Ad Widget

ಐನೆಕಿದು : ಮನೆಯೊಂದಕ್ಕೆ ನಕ್ಸಲರ ಭೇಟಿ – ಊಟ ಹಾಗೂ ಅಕ್ಕಿ ಕೇಳಿ ಕೊಂಡೊಯ್ದ ನಕ್ಸಲರು

ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ ಎಂಬವರ ಮನೆಗೆ ಮಾ.23ರಂದು ಸಂಜೆ ನಾಲ್ವರು ನಕ್ಸಲರು ಬಂದು ಊಟ ಹಾಗೂ ಅಕ್ಕಿ ಕೇಳಿ ಪಡೆದುಕೊಂಡು ಹೋದರೆಂದು ತಿಳಿದುಬಂದಿದೆ. ಇದೀಗ ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ

ಅಶೋಕ ಎಂಬವರ ಮನೆಗೆ ಬಂದ ಅವರು ನಾವು ಯಾರು ಗೊತ್ತಾಯಿತ ಎಂದು ಕೇಳಿ, ಮನೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಮೊಬೈಲ್ ಚಾರ್ಚ್ ಮಾಡಿಸಿ ತೆರಳಿರುವುದಾಗಿ ತಿಳಿದು ಬಂದಿದೆ. ಬಂದೂಕು ಹಿಡಿದವರೂ ದೂರದಲ್ಲಿ ನಿಂತಿದ್ದರೆನ್ನಲಾಗಿದೆ.

ಕೂಜುಮಲೆ ಎಸ್ಟೇಟ್ ನಲ್ಲಿ ನಕ್ಸಲರು ಪತ್ತೆಯಾದ ಬಳಿಕ ಈ ಭಾಗದಲ್ಲಿ ನಕ್ಸಲ್ ನಿಗ್ರಹ ದಳದವರು ಐನೆಕಿದು, ಬಾಳುಗೋಡು, ಕಲ್ಮಕಾರು ಭಾಗದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ. ತೋಟದ ಮಜಲಿಗೆ ನಕ್ಸಲರು ಬಂದ ವಿಷಯ ತಿಳಿದ ಕೂಡಲೇ ಎ.ಎನ್.ಎಫ್ ಬಂದು ಕೂಂಬಿಂಗ್ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!