ? ಹಾಗಿದ್ದರೆ ಈ ವರದಿಯನ್ನೊಮ್ಮೆ ನೋಡಿ!

ಸುಳ್ಯ : ಸುಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವಾಗಿ ಮಾಜಿ ಸಚಿವರು ಶಾಸಕರಾದ ಎಸ್ ಅಂಗಾರರ ಮುತುವರ್ಜಿಯಲ್ಲಿ ಚಾಲನೆ ನೀಡಲಾಗಿತ್ತು. ಹಂತ ಹಂತವಾಗಿ ಅಭಿವೃದ್ಧಿಗೊಂಡು ಎಲ್ಲಾ ಉಪಕರಣಗಳ ಸಹಿತ ಸುಸಜ್ಜಿತವಾದ ಕಟ್ಟಡ ರಚನೆಯಾಗಿದೆ. ಆದರೇ ಸರಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಸಿಬ್ಬಂದಿಗಳಿಲ್ಲದೇ ನಲುಗುತ್ತಿದೆ.

ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ಸಿಗಬೇಕಾದರೇ ಸಿಬ್ಬಂದಿಗಳ ಅಗತ್ಯತೆಯೇ ಮುಖ್ಯ.ಆದರೇ ಇಲ್ಲಿ ಮುಖ್ಯವಾಗಿ ಪ್ರಸೂತಿ ತಜ್ಞರೇ ಇಲ್ಲ. ಅಲ್ಲದೇ ಇಲ್ಲಿ ಡಿ ದರ್ಜೆ ನೌಕರರ ವೇತನ ಬಾರದ ಹಿನ್ನಲೆಯಲ್ಲಿ ಅವರು ಗೈರಾಗಿದ್ದು ಇದೀಗ ಇಲ್ಲಿ ಎಲ್ಲವು ಅಸ್ತವ್ಯಸ್ತವಾಗುವ ಸೂಚನೆ ಕಾಣುತ್ತಿದೆ.

ಖಾಯಂ ಪ್ರಸೂತಿ ವೈಧ್ಯರ ಕೊರತೆ ನೀಗಿಸುತ್ತಿಲ್ಲ ಸರಕಾರ.

ಕಳೆದ ಎಂಟು ವರ್ಷಗಳಿಂದ ಸುಳ್ಯದ ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸರ್ಜನ್ ಹುದ್ದೆಗಳು ಖಾಲಿಯಾಗಿದ್ದು ಸರಕಾರವು ಬಡವರಿಗೆ ಮತ್ತು ಜನತೆಗೆ ಉಚಿತ ಚಿಕಿತ್ಸೆಗಾಗಿ ಕೋಟ್ಯಂತರ ಅನುದಾನಗಳನ್ನು ಮೀಸಲಿರಿಸಿದಾಗ ಇಲ್ಲಿ ಚಿಕಿತ್ಸೆ ನೀಡಲು ನುರಿತ ತಜ್ಞ ವೈಧ್ಯರನ್ನು ನೇಮಕ ಮಾಡಬೇಕೆನ್ನುವ ಕನಿಷ್ಠ ಜ್ಞಾನವು ಇಲ್ಲದಂತಾಗಿದ್ದು, ವೈದ್ಯರ ಕೊರತೆ ಎದ್ದು ಕಾಣುತ್ತಿದೆ

ಪ್ರಸೂತಿ ವೈದ್ಯರಿಲ್ಲದೆ ಸುಳ್ಯ ಸರಕಾರಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು ಹೆರಿಗೆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಇದ್ದಲ್ಲಿ ಖಾಸಗಿ ವೈಧ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ .

ಆಸ್ಪತ್ರೆಯ ವೈದ್ಯರುಗಳು ಮತ್ತು ಸಿಬ್ಬಂದಿಗಳ ವಿವರ .

ಒಟ್ಟು ಆಸ್ಪತ್ರೆಯಲ್ಲಿ 13 ವೈದ್ಯರ ಅವಶ್ಯಕತೆ ಇದ್ದು ಇಲ್ಲಿ ಎರಡು ಹುದ್ದೆಗಳು ಖಾಲಿ ಉಳಿದಿದೆ. ಮುಖ್ಯವಾಗಿ ಸ್ತ್ರೀ ರೋಗ ತಜ್ಞರು ಮತ್ತು ಸರ್ಜನ್ ಕೊರತೆ ಇದೆ. ಅಲ್ಲದೇ ಕಛೇರಿ ಸಿಬ್ಬಂದಿಗಳ ಸಂಖ್ಯೆ ಒಟ್ಟು 6 ಬೇಕು. ಆದರೇ ಇದೀಗ ಕೆಲಸ ನಿರ್ವಹಣೆ ಮಾಡುತ್ತಿರುವುದು ಇಬ್ಬರು ಮಾತ್ರ. ನಾಲ್ಕು ಹುದ್ದೆಗಳು ಖಾಲಿಯಾಗಿವೆ. ಅಲ್ಲದೇ ಡಿ ದರ್ಜೆ ನೌಕರರು ಒಟ್ಟು 30 ಬೇಕಿದೆ. ಆದರೆ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಕೇವಲ 20 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಗೊಳಿಸಲು ಅವಕಾಶ ಕಲ್ಪಿಸಿದ್ದರು. ಅದರಂತೆ 20 ಜನರನ್ನು ನೇಮಕ ಮಾಡಲಾಗಿದೆ. ಅದರಲ್ಲಿ 17 ಮಂದಿ ನೌಕರರು ಮಾತ್ರ ಹಾಜರಾಗುತ್ತಿದ್ದು ಸರಿಯಾಗಿ ವೇತನ ಪಾವತಿ ಆಗದ ಹಿನ್ನಲೆಯಲ್ಲಿ ಮೂವರು ನೌಕರರು ಕೆಲ ತಿಂಗಳುಗಳಿಂದ ಬರುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಆಡಳಿತಾಧಿಕಾರಿಗಳಲ್ಲಿ ವಿಚಾರಿಸಿದಾಗ ಮಾರ್ಚ್ ತಿಂಗಳ ವೇತನ ಬಾಕಿ ಉಳಿದಿದೆ ಅಷ್ಟೇ ಎಂದು ಹೇಳಿದರು. ಈ ಮಧ್ಯೆ ಓರ್ವರು ಮಾರ್ಚ್ ನಲ್ಲಿ ನಿವೃತ್ತಿ ಹೊಂದಿದ್ದು ಇನ್ನೊರ್ವ ಅಡುಗೆಯವರು ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ .

ಇಲ್ಲಿನ ಸಮಸ್ಯೆಗಳ ಕುರಿತು ನಿರಂತರವಾಗಿ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತರುತ್ತಿದ್ದರೂ ವಿಶಾಲವಾದ ಕಟ್ಟಡ ಮತ್ತು ಸಲಕರಣೆಗಳು ಇದ್ದು ಅವುಗಳನ್ನು ಕಾರ್ಯನಿರ್ವಹಿಸಲು ಬೇಕಾಗುವ ಮಾನವ ಸಂಪನ್ಮೂಲ ಒದಗಿಸದೇ ಇರುವುದು ಶೋಚನೀಯವೇ ಸರಿ . ಇನ್ನಾದರೂ ಆರೋಗ್ಯ ಇಲಾಖೆ, ಶಾಸಕರು ಹಾಗೂ ಸಚಿವರು ಎಚ್ಚೆತ್ತು ಸುಳ್ಯದ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವರೇ ಎಂದು ಕಾದು ನೋಡಬೇಕಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!